ಬೆಂಗಳೂರು: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಸೋಮವಾರ(ಜ.9) ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವುದು ಅನೇಕರಿಗೆ ನಿರೀಕ್ಷಿತ ಬೆಳವಣಿಗೆ ಆದ್ರೂ ಇನ್ನು ಕೆಲವರಿಗೆ ಚಾಮುಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿಲ್ಲವೆಂಬ ಬೇಸರವೂ ಇದೆ. ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರರ ರಾಜಕೀಯ ಭವಿಷ್ಯ ಪಣಕ್ಕಿಟ್ಟು, ರಾಜಕೀಯ ದಾಳ ಉರುಳಿಸುವುದು ಸೂಕ್ತವೊ ಎಂಬ ಕಾಳಜಿಯೂ ಇವರಲ್ಲಿದೆ ಎಂದರೆ ತಪ್ಪಿಲ್ಲ. ಇನ್ನು ರಾಜಕೀಯ ವಿರೋಧಿಗಳಾದ ಬಿಜೆಪಿ ಹಾಗೂ ಜೆಡಿಎಸ್ ಕೂಡ ಸಿದ್ದರಾಮಯ್ಯರ ಘೋಷಣೆಯಿಂದ ತಮ್ಮಲ್ಲಿರುವ ಅಸ್ತ್ರಗಳನ್ನು ಸಿದ್ಧಮಾಡಿಕೊಳ್ಳುತ್ತಿವೆ. ಹಾಗಾದರೆ ಇವೆರಡು ರಾಜಕೀಯ ಪಕ್ಷಗಳ ಅಸ್ತ್ರಗಳೇನು?
ಇದನ್ನೂ ಓದಿ: B Puttaswamy: ರಾಜಕೀಯ ಪ್ರವೇಶಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ರಾಜೀನಾಮೆ; ಕ್ಲಿಯರ್ ಆಯ್ತಂತೆ ಜೆಡಿಎಸ್ ಪಟ್ಟಿ..!
ಬಿಜೆಪಿ ಅಸ್ತ್ರಗಳು ಯಾವುವು?
ಬಿಜೆಪಿ ಸಿದ್ದರಾಮಯ್ಯರ ಸ್ಪರ್ಧೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಸದ್ಯಕ್ಕೆ ‘ಕಮಲ’ ಪಕ್ಷದ ಬತ್ತಳಿಕೆಯಲ್ಲಿ ಯಾವೆಲ್ಲಾ ಅಸ್ತ್ರಗಳಿವೆ ಅಂದರೆ, ವರುಣಾ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟು ಬಂದಿರುವ ವಿಚಾರ ಪ್ರಸ್ತಾಪಿಸುವುದು, ಅಲ್ಪಸಂಖ್ಯಾತರ ಓಲೈಕೆಯ ಜೊತೆಗೆ ಹಿಂದೂ ವಿರೋಧಿ ಅಸ್ತ್ರ, ಬಾದಾಮಿ ಕ್ಷೇತ್ರಕ್ಕೆ ಕೈಕೊಟ್ಟ ಆರೋಪವನ್ನು ಬಿಜೆಪಿ ಪ್ರಯೋಗಿಸಲಿದೆ, ವರುಣಾ ಕ್ಷೇತ್ರದಲ್ಲಿ ಪುತ್ರನ ರಾಜಕೀಯ ಬೆಳವಣಿಗೆಗಾಗಿ ಕೋಲಾರಕ್ಕೆ ವಲಸೆ ಎಂಬ ಅಸ್ತ್ರ, ಪ್ರಬಲ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜೆಡಿಎಸ್ ನಡೆ ಮೇಲೆ ಬಿಜೆಪಿ ಕಣ್ಣಿಟ್ಟಿದೆ.
ಜೆಡಿಎಸ್ ಅಸ್ತ್ರಗಳು ಯಾವುವು?
