Karnataka Bypoll Results 2020: ಕಾಂಗ್ರೆಸ್ ಅಭ್ಯರ್ಥಿಗೆ ಕೋವಿಡ್ ಪಾಸಿಟಿವ್

Karnataka Bypoll Results 2020: ಕರ್ನಾಟಕದ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಟಿ.ಬಿ. ಜಯಚಂದ್ರ ಅವರಿಗೆ ಕರೋನಾ ಪಾಸಿಟಿವ್ ಆಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  

Last Updated : Nov 10, 2020, 11:24 AM IST
  • ನವೆಂಬರ್ 3 ರಂದು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು.
  • ಕರ್ನಾಟಕದ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಟಿ.ಬಿ. ಜಯಚಂದ್ರ
  • ಟಿ.ಬಿ. ಜಯಚಂದ್ರ ಮತ್ತು ಅವರ ಪತ್ನಿ ಜಿ.ಎಚ್. ನಿರ್ಮಲಾ ಅವರಿಗೆ ಕರೋನಾ ದೃಢ
Karnataka Bypoll Results 2020: ಕಾಂಗ್ರೆಸ್ ಅಭ್ಯರ್ಥಿಗೆ ಕೋವಿಡ್ ಪಾಸಿಟಿವ್ title=
Image courtesy: PTI

Karnataka Bypoll Results 2020: ಕರ್ನಾಟಕದ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಟಿ.ಬಿ. ಜಯಚಂದ್ರ (TB JayachandraP ಮತ್ತು ಅವರ ಪತ್ನಿ ಜಿ.ಎಚ್. ನಿರ್ಮಲಾ ಅವರಿಗೆ ಕರೋನಾ ದೃಢಪಟ್ಟಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕರೋನಾವೈರಸ್ (Coronavirus) ದೃಢಪಟ್ಟ ಬಳಿಕ ಜಯಚಂದ್ರ ಮತ್ತು ನಿರ್ಮಲಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಕ್ಷದ ರಾಜ್ಯ ಘಟಕದ ವಕ್ತಾರ ರವಿಗೌಡ ಮಾಹಿತಿ ನೀಡಿದ್ದಾರೆ. ಟಿ.ಬಿ. ಜಯಚಂದ್ರ ಮತ್ತು ಅವರ ಪತ್ನಿ ಜಿ.ಎಚ್. ನಿರ್ಮಲಾ ಅವರಿಗೆ ಕರೋನಾದ ಯಾವುದೇ ಲಕ್ಷಣಗಳಿಲ್ಲ ಎಂದವರು ತಿಳಿಸಿದ್ದಾರೆ.

ನವೆಂಬರ್ 3 ರಂದು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಜನತಾ ದಳ-ಜಾತ್ಯತೀತ (ಜೆಡಿ-ಎಸ್)  ತನ್ನ ಅಭ್ಯರ್ಥಿಯಾಗಿ ಸತ್ಯನಾರಾಯಣ ಅವರ ಪತ್ನಿ ಅಮ್ಮಜಮ್ಮ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿ ರಾಜೇಶ್ ಗೌಡ ಅವರನ್ನು ಕಣಕ್ಕಿಳಿಸಿತು.

ಇಂದು ಮತಎಣಿಕೆ ನಡೆಯುತ್ತಿದ್ದು ಪ್ರಸ್ತುತ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. 1,488 ಮತಗಳಿಂದ ಬಿಜೆಪಿ ಮುನ್ನಡೆ ಸಾಧಿಸಿದೆ.

ಬಿಜೆಪಿ ರಾಜೇಶ್ ಗೌಡ -  14206
ಕಾಂಗ್ರೆಸ್ ಟಿ. ಬಿ. ಜಯಚಂದ್ರ - 12718
ಜೆಡಿಎಸ್ ಅಮ್ಮಾಜಮ್ಮ -  8879

Trending News