NRI: ಸಾಗರೋತ್ತರ ಮತದಾರರಿಗೆ ಎಲೆಕ್ಟ್ರಾನಿಕ್‌ ಮತಯಂತ್ರ ಪರಿಶೀಲನೆ!

ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಸುಶೀಲ್‌ ಚಂದ್ರ ನೇತೃತ್ವದ ನಿಯೋಗವು ಏಪ್ರಿಲ್‌ 9ರಿಂದ 10ರ ವರೆಗೆ ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್‌ಗೆ ಭೇಟಿ ನೀಡಿತ್ತು.  

Written by - Bhavishya Shetty | Last Updated : Apr 26, 2022, 10:55 AM IST
  • ಎನ್‌ಆರ್‌ಐ ಮತದಾರರಿಗೆ ಎಲೆಕ್ಟ್ರಾನಿಕ್‌ ಮತಯಂತ್ರ
  • ಬ್ಯಾಲೆಟ್‌ ಸಿಸ್ಟಮ್‌ ಪರಿಚರಿಸಲು ಭಾರತೀಯ ಚುನಾವಣಾ ಆಯೋಗ ಯೋಜನೆ
  • ಚುನಾವಣಾ ಆಯೋಗದ ಹೇಳಿಕೆಯಲ್ಲಿ ಸ್ಪಷ್ಟನೆ
NRI: ಸಾಗರೋತ್ತರ ಮತದಾರರಿಗೆ ಎಲೆಕ್ಟ್ರಾನಿಕ್‌ ಮತಯಂತ್ರ ಪರಿಶೀಲನೆ!  title=
NRI Voters

ಸಾಗರೋತ್ತರ ಭಾರತೀಯ ಮತದಾರರಿಗೆ ಚುನಾವಣೆ ಸಂದರ್ಭದಲ್ಲಿ ಸಹಕಾರಿಯಾಗುವಂತೆ ಎಲೆಕ್ಟ್ರಾನಿಕ್‌ ಟ್ರಾನ್ಸ್‌ಮಿಟೆಡ್‌ ಪೋಸ್ಟಲ್‌ ಬ್ಯಾಲೆಟ್‌ ಸಿಸ್ಟಮ್‌ ಪರಿಚರಿಸಲು ಭಾರತೀಯ ಚುನಾವಣಾ ಆಯೋಗ ಯೋಜನೆ ರೂಪಿಸುತ್ತಿದೆ. ಈ ಪರಿಶೀಲನೆ ಕುರಿತು ಚುನಾವಣಾ ಆಯೋಗದ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. 

ಇದನ್ನು ಓದಿ: FedEX: ಫೆಡೆಕ್ಸ್‌ ಕಂಪನಿ ಸಿಇಒ ಸಂಜಾತ ರಾಜ್ ಸುಬ್ರಹ್ಮಣ್ಯಂ: ಭಾರತೀಯರ ಹವಾ ಶುರು

ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಸುಶೀಲ್‌ ಚಂದ್ರ ನೇತೃತ್ವದ ನಿಯೋಗವು ಏಪ್ರಿಲ್‌ 9ರಿಂದ 10ರ ವರೆಗೆ ದಕ್ಷಿಣ ಆಫ್ರಿಕಾ ಮತ್ತು ಮಾರಿಷಸ್‌ಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಅನೇಕ ಸಭೆಗಳನ್ನು ನಡೆಸಿದ ಆಯೋಗವು, ಮುಕ್ತ ಮತ್ತು ನ್ಯಾಯಯುತವಾದ ಚುನಾವಣೆಯನ್ನು ಯಾವರೀತಿ ನಡೆಸಬಹುದು ಎಂಬುದರ ಕುರಿತು ಚರ್ಚಿಸಿದೆ.  ಇನ್ನೊಂದೆಡೆ ಎರಡೂ ದೇಶಗಳ ಎನ್‌ಆರ್‌ಐ ಸಮುದಾಯಗಳೊಂದಿಗೆ ಸಂವಾದ ನಡೆಸಲಾಗಿದೆ. 

ಇದನ್ನು ಓದಿ: NRI: ಭಾರತದ ಬೆಳವಣಿಗೆಯಲ್ಲಿ ಪಾಲುದಾರರಾಗಲು ವಿದೇಶದಲ್ಲಿರುವ ಭಾರತೀಯರಿಗೆ ಕರೆ ನೀಡಿದ ನಿರ್ಮಲಾ ಸೀತಾರಾಮನ್

ಎನ್‌ಆರ್‌ಐಗಳಿಗೆ ನಿರ್ಮಲಾ ಸೀತಾರಾಮನ್ ಕರೆ: 
ಇನ್ನು ಇತ್ತೀಚಿಗೆ ಭಾರತದ ಬೆಳವಣಿಗೆಯಲ್ಲಿ ಪಾಲುದಾರರಾಗಲು ವಿದೇಶದಲ್ಲಿರುವ ಭಾರತೀಯರಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ. ಭಾರತ ಮುಂದಿನ 25 ವರ್ಷಗಳಲ್ಲಿ ತನ್ನ 100ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಲಿದ್ದು, ಭಾರತೀಯ ಜಾಗತಿಕ ಸಮುದಾಯದ ಜನರು ಭಾರತದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ.
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News