ಪ್ರಶಸ್ತಿ ಮೇಲೆ ಕಣ್ಣಿಟ್ಟು ಸುಳ್ಳು ಬರೆದ ಗಿರೀಶ್ ಕಾರ್ನಾಡ್ ಓರ್ವ ಡುಪ್ಲಿಕೇಟ್: ಅಡ್ಡಂಡ ಕಾರ್ಯಪ್ಪ
ಕೃತಿ ಚೌರ್ಯ ಮಾಡುವುದರಲ್ಲಿ ಕಾರ್ನಾಡ್ ಫೇಮಸ್. 25 ವರ್ಷದ ಹಿಂದೆ ಗಿರೀಶ್ ಕಾರ್ನಾಡ್ ಬರೆದ ‘ಟಿಪ್ಪು ಕಂಡ ಕನಸು’ ನಾಟಕದ ಸತ್ಯದ ತಲೆಗೆ ಹೊಡೆದಂತೆ ಸುಳ್ಳು ತುಂಬಿದ್ದಾರೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ಧಾರವಾಡ: ಸಾಹಿತಿ ಗಿರೀಶ್ ಕಾರ್ನಾಡ್ ಓರ್ವ ಡುಪ್ಲಿಕೇಟ್ ಎಂದು ಮೈಸೂರು ರಂಗಾಯನ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ. ಧಾರವಾಡದಲ್ಲಿ ಆಯೋಜಿಸಿದ್ದ ‘ಟಿಪ್ಪು ನಿಜ ಕನಸುಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಿರೀಶ್ ಕಾರ್ನಾಡ್ ನನಗೆ ಭಾವ ಆಗಬೇಕು. ಅವರ ಪತ್ನಿ ನಮ್ಮೂರಿನ ಕಡೆಯವರು. ಹೀಗಾಗಿ ಕಾರ್ನಾಡ್ ನಮಗೆ ಭಾವ, ನಮ್ಮ ಭಾವನವರ ಬಗ್ಗೆ ನಾನು ಏನಾದರೂ ಮಾತನಾಡಬಹುದು’ ಎಂದು ಹೇಳಿದರು.
ಹಿರಿಯ ಸಾಹಿತಿ ಕೀರ್ತಿನಾಥ ಕುರ್ತಕೋಟಿಯವರು ಬರೆದಿದ್ದಕ್ಕೆ ಹೆಸರು ಕಾರ್ನಾಡ್‍ರದ್ದು. ಗೋಪಾಲ ವಾಜಪೇಯಿಯವರ ಹಾಡಿಗೂ ತಮ್ಮ ಹೆಸರು ಹಾಕಿದ್ದರು. ಆದರೆ ಕೋರ್ಟ್‌ಗೆ ಹೋದ ಮೇಲೆ ವಾಪಸ್ ತಗೊಂಡರು. ಕೃತಿ ಚೌರ್ಯ ಮಾಡುವುದರಲ್ಲಿ ಕಾರ್ನಾಡ್ ಫೇಮಸ್. 25 ವರ್ಷದ ಹಿಂದೆ ಗಿರೀಶ್ ಕಾರ್ನಾಡ್ ‘ಟಿಪ್ಪು ಕಂಡ ಕನಸು’ ನಾಟಕ ಬರೆದಿದ್ದಾರೆ. ಅದರಲ್ಲಿ ಸತ್ಯದ ತಲೆಗೆ ಹೊಡೆದಂತೆ ಸುಳ್ಳು ತುಂಬಿದ್ದಾರೆ. ಪ್ರಶಸ್ತಿಯ ಮೇಲೆ ಕಣ್ಣು ಇಟ್ಟು ಸುಳ್ಳು ಬರೆಯುವ ಕಾರ್ನಾಡ್ ಡುಪ್ಲಿಕೇಟ್ ಎಂದು ಕಾರ್ಯಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಕಾರು ಹಾಗೂ ಬೈಕ್ ಮಧ್ಯೆ ಡಿಕ್ಕಿ, ಸ್ಥಳದಲ್ಲಿಯೇ ಮೂವರ ಸಾವು
‘ಟಿಪ್ಪು ನಿಜ ಕನಸುಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ‘ಕೊಡಗಿನ ಜನ ಸುತ್ತಿ ಬಳಸಿ ಹೇಳುವುದಿಲ್ಲ, ನೇರವಾಗಿ ಮಾತನಾಡುತ್ತಾರೆ. ಆದರೆ ಇದ್ದದ್ದು ಇದ್ದಂತೆ ಹೇಳಿದರೆ ಕೆಲವರಿಗೆ ಎದೆಗೆ ಒದ್ದಂತೆ ಆಗುತ್ತದೆ. ನಮ್ಮ ಇತಿಹಾಸದ ಪಠ್ಯದಲ್ಲಿ ನಮಗೂ ಟಿಪ್ಪು ಪಾಠ ಇತ್ತು. ಟಿಪ್ಪುವನ್ನು ವೈಭವೀಕರಿಸಿದ ಪಾಠವನ್ನೇ ಹೇಳಿದ್ದರು. ನಾವು ಯಾರೂ ಮಾರ್ಕ್ಸ್‌ವಾದಿಗಳ ಆಗಿರಲಿಲ್ಲ, ಆದರೆ ಮಾರ್ಕ್ಸ್ ಹಿಂದೆ ಬಿದ್ದಿದ್ದೇವು. ಹೀಗಾಗಿ ಟಿಪ್ಪು ಏನು ಎಂದರೆ ‘ಮೈಸೂರಿನ ಹುಲಿ’ ಅಂತಾನೇ ಬರೆದಿದ್ದೇವು. ಟಿಪ್ಪು ಹುಲಿ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು ಆತನ ಕಾಲದಲ್ಲಿ ಬರುವುದಿಲ್ಲವೆಂದು ಹೇಳಿದರು.
