ವಿಶ್ವದಲ್ಲಿ ಚಂಡಮಾರುತಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು ಗೊತ್ತಾ!?

ಹವಾಮಾನ ಮುನ್ನೆಚ್ಚರಿಕೆಯನ್ನು ಬೇಗ ಕೊಡಬೇಕು, ತಕ್ಷಣವೇ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂಬ ನೀತಿಯೊಂದಿಗೆ ಈ ವರ್ಷದ ವಿಶ್ವ ಹವಾಮಾನ ದಿನ ನಗರದಲ್ಲಿ ಆಚರಿಸಲಾಯಿತು.

Written by - Sowmyashree Marnad | Last Updated : Mar 23, 2022, 09:21 PM IST
  • ಹವಾಮಾನ ಮುನ್ನೆಚ್ಚರಿಕೆಯನ್ನು ಬೇಗ ಕೊಡಬೇಕು, ತಕ್ಷಣವೇ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂಬ ನೀತಿಯೊಂದಿಗೆ ಈ ವರ್ಷದ ವಿಶ್ವ ಹವಾಮಾನ ದಿನವನ್ನು ನಗರದಲ್ಲಿ ಆಚರಿಸಲಾಯಿತು.
ವಿಶ್ವದಲ್ಲಿ ಚಂಡಮಾರುತಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು ಗೊತ್ತಾ!?   title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಹವಾಮಾನ ಮುನ್ನೆಚ್ಚರಿಕೆಯನ್ನು ಬೇಗ ಕೊಡಬೇಕು, ತಕ್ಷಣವೇ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂಬ ನೀತಿಯೊಂದಿಗೆ ಈ ವರ್ಷದ ವಿಶ್ವ ಹವಾಮಾನ ದಿನವನ್ನು ನಗರದಲ್ಲಿ ಆಚರಿಸಲಾಯಿತು.

ಇದನ್ನೂ ಓದಿ-'ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ:ಮೂರು ತಿಂಗಳು ಹಿಂದೆಯೇ ಇದನ್ನ ಭವಿಷ್ಯ ನುಡಿದಿದ್ದೆ!'

ಇದೆ ವೇಳೆ ಹವಾಮಾನ ತಜ್ಞರಾದ ಸಿ.ಎಸ್ ಪಾಟೀಲ್ ಮಾತನಾಡಿ, ಜಾಗತಿಕ ತಾಪಮಾನ (ಗ್ಲೋಬಲ್ ವಾರ್ಮಿಂಗ್) ಹೆಚ್ಚಾಗಿರುವ ಕಾರಣ ವಾತಾವರಣದಲ್ಲಿ ಆವಿಯಾಗುವ ಪ್ರಮಾಣ ಹಾಗೂ ಮಳೆಯಾಗುವ ಪ್ರಮಾಣ ಹೆಚ್ಚಾಗಿದೆ.ಈಗ ಹೈಡ್ರೋಲಾಜಿಕಲ್ ಸೈಕಲ್ ಹೆಚ್ಚಾಗಿರುವುದಲ್ಲದೆ ತಾಪಮಾನ ಹೆಚ್ಚಾಗಿರುವ ಕಾರಣ ನೀರು ಹಿಡಿದಿರುವ ಪ್ರಮಾಣ ಹೆಚ್ಚಾಗುತ್ತದೆ, ಇದರಿಂದಾಗಿ ಅಧಿಕ ಪ್ರಮಾಣದ ಮಳೆ ಬೀಳುತ್ತದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ-ಅನಾವಶ್ಯಕವಾಗಿ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ-ಬೊಮ್ಮಾಯಿ ಖಡಕ್ ವಾರ್ನಿಂಗ್

ಈಗ ಇದೇ ಕಾರಣದಿಂದಾಗಿ ಜಗತ್ತಿನಾದ್ಯಂತ ಅತೀ ಮಳೆ, ಸೈಕ್ಲೋನ್ ಪ್ರಮಾಣ ಹೆಚ್ಚಳವಾಗಿರುವುದು,ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಮಟ್ಟ ಏರಿಕೆಯಾಗುತ್ತಿದೆ.ಇದು ಬೇರೆ ಬೇರೆ ಕೃಷಿ, ಆರ್ಥಿಕ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀಳುತ್ತಿದೆ ಎಂದು ಅವರು ತಿಳಿಸಿದರು.

ಹೀಗಾಗಿ ಇದರಿಂದಾಗುವ ವಿಕೋಪಗಳಿಂದ ರಕ್ಷಿಸಿಕೊಳ್ಳಲು ಬೇಗ ಮುನ್ನೆಚ್ಚರಿಕೆಯನ್ನು ನೀಡುವ ಕೆಲಸ ಮಾಡಬೇಕಿದೆ ಎಂದು ಅವರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News