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ರಾಜಕೀಯ ಕಾರಣಗಳಿಂದ ಸಿದ್ದರಾಮಯ್ಯ ವಿರುದ್ಧ ಕೆಂಡಕಾರುತ್ತಲೇ ಇದ್ದಾರೆ. ಇದರ ಜೊತೆಗೆ ಕಳೆದ ವರ್ಷ ನಡೆದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಕೋಲಾರ ಶ್ರೀನಿವಾಸ್ ಗೌಡ ಅಡ್ಡ ಮತದಾನ ಮಾಡಿ ಪಕ್ಷದಿಂದ ಉಚ್ಚಾಟನೆ ಆಗಿದ್ದರು. ಇದು ಕುಮಾರಸ್ವಾಮಿಯವರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿತ್ತು. ರಾಜಕೀಯ ಸೇಡು ತೀರಿಸಿಕೊಳ್ಳಲು ಜೆಡಿಎಸ್ ಸದ್ಯ ಯೋಚನೆ ಮಾಡುತ್ತಿರುವುದು ಏನು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ಗೃಹ ಸಚಿವರ ಮನೆ ಅಥವಾ ಸಿಎಂ ಮನೆಯಲ್ಲಿ ಹುಡುಕಿದ್ರೆ ಸ್ಯಾಂಟ್ರೋ ರವಿ ಸಿಗಬಹುದು: ಕಾಂಗ್ರೆಸ್
ಒಕ್ಕಲಿಗ ಶಾಸಕರಿದ್ದ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯ ವಿಚಾರ, ಒಕ್ಕಲಿಗರ ವಿರೋಧಿ ಪಟ್ಟ ಕಟ್ಟಲು ಜೆಡಿಎಸ್ ತಯಾರಿ, ಸಿದ್ದರಾಮಯ್ಯರಿಂದ ಕಾಂಗ್ರೆಸ್‍ಗೆ ಉಳಿಗಾಲ ಇಲ್ಲವೆಂಬ ಅಸ್ತ್ರ, ಮುಂದೆ ಮುಖ್ಯಮಂತ್ರಿ ವಿಚಾರದಲ್ಲೂ ಕೋಲಾರ ರೀತಿಯ ಶಾಕ್ ಕಾಂಗ್ರೆಸ್ ನಾಯಕರಿಗೆ ಎಂಬ ವಾದ ಮಂಡಿಸುವುದು, ಕಳೆದ ಬಾರಿಯಂತೆ ಚಾಮುಂಡೇಶ್ವರಿ ಮಾದರಿಯಲ್ಲಿ ಜೆಡಿಎಸ್-ಬಿಜೆಪಿ ಸಿದ್ದರಾಮಯ್ಯಗೆ ಖೆಡ್ಜಾ ತೋಡಲು ಅಭ್ಯರ್ಥಿ ವಿಚಾರ ದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು.
ಒಟ್ಟಾರೆ ಉಭಯ ಪಕ್ಷಗಳ ಪ್ರಕಾರ ತ್ರಿಕೋನ ಸ್ಪರ್ಧೆಯಾದರೆ ಸಿದ್ದರಾಮಯ್ಯರಿಗೆ ಲಾಭ ಆಗಲಿದೆ. ಹೀಗಾಗಿ ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಜೆಡಿಎಸ್-ಬಿಜೆಪಿ ನಾಯಕರ ನಡುವೆ ಹೊಂದಾಣಿಕೆ ಆಗಿಲಿದ್ಯಾ? ಅನ್ನೋ ಪ್ರಶ್ನೆ ಮೂಡಿದೆ. ಹೊಂದಾಣಿಕೆಯಾಗಲಿ ಅಥವಾ ತ್ರಿಕೋಣ ಸ್ಪರ್ಧೆಯಾಗಲಿ 2023ರ ಚುನಾವಣೆಯಲ್ಲಿ ಕೋಲಾರದಿಂದ ಗೆಲುವು ಯಾರಿಗೆ? ಮತದಾರ ಪ್ರಭು ಅಂತಿಮವಾಗಿ ಯಾರ ಕೈ ಹಿಡಿಯುತ್ತಾನೆ ಅನ್ನೋದು ಮೇ ನಂತರವೇ ತಿಳಿಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.