CT Ravi: ಹಿಂದೂ ದೇವಾಲಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಕ್ರಿಯೆಗೆ ಪ್ರತಿಕ್ರಿಯೆ ಎಂದ BJP

Muslim Ban In Hindu Temple Issue - ಹಿಂದೂ ದೇವಾಲಯದಲ್ಲಿ (Hindu Temple) ಮುಸ್ಲಿಂ ವ್ಯಾಪಾರಿಗಳ ನಿಷೇಧ (Muslim Businessman Ban) ಹಿನ್ನೆಲೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (CT Ravi) ಹಿಂದುತ್ವ (Hindutva) ಪರ ಬ್ಯಾಟಿಂಗ್ ನಡೆಸಿದ್ದಾರೆ, 

Written by - Zee Kannada News Desk | Last Updated : Mar 23, 2022, 07:11 PM IST
  • ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ನಿಷೇಧ
  • ಇದೊಂದು ಕ್ರಿಯೆಗೆ ಪ್ರತಿಕ್ರಿಯೆ ಅಷ್ಟೇ

    ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ BJP ಪ್ರಧಾನ ಕಾರ್ಯದರ್ಶಿ CT Ravi
CT Ravi: ಹಿಂದೂ ದೇವಾಲಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಕ್ರಿಯೆಗೆ ಪ್ರತಿಕ್ರಿಯೆ ಎಂದ BJP title=
Hindu Temple Muslim Business Ban

ಮಂಗಳೂರು: Muslim Ban In Hindu Temple Issue - ಹಿಂದೂ ದೇವಾಲಯದಲ್ಲಿ (Hindu Temple) ಮುಸ್ಲಿಂ ವ್ಯಾಪಾರಿಗಳ ನಿಷೇಧ (Muslim Businessman Ban) ಹಿನ್ನೆಲೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (CT Ravi) ಹಿಂದುತ್ವ (Hindutva) ಪರ ಬ್ಯಾಟಿಂಗ್ ನಡೆಸಿದ್ದಾರೆ, ಈ ಕುರಿತು ಮಂಗಳೂರಿನಲ್ಲಿ (Mangaluru) ಮಾತನಾಡಿರುವ ಅವರು , ಇದೊಂದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಆಗಿದೆ ಎಂದು ಅವರು ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, 'ಗಂಗೊಳ್ಳಿಯಲ್ಲಿ ಮೀನು ತೆಗೆದುಕೊಳ್ಳಬೇಡಿ ಅಂತಾ ಪರ್ಮಾನ್ ಹೊರಡಿಸಿದ್ರು. ನಾವು ಹಿಂದೂಗಳು ಮಟನ್ ಸ್ಟಾಲ್ ಇಟ್ರೆ ಅಲ್ಲಿ ಮುಸ್ಲಿಂರು ಮಟನ್ ತೆಗೆದುಕೊಳ್ತಾರಾ? ನಮ್ಮ ದೇವರಿಗೆ ಅಗಲ್ಲ ಅನ್ನಲ್ವಾ? ಅವರ ದೇವರಿಗೆ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಅಗಲ್ಲ. ಅದ್ರೆ ಅವ್ರು ದೇವರಿಗೆ ಒಪ್ಪಿಸಿದ್ನ ನಮ್ಮ ದೇವರು ಒಪ್ಪಿಕೊಳ್ಳುತ್ತಾ?' ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ-ಅನಾವಶ್ಯಕವಾಗಿ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ-ಬೊಮ್ಮಾಯಿ ಖಡಕ್ ವಾರ್ನಿಂಗ್

