Siddaramaiah: `ದುಡ್ಡಿಲ್ಲ ಅಂದ್ರೆ ಕುರ್ಚಿ ಬಿಟ್ಟು ಇಳಿಯಪ್ಪ ಯಡಿಯೂರಪ್ಪ, ನಾವ್ಯಾರಾದ್ರೂ ಬರ್ತೀವಿ`
ಕರ್ನಾಟಕದ ಇತಿಹಾಸದಲ್ಲಿ ನುಡಿದಂತೆ ನಡೆದವರು ಅಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಆದರೆ ಯಡಿಯೂರಪ್ಪ ಸರ್ಕಾರ ಟೋಟಲಿ ಆಫ್ ಆಗೋಗಿದೆ
ಬೆಂಗಳೂರು: ಯಾವುದಕ್ಕೆ ಕೇಳಿದ್ರೂ ಹಣ ಇಲ್ಲ ಅಂತಾರೆ ಯಡಿಯೂರಪ್ಪ. ಹಣ ಇಲ್ಲ ಅಂದ್ಮೇಲೆ ಯಡಿಯೂರಪ್ಪ ಯಾಕಿದೀಯಪ್ಪ..? ದುಡ್ಡಿಲ್ಲಾಂದ್ರೆ ಕುರ್ಚಿ ಬಿಟ್ಟು ಇಳಿ ಮತ್ತೆ, ಆಗ ನಾವ್ಯಾರಾದ್ರೂ ಬರ್ತೀವಿ,ಆಮೇಲೆ ನೋಡೋಣ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಬಗ್ಗೆ ಒಲವು ತೋರಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿ ನುಡಿದಂತೆ ನಡೆದವರು ಅಂದರೆ ಅದು ಕಾಂಗ್ರೆಸ್(Congress) ಸರ್ಕಾರ ಮಾತ್ರ. ಆದರೆ ಯಡಿಯೂರಪ್ಪ ಸರ್ಕಾರ ಟೋಟಲಿ ಆಫ್ ಆಗೋಗಿದೆ. ಕೆಟ್ಟೋಗಿ ನಿಂತ ಬಸ್ಸಿನ ರೀತಿ ಸರ್ಕಾರ ನಿಂತು ಹೋಗಿದೆ ಎಂದ ಅವರು ಬಿಎಸ್ವೈ ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು. ನಿನಗೆ ಪಾಪ ಗೇರ್ ಹಾಕೋಕೆ ಬರಲ್ಲ. ಇನ್ನು ಬಸ್ಸು ಎಲ್ಲಿ ಮುಂದಕ್ಕೆ ಹೋಗುತ್ತೆ. ನೀನು ಮಾಡ್ತಿರೋದು ಸರ್ಕಾರದಲ್ಲಿ ಲೂಟಿ. ನೀನು ಮುಖ್ಯಮಂತ್ರಿ ಆಗಿ ಮುಂದುವರೆಯುವುದಕ್ಕೆ ಯಾವುದೇ ಕಾರಣಕ್ಕೂ ನೈತಿಕ ಹಕ್ಕು ಇಲ್ಲ ಎಂದು ಗುಡುಗಿದರು.
ಪಂಚಮಸಾಲಿ 2A ಮೀಸಲಾತಿ: -ಸ್ವಾಮೀಜಿಗಳಿಗೆ ಮಾತುಕತೆಗೆ ಬನ್ನಿ ಬಸವರಾಜ್ ಬೊಮ್ಮಾಯಿ
ನಾವು ಹಿಂದೆ 7 ಕೆ.ಜಿ ಅಕ್ಕಿ ಕೊಡ್ತಿದ್ದೆವು. ಅದನ್ನ ಇವರು ಈಗ 5 ಕೆಜಿಗೆ ತಂದಿದ್ದಾರೆ, ಮುಂದೆ 3 ಕೆಜಿಗೆ ಬರ್ತಾರೆ ಆ ನಂತರ ಅದನ್ನು ನಿಲ್ಲಿಸೇ ಬಿಡುತ್ತಾರೆ. ಅಕ್ಕಿಯನ್ನೇನು ಯಡಿಯೂರಪ್ಪ(BS Yediyurappa) ಅವರ ಅಪ್ಪನ ಮನೆಯಿಂದ ತಂದು ಕೊಡ್ತಿದ್ದಾನಾ..? ಜನರ ದುಡ್ಡಿನಿಂದ ತಾನೇ ಕೊಡೋದು. ಕೊರೋನಾದಲ್ಲೂ ದುಡ್ಡು ಹೊಡೆದುಬಿಟ್ಟರು. ನಾವು ಸಂಕಲ್ಪ ಮಾಡಬೇಕಿದೆ. ಬಿಜೆಪಿಯನ್ನ ಕಿತ್ತೊಗೆಯಲೇಬೇಕಿದೆ. ಸಂಘರ್ಷ ಮಾಡಿ, ಜನರ ಬಳಿ ಹೊಗೋಣ. ಜನರ ಬಳಿ ಹೋಗಿ ಸರ್ಕಾರ ಕಿತ್ತೊಗೆಯೋಣ ಎಂದು ಕರೆ ನೀಡಿದರು.
ಮಹಾರಾಷ್ಟ್ರದಿಂದ ಬರುವವರ COVID-19 RT-PCR report ಸಲ್ಲಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.