ಕೆಲವರಿಗೆ ಕನ್ನಡ ಭಾಷೆ ಮಾತನಾಡಲು ಬಂದರೂ ಸಹ ಅಸಡ್ಡೆ ತೋರಿಸುತ್ತಾ ಆಂಗ್ಲಭಾಷೆಯಲ್ಲಿ ಮಾತನಾಡುತ್ತಾರೆ. ಕನ್ನಡಾಭಿಮಾನ ಅಂತ ಬಾಯಲ್ಲಿ ಹೇಳೋರ ಮಧ್ಯೆ ಕೆಲವೊಂದು ಸ್ವಚ್ಛ ಪ್ರೇಮಿಗಳೂ ಇದ್ದಾರೆ. ಇನ್ನು ನಮ್ಮ ನಾಡಲ್ಲಿ ಹುಟ್ಟಿಲ್ಲವಾದರೂ ಇಲ್ಲಿ ಬಂದು ನೆಲೆಸಿದ ಅದೆಷ್ಟೋ ಜನರು ಕನ್ನಡ ಭಾಷೆ, ನಾಡು ನುಡಿಯ ಮೇಲೆ ಪ್ರೀತಿ ತೋರಿಸುತ್ತಾರೆ. ಅಂತಹ ಸಾಲಿಗೆ ಜರ್ಮನ್‌ ಮೂಲದ ಯುವತಿಯೊಬ್ಬರು ಸೇರಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಏಮ್ಸ್‌ನಲ್ಲಿ ಇಂದಿನಿಂದ ನರ್ಸಿಂಗ್ ಸಿಬ್ಬಂದಿ ಮುಷ್ಕರ


ವಿದೇಶದಿಂದ ಬಂದ ಅನೇಕರು ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ, ಇಲ್ಲಿನ ಪದ್ಧತಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಿದ್ದಾರೆ. ಅಂತೆಯೇ ಕರ್ನಾಟಕಕ್ಕೆ ಆಗಮಿಸಿದ ಜರ್ಮನ್‌ ಮೂಲದ ಜೆನಿಫರ್ ಕೋನಿಗ್ಸ್‌ಬರ್ಗರ್ ಎಂಬ ಮಹಿಳೆ ಕರುನಾಡ ಸಂಸ್ಕೃತಿಗೆ ಮನಸೋತು ಇಲ್ಲಿಯೇ ನೆಲೆಸಿದ್ದಾರೆ. ಇಲ್ಲಿನ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ. 


 

 

 

 



 

 

 

 

 

 

 

 

 

 

 

A post shared by Jennifer (@jennijigermany)


 


ಜೆನಿಫರ್ ಕೋನಿಗ್ಸ್‌ಬರ್ಗರ್ ಜರ್ಮನಿ ದೇಶದವರು. ಮೈಸೂರಿನ ಶಾಲೆಯೊಂದರಲ್ಲಿ ಶಿಕ್ಷಕರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಹಿಂದಿ ಮತ್ತು ಕನ್ನಡ ಭಾಷೆಯನ್ನು ಪ್ರೀತಿಯಿಂದ ಕಲಿತುಕೊಂಡಿದ್ದಾರೆ. ಭಾರತೀಯ ನೃತ್ಯ ಪ್ರಕಾರಗಳನ್ನು ಸಹ ಅಧ್ಯಯನ ಮಾಡಿರುವ ಜೆನಿಫರ್‌ ಅವರ ಕನ್ನಡ ಪ್ರೇಮ ನೋಡಿದರೆ ಫಿದಾ ಆಗೋದಂತು ನಿಜ. 


ಟಿಕ್‌ಟಾಕ್‌, ಇನ್‌ಸ್ಟಾಗ್ರಾಂನಲ್ಲಿ ಸಖತ್‌ ಫೇಮಸ್‌ ಆಗಿರುವ ಜೆನಿಫರ್‌, ತಮ್ಮ ವಿಡಿಯೋಗಳಲ್ಲಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲೇ ಸಂಭಾಷಣೆ ಮಾಡುತ್ತಾರೆ. ಪಕ್ಕಾ ಮೈಸೂರು ಶೈಲಿಯಲ್ಲಿ ಕನ್ನಡ ಮಾತಾಡೋ ಜೆನಿಫರ್‌ ಇದೀಗ ಕರುನಾಡ ಮನಗೆದ್ದಿದ್ದಾರೆ. ಜೆನಿಫರ್ ಅವರ ಟಿಕ್‌ಟಾಕ್ ವಿಡಿಯೋಗಳು ಜನಪ್ರಿಯವಾಗಿದೆ. 


ಇನ್ನು ನೆಟ್ಟಿಗರು ಜೆನಿಫರ್‌ ಅವರ ಕನ್ನಡ ಮಾತನಾಡುವ ವಿಡಿಯೋಗಳನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಕಿಯಾಗಿದ್ದರೂ ಸಹ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜೆನಿಫರ್‌, ಅನಾಥ ಪ್ರಾಣಿಗಳ ಆರೈಕೆ, ವಿಶೇಷ ಮಕ್ಕಳ ಕಾಳಜಿಯನ್ನು ಜೆನಿಫರ್‌ ತೆಗೆದುಕೊಳ್ಳುತ್ತಿದ್ದಾರೆ. 


​ಇದನ್ನು ಓದಿ: ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್‌! ಈ ಟ್ರೀಟ್‌ ಮೀಟ್‌ನ ಸ್ಪೆಷಲ್‌ ಏನು?


ಒಂದು ಬಾರಿ ಜೆನಿಫರ್‌ ಅವರ ಸೋಶಿಯಲ್‌ ಮೀಡಿಯಾ ಪ್ರೊಫೈಲ್‌ ನೋಡಿದರೆ ಭಾರತದ ಮೇಲೆ ಎಷ್ಟರ ಮಟ್ಟಿಗೆ ಪ್ರೀತಿ ಇದೆ ಎಂದು ತಿಳಿಯುತ್ತದೆ. ಇನ್ನು ಕರ್ನಾಟಕದ ನಾಡಗೀತೆ 'ಭಾರತ ಜನನಿಯ ತನುಜಾತೆ'ಯನ್ನೂ ಹಾಡಿ ರೀಲ್ಸ್‌ ಮಾಡಿದ್ದರು. ಈ ಒಂದು ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಎಲ್ಲರ ಮನಗೆದ್ದಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.