ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರೈತ-ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮಾರ್ಚ್ 28 ರಂದು ತಾಲೂಕುಗಳಲ್ಲಿ ಹಾಗೂ ಮಾರ್ಚ್. 29 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ (Freedom Park) ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಮೂರು ದಿನಗಳ ಜನ ಪರ್ಯಾಯ ಬಜೆಟ್ ಅಧಿವೇಶನದ ಸಮಾರೋಪದಲ್ಲಿ ಮಾತನಾಡಿದ ರೈತಮುಖಂಡ ಬಡಗಲಪುರ ನಾಗೇಂದ್ರ, ಕೇಂದ್ರ ಸರ್ಕಾರ (Central Govt) ರೈತ ಹೋರಾಟದ ಹಿನ್ನಲೆ ಮಸೂದೆ ವಾಪಾಸ್ ಪಡೆದಿದ್ದರೂ ರಾಜ್ಯ ಸರ್ಕಾರದಲ್ಲಿ (State Govt) ಮುಂದುವರಿಯುತ್ತಿದೆ. ರಾಜ್ಯ ಸರ್ಕಾರವು ಎಪಿಎಂಸಿ (APMC) ಕಾಯ್ದೆ ಮುಂದುವರಿಸುತ್ತಿದೆ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನೂ ಜಾರಿ ಮಾಡಿದೆ. ಈ ಮೂರೂ ಕೂಡಾ ರೈತ ವಿರೋಧಿ ಮಸೂದೆಗಳು ಎಂದು ಹೇಳಿದರು. 


ಇದನ್ನೂ ಓದಿ- ವಿಶ್ವದಲ್ಲಿ ಚಂಡಮಾರುತಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು ಗೊತ್ತಾ!?


ಎಂಎಸ್ ಪಿಯನ್ನು (MSP) ಜಾರಿ ಮಾಡಬೇಕು ಸೇರಿದಂತೆ 23 ಒತ್ತಾಯಗಳನ್ನು ಮುಂದಿಟ್ಟು ಮಾರ್ಚ್ 28 ಮತ್ತು ಮಾರ್ಚ್ 29 ರಂದು ಪ್ರತಿಭಟನೆ ನಡೆಸಲಾಗುತ್ತಿದೆ. ಈಗಲೂ ಸರ್ಕಾರ ನಮ್ಮ ಕೂಗಿಗೆ ಕಿವಿಗೊಡದಿದ್ದರೆ  ದೆಹಲಿ ಮಾದರಿಯ ದೊಡ್ಡ ಹೋರಾಟ ರೂಪಿಸಲಾಗುವುದು ಎಂದರು. 


ಇದನ್ನೂ ಓದಿ- ಹಿಂದೂ ದೇವಾಲಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಕ್ರಿಯೆಗೆ ಪ್ರತಿಕ್ರಿಯೆ ಎಂದ CT Ravi


ಪ್ರಮುಖ ಬೇಡಿಕೆಗಳು- 
>> ರೈತ ವಿರೋಧಿ ಮಸೂದೆಗಳನ್ನು (Anti-peasant bills) ವಾಪಾಸು ಪಡೆಯಬೇಕು
>> ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕು 
>> ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಮಾಡಬೇಕು
>> ಖಾಸಗಿ ಕೃಷಿ ಮಾರುಕಟ್ಟೆಗೆ ನೀಡಿರುವ ಪರವಾನಗಿ ರದ್ದಮಾಡಬೇಕು 
>> ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು
>> ಉದ್ಯೋಗ ಭದ್ರತೆ ಮತ್ತು ಕನಿಷ್ಠ 21 ಸಾವಿರ ವೇತನ ಸಿಗಬೇಕು 
>> ಮಹಿಳೆಯರು ಮತ್ತು ದಲಿತರ ಮೇಲಿನ ಹಿಂಸೆ ತಡೆಗಟ್ಟಬೇಕು
>> ಇದಕ್ಕಾಗಿ SCP-TSP ಅಭಿವೃದ್ಧಿ ನಿಧಿ ದುರ್ಬಳಕೆ ನಿಲ್ಲಿಸಬೇಕು 
>> ಸರ್ಕಾರಿ, ಅರಣ್ಯ ಭೂಮಿಯಲ್ಲಿ ಉಳುಮೆ ಅಥವಾ ವಾಸವಿರುವ ಎಲ್ಲಾ ಬಡವರಿಗೆ ಕೂಡಲೇ ಭೂಮಿ-ವಸತಿ ಮಂಜೂರು ಮಾಡಬೇಕು 
ವ>> ಿದ್ಯಾರ್ಥಿ ವಿರೋಧಿ NEP ರದ್ದಾಗಬೇಕು
>> ಬಗರುಕುಂ ಅರಣ್ಯ ಭೂಮಿಗಳ ಸಕ್ರಮ ಮನೆ ನಿವೇಶನ ಹಂಚಿಕೆ ಮಾಡಬೇಕು
>> ಗ್ರಾಮೀಣ ಉದ್ಯೋಗ ಖಾತರಿ , ನೀರಾವರಿ ಯೋಜನೆಗಳ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಒತ್ತಾಯ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.