ಬೆಂಗಳೂರು : ಕರ್ನಾಟಕದಲ್ಲಿ ಚುನಾವಣೆ ಸಿದ್ಧತೆ ಹಿನ್ನಲೆ ನಾಳೆಯಿಂದ ಕಾಂಗ್ರೆಸ್ ತನ್ನ ಪ್ರಜಾಧ್ವನಿ ಯಾತ್ರೆ ಚಾಲನೆ ಬಗ್ಗೆ ಘೋಷಣೆ ಮಾಡಿದೆ. ನಾಳೆ ಬೆಳಗಾವಿಯಿಂದ ಪ್ರಜಾಧ್ವನಿ  ಯಾತ್ರೆ  ಪ್ರಾರಂಭವಾಗಲಿದೆ.  ಈ ಯಾತ್ರೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 'ಪ್ರಜಾಧ್ವನಿ' ವಿಶೇಷ ಬಸ್ ಮೂಲಕ ಜಂಟಿ ಪ್ರವಾಸ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ಕೈ ನಾಯಕರ ಯಾತ್ರೆಗೆ ಸಜ್ಜಾಗಿರುವ 'ಪ್ರಜಾಧ್ವನಿ ಬಸ್':
ಪ್ರಜಾಧ್ವನಿ ಹೆಸರಿನಲ್ಲಿ ನಾಳೆಯಿಂದ ಆರಂಭವಾಗಲಿರುವ ಯಾತ್ರೆಗೆ ಬಸ್ ಸಿದ್ದವಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಂಟಿ ಪ್ರವಾಸ ಮಾಡಲಿದ್ದಾರೆ.


ಇದನ್ನೂ ಓದಿ : ಮಂಡ್ಯದ ಮನ್ಮುಲ್ನಲ್ಲಿ ತಯಾರಾಗ್ತಿರೋ ಬೆಲ್ಲದ ಬರ್ಫಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್


ಈ ಬಸ್ ಅನ್ನು ಕೈ ನಾಯಕರ ಭಾವಚಿತ್ರಗಳೊಂದಿಗೆ ಸಿದ್ಧಪಡಿಸಿದೆ. ನಾಳೆ ಬೆಳಗಾವಿಯ ಚಿಕ್ಕೋಡಿಯಿಂದ ಆರಂಭವಾಗಲಿರುವ ಯಾತ್ರೆ, ಪ್ರತಿದಿನ ಎರಡು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಿದೆ. ಈ ಮಧ್ಯೆ  ಸಂಕ್ರಾಂತಿ ಕಾರಣ ನಾಲ್ಕು ದಿನ ಬ್ರೇಕ್ ನೀಡಲಾಗಿದೆ. ಬಳಿಕ ಮತ್ತೆ ಯಾತ್ರೆ ಆರಂಭವಾಗಲಿದ್ದು, ಒಟ್ಟು ನಲ್ವತ್ತಾರು ಮಂದಿ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಈ ಬಸ್ ನಲ್ಲಿದೆ.


ಬಿಜೆಪಿ ಸರ್ಕಾರದ ವೈಫಲ್ಯವನ್ನು ಜನರಿಗೆ ತಲುಪಿಸುವ ಮತ್ತು ಜನರ ಬದುಕಿಗಾಗಿ ಕಾಂಗ್ರೆಸ್ ಏನು ಮಾಡಲು ಸಿದ್ಧವಿದೆ ಎನ್ನುವುದನ್ನು ತಿಳಿಸುವ ಉದ್ದೇಶದಿಂದ  ಪ್ರಜಾಧ್ವನಿ ಯಾತ್ರೆ ಆರಂಭಿಸಲಾಗಿದೆ.  ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಐತಿಹಾಸಿಕ ಸ್ಥಳ ಬೆಳಗಾವಿಯ ಗಾಂಧಿ ಬಾವಿಯಿಂದ ನಾಳೆ ಈ ಯಾತ್ರೆ ಆರಂಭವಾಗುತ್ತಿದೆ. ಇಂದು ಈ ಯಾತ್ರೆಯ ಲೋಗೋ ಅನಾವರಣಗೊಳ್ಳಲಿದೆ. 


ಇದನ್ನೂ ಓದಿ : Sara Aboobacker: ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ನಿಧನ


ಈ ನಡುವೆ  ಜನರ ಅಭಿಪ್ರಾಯ ಸಂಗ್ರಹಿಸಲು ವೆಬ್ ಸೈಟ್ ಆರಂಭಿಸಿದ್ದು, prajadhwani.com ಗೆ  ಭೇಟಿ ನೀಡುವ ಮೂಲಕ ಹಾಗೂ ದೂರವಾಣಿ ಸಂಖ್ಯೆ 9537 224 224ಗೆ ಕರೆ ಮಾಡಿ ಜನರ  ಅಭಿಪ್ರಾಯವನ್ನು ತಿಳಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. 


ಇದೆ ವೇಳೆ ಟಿಕೆಟ್ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಸಂಕ್ರಾಂತಿ ಹಬ್ಬದ ದಿನವೂ ಸಭೆ ಸೇರುತ್ತಿದ್ದು, ಚರ್ಚೆ ನಂತರ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.