ಬೆಂಗಳೂರು: ನಿಮಗೂ ಮಾವಿನ ಹಣ್ಣು ಎಂದರೆ ಆಸೆಯೇ! ಈ ವೇಳೆಯಲ್ಲಿ ದಕ್ಷಿಣ ಭಾರತದ ಜನಪ್ರಿಯ ಮಾವಿನ ಹಣ್ಣುಗಳನ್ನು ಮನೆಯಲ್ಲಿಯೇ ಕುಳಿತು ಆನಂದಿಸಬಹುದು. ಹೌದು ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಈ ಅವಕಾಶವನ್ನು ನೀಡುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ ಫ್ಲಿಪ್‌ಕಾರ್ಟ್ (Flipkart) ಕರ್ನಾಟಕ ರಾಜ್ಯ ಮಾವು ಇಲಾಖೆ ಮತ್ತು ಮಾರ್ಕೆಟಿಂಗ್ ಕಾರ್ಪೊರೇಶನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ರಾಜ್ಯದ ಮಾವು ಬೆಳೆಯುವ ರೈತರಿಗೆ ತಮ್ಮ ಹಣ್ಣಿನ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಫ್ಲಿಪ್‌ಕಾರ್ಟ್ ಸಹಾಯ ಮಾಡುತ್ತದೆ.


ಈ ಉಪಕ್ರಮದಿಂದ ಪ್ರಸಕ್ತ ಋತುವಿನಲ್ಲಿ ಗ್ರಾಹಕರು ಬೆಂಗಳೂರು ನಗರ, ಕೋಲಾರ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇತರ ರೀತಿಯ ಮಾವಿನಹಣ್ಣನ್ನು (Mango) ಆನ್‌ಲೈನ್‌ನಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.


ಒಪ್ಪಂದದಡಿಯಲ್ಲಿ ರೈತರಿಗೆ (Farmers) ಗ್ರಾಹಕರಿಗೆ ನೇರ ಪ್ರವೇಶವಿರುತ್ತದೆ. ಮಾವು ಮಂಡಳಿ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಮಾರಾಟಗಾರರು, ಉತ್ಪಾದಕರು ಮತ್ತು ವ್ಯಾಪಾರಿಗಳಿಗೆ ತನ್ನ ಮಾರುಕಟ್ಟೆ ವೇದಿಕೆಯನ್ನು ಒದಗಿಸುವುದಾಗಿ ಕಂಪನಿ ತಿಳಿಸಿದೆ. ಇದಕ್ಕಾಗಿ ಅವುಗಳನ್ನು ಮೊದಲು ಪ್ಲಾಟ್‌ಫಾರ್ಮ್‌ಗೆ ಸಂಪರ್ಕಿಸಲಾಗುತ್ತದೆ.


ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ 3 ಕೆಜಿ ರವಾನೆಯಲ್ಲಿ ಗ್ರಾಹಕರು ಅಲ್ಫೊನ್ಸೊ, ಬಾದಾಮಿ, ಅಪಸ್, ಬಂಗನಪಲ್ಲಿ, ಕೇಸರಿ, ನೀಲಂ, ಹಿಮಾಮ್ ಪುಖ್, ಸೆಂಡೂರ್ ಮತ್ತು ಮಲ್ಲಿಕಾ ಸೇರಿದಂತೆ ಹಲವಾರು ಬಗೆಯ ಮಾವಿನಹಣ್ಣುಗಳಿಗೆ ಆರ್ಡರ್ ನೀಡಬಹುದು.


ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಗತ್ಯವಿರುವ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ನೀಡಲು ಕಳೆದ ಕೆಲವು ತಿಂಗಳುಗಳಿಂದ ವಿವಿಧ ಎಫ್‌ಎಂಸಿಜಿ ಕಂಪನಿಗಳು ಮತ್ತು ಚಿಲ್ಲರೆ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.


ಈ ಸಹಭಾಗಿತ್ವದಿಂದ ಕಂಪನಿಯು ಸಮುದಾಯದಲ್ಲಿ ರೈತ ಉತ್ಪಾದಕ ಸಂಘಟನೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತಿದೆ ಮತ್ತು ಮಾವಿನ ಬೆಳೆಗಾರರು ಮತ್ತು ರೈತ ಸಮುದಾಯದ ಜೀವನೋಪಾಯಕ್ಕೆ ಸಹಕರಿಸುತ್ತಿದೆ.