ಬೆಂಗಳೂರು: ರಾಜರಾಜೇಶ್ವರಿ(RR) ನಗರ ಉಪಚುನಾವಣೆಯಲ್ಲಿ ಮತಎಣಿಕೆ ಮುಂಜಾನೆ 8 ಗಂಟೆಗೆ ಆರಂಭವಾದಾಗಿನಿಂದಲೂ ಬಿಜೆಪಿ(BJP) ಅಭ್ಯರ್ಥಿ ಮುನಿರತ್ನ ಭಾರಿ ಮುನ್ನಡೆ ಸಾಧಿಸಿರುವುದರಿಂದ ಕಾಂಗ್ರೆಸ್​(congress) ಅಭ್ಯರ್ಥಿ ಕುಸುಮಾಗೆ ಸೋಲಿನ ಭಯ ಆರಂಭವಾಗಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಬೈಎಲೆಕ್ಷನ್ ರಿಸಲ್ಟ್: RR.ನಗರ, ಶಿರಾ ಎರಡೂ ಕ್ಷೇತ್ರದಲ್ಲೂ ಬಿಜೆಪಿಗೆ ಭಾರಿ ಮುನ್ನಡೆ; ಕಾಂಗ್ರೆಸ್, ಜೆಡಿಎಸ್ ಹಿನ್ನಡೆ


ಮುನಿರತ್ನ ಅವರು ಗೆಲುವಿನತ್ತ ದಾಪುಗಾಲು ಇಡುತ್ತಿದ್ದಾರೆ. ಬಹುತೇಕ ಗೆಲುವು ಖಚಿತ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕುಸುಮಾ(Kusuma)ಗೆ ಭಯ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಕುಸುಮಾ ಮತಗಟ್ಟೆಗೆ ಬರದೇ ಮನೆಯಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ.


Karnataka Bypoll Results 2020: ಕಾಂಗ್ರೆಸ್ ಅಭ್ಯರ್ಥಿಗೆ ಕೋವಿಡ್ ಪಾಸಿಟಿವ್


ನಿನ್ನೆ ಕುಸುಮಾ ಬೆಳಗ್ಗೆ 11 ಗಂಟೆಗೆ ಮತಗಟ್ಟೆಗೆ ತೆರಳುವುದಾಗಿ ತಿಳಿಸಿದ್ದರು. ಆದರೆ, ಗಂಟೆ 12 :30 ಆಗುತ್ತಿದ್ದರು. ಇನ್ನು ಮತಗಟ್ಟೆಗೆ ಬರದಿರುವುದು ಕುತೂಹಲಕ್ಕೆ ಕಾರಣವಾಗಿದೆ.


ಮಹಿಳೆಯರ ಸಂಭ್ರಮ: RR ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ಕೌಂಟಿಂಗ್ ಸೆಂಟರ್ ಬಳಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಮುನಿರತ್ನ ಪರ ಘೋಷಣೆ ಕೂಗಿ ಮಹಿಳಾ ಕಾರ್ಯಕರ್ತೆಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.