ಬೆಂಗಳೂರು : ಸಹಕಾರ ಬ್ಯಾಂಕ್ ಗಳ ಮೂಲಕ ಈ ವರ್ಷ20,810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸೋಮಶೇಖರ್(ST Somashekar), ಈ ಗುರಿ ತಲುಪಲು ರಾಜ್ಯದ 212 ಡಿಸಿಸಿ ಬ್ಯಾಂಕ್ ಗಳಿಗೆ ತಿಳಿಸಲಾಗಿದೆ‌. 303 ಲಕ್ಷ ರೈತರನ್ನು ತಲುಪಲು ಹೇಳಿದ್ದೇವೆ ಎಂದರು‌.


ಇದನ್ನೂ ಓದಿ : Lockdown Extended : ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಯುವ ಸಾಧ್ಯತೆ!


2020-21 ನೇ ಸಾಲಿನಲ್ಲಿ 15400ಕೋಟಿ ರೂ. ಗುರಿ ನೀಡಲಾಗಿತ್ತು.17901 ಕೋಟಿ ರೂ. ತಲುಪಲಾಗಿದೆ. ಇದರಲ್ಲಿ ಅಲ್ಪವಾಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲಗಳು(Crop Loans) ಸೇರಿವೆ. ನಾವು ಕೊಟ್ಟಿದ್ದ ಟಾರ್ಗೆಟ್ ಹೆಚ್ಚಿನ ಮಟ್ಟದಲ್ಲೇ ರೀಚ್ ಆಗಿದ್ದಾರೆ. ಲಾಕ್‌ಡೌನ್ ಮುಗಿದ ಬಳಿಕ ಎಲ್ಲಾ ಡಿಸಿಸಿ ಬ್ಯಾಂಕ್‌ಗಳಿಗೆ ಭೇಟಿ ಕೊಡುವುದಾಗಿ ಹೇಳಿದ್ದಾರೆ.


ಇದನ್ನೂ ಓದಿ : Laxman Savadi : 'ಟೂರಿಸ್ಟ್ ವಾಹನ ಮಾಲೀಕ'ರಿಗೆ ಗುಡ್ ನ್ಯೂಸ್..! 


ಕಳೆದ ವರ್ಷ ಕೆಲವು ಡಿಸಿಸಿ ಬ್ಯಾಂಕ್‌ಗಳು(DCC Bank) ಗುರಿ ತಲುಪಿಲ್ಲ. ಅವರಿಗೆ ಈ ವರ್ಷ ಗುರಿ ತಲುಪಲೇಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : Heavy Rainfall in Karnataka : ಜೂ. 3ಕ್ಕೆ ಮುಂಗಾರು ಪ್ರವೇಶ; ನಾಳೆಯಿಂದ ರಾಜ್ಯದಲ್ಲಿ ಭಾರೀ ಮಳೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