ಇನ್ನೊಂದೆಡೆ 'ಸಮಾನತೆ ಇಬ್ಬರಿಗೂ ಒಂದೇ ತಾನೇ, ಏಕಪಕ್ಷೀಯ ಅಲ್ವಲ್ಲ. ನಮಗೆ ಉದಾರತೆ ಪಾಠ ಯಾರು ಹೇಳೋದು ಬೇಡ, ನಮ್ಮನ್ನು ಮೋಸ ಮಾಡುವುದಕ್ಕೋಸ್ಕರ ಅದನ್ನು ಮಾಡೋದು. ಜಾತ್ಯಾತೀತತೆ ಪಾಠ, ಉದಾರತೆಯ ಪಾಠ ,,, ಬಹುಸಂಖ್ಯಾತ ಹಿಂದುಗಳನ್ನು ಮೋಸ ಮಾಡುವುದಕೊಸ್ಕರ ಆ ಶಬ್ದಗಳನ್ನು ಇಡಲಾಗಿದೆ. ಅಂಬೇಡ್ಕರ್ ಸಂವಿದಾನದಲ್ಲಿ 'ಜಾತ್ಯಾತೀತ' ಅಂತಾ ಹೇಳಿಲ್ಲ.  ತುರ್ತು ಪರಿಸ್ಥಿತಿ ಯಲ್ಲಿ ಕಾಂಗ್ರೆಸ್ ನವರು ನಮಗೆ ಮೋಸ ಮಾಡಲು ಜಾತ್ಯಾತೀತ ಪದ ತಂದಿಟ್ರು. ಆ ಪದ ಶಬ್ದ ಇರಬೇಕು ಬೇಡ್ವೋ ಅನ್ನೋದ್ರ ಬಗ್ಗೆ ಚರ್ಚೆ ಅಗಬೇಕು. ಅಂದ್ರೆ, ಅಂಬೇಡ್ಕರ್ ಕೋಮುವಾದಿಯಾಗಿದ್ರಾ? ಅಥವಾ ಜಾತ್ಯಾತೀತ ಪದ ಬರುವ ಮುನ್ನ ದೇಶ ಕೋಮುವಾದಿ ದೇಶವಾಗಿತ್ತಾ?  ಈ ನೆಲದ ಮಣ್ಣಿನಲ್ಲಿಯೇ ಸರ್ವಧರ್ಮ ಸಮಭಾವ ಇದೆ. ಈ ನೆಲದಲ್ಲಿ ಹುಟ್ಟಿದ ಮತ-ಧರ್ಮಗಳು ಇದೇ ಇರಬೇಕು ಅಂತ ಹೇಳಿಲ್ಲ. ಬಹುತ್ವವನ್ನೇ ಹೇಳಿವೆ. ಗಾಂಧಿ ಹಿಂದೂಗಳ ಭಜನೆಯಲ್ಲಿ 'ಈಶ್ವರ ಅಲ್ಲ ತೇರಾನಾಮ್' ಅಂತಾ ಹೇಳಿದ್ರು. ಅದು ನಮಗೆ ಬಳುವಳಿಯಾಗಿ ಬಂದಿದೆ. ನಮ್ಮ ಎಲ್ಲ ದೇವಸ್ಥಾನದಲ್ಲಿಯೂ ಅದನ್ನು ನಾವು ಭಜನೆಯಲ್ಲಿ ಹೇಳ್ತೇವೆ. ಆದ್ರೆ, ಯಾವುದಾದ್ರೂ ಒಂದು ಮಸೀದಿಯಲ್ಲಿ ಈ ರೀತಿ ಹೇಳೋದನ್ನ ಕೇಳಿದ್ದೀರಾ? ಒಬ್ಬ ಮೌಲ್ವಿ, ಮುಸ್ಲಿಂ ಧರ್ಮಗುರು ದೇವ ಒಬ್ಬ ನಾಮ ಹಲವು ಅಂತಾ ಹೇಳಿರೋದು ಕೇಳಿದ್ದೀರಾ..? ಅವ್ರಿಗೆ ಆ ಬಹುತ್ವವನ್ನು ಒಪ್ಪಿಕೊಳ್ಳೋಕೆ ಅಗಲ್ಲ,  ನಮಗ್ಯಾಕೆ ಮೋಸ ಮಾಡಬೇಕು..?" ಎಂದು ರವಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ-'ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ:ಮೂರು ತಿಂಗಳು ಹಿಂದೆಯೇ ಇದನ್ನ ಭವಿಷ್ಯ ನುಡಿದಿದ್ದೆ!'

"ಇಸ್ಲಾಂನಲ್ಲಿ ದೇವನೊಬ್ಬ‌ ನಾಮ ಹಲವು ಅಂತಾ ಇದ್ದೀದ್ರೆ ಜಗಳನೇ ಇರುತ್ತಿರಲಿಲ್ಲ" ಎಂದ ಅವರು, "90% ಹಿಂದೂಗಳು 10% ಮುಸ್ಲಿಮರು ಇರುವ ಕಡೆ ಮುಸ್ಲಿಮರು ಸುರಕ್ಷಿತರಾಗಿದ್ದಾರೆ. ಆದರೆ, 50% ಹಿಂದೂ 50% ಮುಸ್ಲಿಮರು ಇರುವಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದಾರಾ..?"  ಎಂದು ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಸತ್ಯವನ್ನು ತಿಳಿಯದೆ ಸೋಗಲಾಡದ ರಾಜಕಾರಣ ಕಾಂಗ್ರೆಸ್ (Congress) ಮಾಡಬಹುದು, ನಾವು ರಾಜಕಾರಣ ಮಾಡಲ್ಲ. "ಸಾಬ್ರಿಗೆ ಪಾಕಿಸ್ತಾನ ಕೊಟ್ಟ ಮೇಲೆಯೂ ಕೂಡ ಇಲ್ಲಿ ಉಳಿಸಿಕೊಂಡಿದ್ದು ನಮ್ಮ ಔದಾರ್ಯತನ"  ಎಂದು ರವಿ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News