ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ನೇತೃತ್ವದಲ್ಲಿ ಬೆಂಗಳೂರಿನ ಜೆಪಿ ಭವನದಲ್ಲಿ ಜಯಪ್ರಕಾಶ್ ನಾರಾಯಣ್  ಅವರ 115 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಲೋಕನಾಯಕ್ ಜಯಪ್ರಕಾಶ್ ನಾರಾಯಣ ಆಂದೋಲನ, ಹೋರಾಟ ಜೀವನ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. 


COMMERCIAL BREAK
SCROLL TO CONTINUE READING

ಜನತಾ ಸರ್ಕಾರ ಇದ್ದಾಗಲೂ, ಹೋದ ನಂತರವೂ ಮತ್ತು ಅದಕ್ಕೂ ಮೊದಲಿನಿಂದಲೂ ಜೆಪಿ ಜನ್ಮದಿನಾಚರಣೆ ಆಚರಿಸಿಕೊಂಡೇ ಬಂದಿದ್ದೇವೆ.  ಇಂದಿರಾ ಗಾಂಧಿ ಅವರು ಜೆಪಿ ಅವರ ಕೊನೆಯ ದಿನಗಳಲ್ಲಿ ಜೆಪಿ ಅವರನ್ನು ಬಹಳ ನಿಕೃಷ್ಟವಾಗಿ ಕಂಡರು. ಜೆಪಿ ಅವರ ಹೋರಾಟದಿಂದ ನಾವೆಲ್ಲ ಕಾಂಗ್ರೆಸೇತರ ಸರ್ಕಾರ ಮಾಡಲು ಸಾಧ್ಯವಾಯಿತು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.


ಜೆಪಿಯವರು ಅಂದು ಕರ್ನಾಟಕ ಪ್ರವಾಸಕ್ಕೆ ಬಂದಾಗ ಆಡಿದ ಮಾತುಗಳನ್ನು ನಾನು ಇಂದೂ ನೆನಪು ಮಾಡಿಕೊಳ್ಳುತ್ತೇನೆ. ಜೆಡಿಎಸ್ ಕಚೇರಿ ಕಟ್ಟಡಕ್ಕೆ ಜೆಪಿ ಭವನ ಅಂತ ಹೆಸರಿಡಿ ಅಂತ ಯಾರೂ ಹೇಳಿಲ್ಲ, ನಾನೇ ಅವರ ಸ್ಫೂರ್ತಿಯಿಂದ ಈ ಕಚೇರಿಗೆ ಅವರ ಹೆಸರು ಇಟ್ಟಿದ್ದೇನೆ. ಇಂದೂ ಗಾಂಧೀಜಿಯನ್ನೂ ಕೂಡ ಮರೆಯುವಂತಾಗಿದೆ ಎಂದು ದೇವೇಗೌಡರು ತಿಳಿಸಿದರು.


ಯುವಕರು ಗಾಂಧೀಜಿ & ಜೆಪಿ ಬಗ್ಗೆ ಅರಿಯಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಜೆಪಿ ಗಾಂಧೀಜಿ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರವಾಗಬೇಕು. ಈಗ ದೆಹಲಿಯಲ್ಲಿ ಎಲ್ಲ ಮಂತ್ರಿಗಳ  ಕಚೇರಿಯಲ್ಲಿ ಬಹುತೇಕ ದೀನದಯಾಳ್ ಫೋಟೋ ಇದೆ. ಗಾಂಧೀಜಿ ಫೋಟೋ ಬರಿ ನೆಪಕ್ಕೆ ಇಟ್ಟುಕೊಂಡಿದ್ದಾರಷ್ಟೆ, ಜೆಪಿ ಅವರ ಫೋಟೋ ಕೂಡ ಹಾಕಬೇಕಿತ್ತು ಎಂದು ಎಚ್.ಡಿ. ಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಜೆಪಿ ಒಡನಾಡಿ, ತುರ್ತು ಪರಿಸ್ಥಿತಿಯಲ್ಲಿ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರ ಜೊತೆ ಜೈಲುವಾಸ ಅನುಭವಿಸಿದ್ದ ನಾರಾಯಣ ಪ್ರಸಾದ್ ಅಗರವಾಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಿಹಾರ ಮತ್ತು ಸಾಂಗ್ಲಿಯಲ್ಲಿ 1946 ರಲ್ಲಿ 15 ಮೈಲಿ ನಾವು ಸ್ವಾತಂತ್ರ ಹೋರಾಟ ನಡೆಸಿದ್ದೆವು. ಜೆ.ಪಿ.ಅಂದೋಲನದಲ್ಲಿ ಜೈಲುವಾಸ ಅನುಭವಿಸಿದೆವು..ಭ್ರಷ್ಟಾಚಾರ ವಿರುದ್ಧ ಜೆಪಿ ಹೋರಾಡಿದ್ದರು. ದೇವೇಗೌಡ ಭ್ರಷ್ಟಾಚಾರ ರಹಿತ ರಾಜಕಾರಣಿ. ಲಾಲೂ ಪ್ರಸಾದ್ ಮೇವು ಹಗರಣದಲ್ಲಿ ದೇವೇಗೌಡರು ಭಾಗಿಯಾಗಲಿಲ್ಲ ಅನ್ನೋ ಕಾರಣಕ್ಕೆ  ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಜಯಪ್ರಕಾಶ್ ನಾರಾಯಣ್ ಒಡನಾಡಿ, ನಾರಾಯಣ ಪ್ರಸಾದ್ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ತಿಳಿಸಿದರು.


ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ, ಮಾಜಿ ಸಚಿವ ಹೆಚ್‌.ವಿಶ್ವನಾಥ್, ಶಾಸಕರಾದ ಹೆಚ್‌‌‌.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ವೈ.ಎಸ್.ವಿ.ದತ್ತಾ , ರಮೇಶ್ ಬಾಬು,ಹೆಚ್.ಸಿ.ನೀರಾವರಿ, ಸೇರಿದಂತೆ ಪ್ರಮುಖರು ಜಯಂತ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.