ಪಂಚಮಸಾಲಿ 2A ಮೀಸಲಾತಿ: -ಸ್ವಾಮೀಜಿಗಳಿಗೆ ಮಾತುಕತೆಗೆ ಬನ್ನಿ ಬಸವರಾಜ್‌ ಬೊಮ್ಮಾಯಿ

ಸಂವಿಧಾನದ ಪ್ರಕಾರ ಆಯೋಗದ ಮೂಲಕವೇ ಶಿಫಾರಸು ಬರಬೇಕು ಎಂದು ಸಚಿವ ಬಸವರಾಜ್‌ ಬೊಮ್ಮಾಯಿ.

Last Updated : Feb 21, 2021, 01:05 PM IST
  • ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇವೆ.
  • ಸಂವಿಧಾನದ ಪ್ರಕಾರ ಆಯೋಗದ ಮೂಲಕವೇ ಶಿಫಾರಸು ಬರಬೇಕು ಎಂದು ಸಚಿವ ಬಸವರಾಜ್‌ ಬೊಮ್ಮಾಯಿ.
  • ಮೀಸಲಾತಿ ನೀಡುವ ವಿಚಾರವಾಗಿ ಸರಕಾರ ಇದುವರೆಗೂ ತೆಗೆದುಕೊಂಡ ಕ್ರಮಗಳ ಕುರಿತು ಸ್ವಾಮೀಜಿಗಳಿಗೆ ಮನವರಿಕೆ ಮಾಡಿಕೊಡುತ್ತೇವೆ
ಪಂಚಮಸಾಲಿ 2A ಮೀಸಲಾತಿ: -ಸ್ವಾಮೀಜಿಗಳಿಗೆ ಮಾತುಕತೆಗೆ ಬನ್ನಿ ಬಸವರಾಜ್‌ ಬೊಮ್ಮಾಯಿ title=

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇವೆ. ಸಂವಿಧಾನದ ಪ್ರಕಾರ ಆಯೋಗದ ಮೂಲಕವೇ ಶಿಫಾರಸು ಬರಬೇಕು ಎಂದು ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಮಾತನಾಡಿದ ಸಚಿವ ಬಸವರಾಜ್‌ ಬೊಮ್ಮಾಯಿ(Basavaraj Bommai), ಹಿಂದುಳಿದ ವರ್ಗಗಳ ಆಯೋಗ ಸಭೆ ನಡೆಸಿ ಈ ಬಗ್ಗೆ ಸಮಾಲೋಚಿಸಲಿದೆ. ಮೀಸಲಾತಿ ನೀಡಲು ಸಂವಿಧಾನದ ಪ್ರಕಾರ ಹಿಂದುಳಿದ ವರ್ಗಗಳ ಆಯೋಗವೇ ಶಿಫಾರಸು ಮಾಡಬೇಕು. ಆಯೋಗದ ಮೂಲಕವೇ ಶಿಫಾರಸು ಬರಬೇಕು. ಈ ಮಧ್ಯೆ ಇಂದು ಪಂಚಮಸಾಲಿ ಸಮಾವೇಶ ನಡೀತಿದೆ. ಸ್ವಾಮೀಜಿಗಳ ಜತೆ ಈಗಾಗಲೇ ಮಾತಾಡಿದ್ದೇವೆ ಎಂದರು.

ಮಹಾರಾಷ್ಟ್ರದಿಂದ ಬರುವವರ COVID-19 RT-PCR report ಸಲ್ಲಿಕೆ ಕಡ್ಡಾಯ

ಮೀಸಲಾತಿ ನೀಡುವ ವಿಚಾರವಾಗಿ ಸರಕಾರ ಇದುವರೆಗೂ ತೆಗೆದುಕೊಂಡ ಕ್ರಮಗಳ ಕುರಿತು ಸ್ವಾಮೀಜಿ(Swamiji)ಗಳಿಗೆ ಮನವರಿಕೆ ಮಾಡಿಕೊಡುತ್ತೇವೆ. ಸಮಾವೇಶದಲ್ಲೂ ಈ ವಿಚಾರವನ್ನು ಹೇಳುತ್ತೇವೆ. ಮಾತುಕತೆಗೆ ಬನ್ನಿ ಎಂದು ಸ್ವಾಮೀಜಿಗಳನ್ನು ಆಹ್ವಾನಿಸುತ್ತೇವೆ ಎಂದು ಹೇಳಿದರು.

Siddaramaiah: ಸಿದ್ದರಾಮಯ್ಯಗೆ 'ಬಹಿರಂಗ ಸವಾಲ್' ಹಾಕಿದ ಬಾದಾಮಿ ಕ್ಷೇತ್ರದ ರೈತ..!

ಸಿಎಂ ಬಿಎಸ್‌ ಯಡಿಯೂರಪ್ಪ(BS Yediyurappa) ಅವರು ಕೂಡ ಇದೇ ಮಾತನ್ನು ಹೇಳಿದ್ದಾರೆ. ಮುಂದಿನ‌ ದಿನಗಳಲ್ಲಿ ನಡೆಸಬೇಕಾದ ಪ್ರಕ್ರಿಯೆ ಕುರಿತು ಮಾತುಕತೆ ಮೂಲಕ ಚರ್ಚೆ ಮಾಡೋಣ ಎಂಬುದು ಮುಖ್ಯಮಂತ್ರಿಗಳ ನಿಲುವು ಎಂದು ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದರು.

RBI Latest Decision: ಕರ್ನಾಟಕದ ಈ ಬ್ಯಾಂಕಿನ ಮೇಲೆ RBI ನಿರ್ಬಂಧ, ಗ್ರಾಹಕರು ಕೇವಲ 1000 ರೂ. ಹಿಂಪಡೆಯಬಹುದು

ಇತ್ತ ಅರಮನೆ ಮೈದಾನದಲ್ಲಿ ಪಂಚಮಸಾಲಿ(Panchamasali) ಸಮುದಾಯದಿಂದ ಬೃಹತ್‌ ಸಮಾವೇಶ ನಡೆಯುತ್ತಿದ್ದು, ಲಕ್ಷಾಂತರ ಜನ ಸೇರಿದ್ದಾರೆ. ಮೀಸಲಾತಿ ಆದೇಶ ಪತ್ರ ನೀಡುವವರೆಗೂ ನಾವು ಹೋರಾಟ ನಿಲ್ಲಿಸಲ್ಲ ಎಂದಿರುವ ಸ್ವಾಮೀಜಿಗಳು. ವಿಧಾನಸೌಧದ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ಸರಕಾರಕ್ಕೆ ನೀಡಿದ್ದಾರೆ.

ರಾಜ್ಯ CET ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ʼಜು.7ʼ ರಿಂದ ಪರೀಕ್ಷೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News