ಆದರೆ ಆತ ಕೇವಲ ರಾಜ್ಯ ಆಳುವುದಕ್ಕೆ ಬಂದವನಲ್ಲ. ಸಂಸ್ಕೃತಿಯ ನಾಶಕ್ಕೆ ಕೈ ಹಾಕಿದ್ದು ವಾಸ್ತವದ ಇತಿಹಾಸದಲ್ಲಿ ಇಲ್ಲ. ಆದರೆ ನಮಗೆ ಕಲಿಸಿದ ಇತಿಹಾಸದಲ್ಲಿ ಅದು ಯಾವುದೂ ಇಲ್ಲ. ಮೈಸೂರು ಮಣ್ಣಿನ ಯಾವ ಸಂಸ್ಕೃತಿಯನ್ನು ಟಿಪ್ಪು ಅಳವಡಿಸಿಕೊಂಡಿರಲಿಲ್ಲ. ಮೈಸೂರು ಸಂಸ್ಥಾನದ ನಿಜ ವಾರಸುದಾರನೂ ಆತ ಅಲ್ಲ. ಆಗ ಇದ್ದದ್ದು ಮೈಸೂರು ಒಡೆಯರ್, ಹೈದರನಿಗೆ ಜವಾಬ್ದಾರಿ ಕೊಟ್ಟಿದ್ದರು. ಆತ ಮೋಸದಿಂದ ಸಾಮ್ರಾಜ್ಯ ನಿಷ್ಠರನ್ನು ಕೊಲ್ಲಿಸಿದ ಅಂತ ಹೇಳಿದರು.
ಇದನ್ನೂ ಓದಿ: ಶೀಘ್ರವೇ ವಿಶ್ವ ಕನ್ನಡ ಸಮ್ಮೇಳನ : ಸಿಎಂ ಬೊಮ್ಮಾಯಿ
ಹೈದರನಿಗೆ ಧೂರ್ತ, ನಂಬಿಕೆ ದ್ರೋಹಿ, ನಾಡ ದ್ರೋಹಿ ಅಂತಾ ಕರೆಯಬೇಕಿತ್ತು. ಆದರೆ ಹಾಗೆ ಕರಿಯಲೇ ಇಲ್ಲ. ಆತನ ಮಗ ಟಿಪ್ಪು ಶೃಂಗೇರಿಗೆ ಉಂಬಳಿ, ನಂಜುಡೇಶ್ವರನಿಗೆ ದಾನ ಕೊಟ್ಟ ಅಂತಾರೆ. ತಂದೆಯ ಕಾಲದಲ್ಲಿ ಮೊದಲ 11 ವರ್ಷ ಆತ ಕ್ರೂರಿ, ಆ ಬಳಿಕ ಆತ ತನ್ನನ್ನು ತಾನು ಸುಲ್ತಾನ್ ಮಾಡಿಕೊಂಡ. ಮೈಸೂರು ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಆತ ಸೋತ ಬಳಿಕ ತಂತ್ರಗಾರಿಕೆ ಮಾಡುತ್ತಾನೆ. ಆಗ ಓಲೈಸಿಕೊಳ್ಳೊಕೆ ಅಂತಾ ಶೃಂಗೇರಿಗೆ ಉಂಬಳಿ, ನಂಜನಗೂಡಿಗೆ ದಾನ ಮಾಡಿದ್ದಾನೆ. ಅದೇ ರೀತಿ ಶ್ರೀರಂಗಪಟ್ಟಣದ ಮೂಡಲಬಾಗಿಲ ಆಂಜನೇಯ ದೇವಸ್ಥಾನವನ್ನು ಮಸೀದಿ ಮಾಡಿದ್ದು ಅಷ್ಟೇ ಸತ್ಯ. ಆತನ ಖಡ್ಗದಲ್ಲಿ ಕಾಫೀರರ ರಕ್ತಕ್ಕಾಗಿ ಕಾತರಿಸುತ್ತದೆ ಅಂತಾ ಇತ್ತು. ಟಿಪ್ಪು ಜಯಂತಿ ಮಾಡೋರಿಗೆ ಕಾಫೀರರು ಎಂದರೆ ಯಾರು ಅಂತಾ ಕೇಳಬೇಕಿದೆ. ಯಾರೂ ಅಲ್ಲಾನನ್ನು ಒಪ್ಪುವುದಿಲ್ಲವೋ ಅವರೆಲ್ಲರೂ ಕಾಫೀರರು. ಟಿಪ್ಪುವಿನ ಖಡ್ಗ ಮುಸ್ಲಿಂಮೇತರರ ರಕ್ತಕ್ಕಾಗಿ ಕಾತರಿಸುತ್ತಿತ್ತು ಎಂದು ಕಿಡಿಕಾರಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.