ಮಂಡ್ಯ : ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಒಬ್ಬ ಹೆಣ್ಣು ವಿದ್ಯಾಭ್ಯಾಸ ಪಡೆದರೆ ಇಡೀ ಕುಟುಂಬವೇ ಶಿಕ್ಷಣ ಪಡೆದಂತೆ ಎಂಬೆಲ್ಲಾ ಗಾದೆ ಮಾತೆಗಳನ್ನು ನಾವು ಕೇಳಿರುತ್ತೇವೆ.  ಹೌಡು, ಹೆಣ್ಣಿನ ಜೀವನದಲ್ಲಿ ಶಿಕ್ಷಣಕ್ಕೆ ಪ್ರಮುಖ ಸ್ಥಾನವಿದೆ.  ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ಮಂಡ್ಯದ ಈ ವಿದ್ಯಾಥಿನಿ ತೋರಿಸಿಕೊಟ್ಟಿದ್ದಾರೆ. ಮದುವೆ ದಿನವೇ ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

 ಪಾಂಡವಪುರ ತಾಲೂಕಿನ  ಲಿಂಗಾಪುರ ಗ್ರಾಮದ ವಿದ್ಯಾರ್ಥಿನಿ ಐಶ್ವರ್ಯ.  ಇವರು,  ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ. ಐಶ್ವರ್ಯ ಪರೀಕ್ಷೆಯ ದಿನವೇ ಮದುವೆ ಕೂಡಾ ನಿಗದಿಯಾಗಿತ್ತು. ಆದರೂ, ಮದುವೆ ಶಾಸ್ತ್ರ ಮುಗಿಸಿಕೊಂಡ ಬಳಿಕ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಎಸ್.ಟಿ.ಜಿ. ಕಾಲೇಜಿನಲ್ಲಿ ಘಟನೆ ನಡೆದಿದೆ. 


ಇದನ್ನೂ ಓದಿ : Today Vegetables Price: ಅಕಾಲಿಕ‌ ಮಳೆ.. ಗಗನಕ್ಕೇರಿದ ತರಕಾರಿ ಬೆಲೆ


ತಾಳಿ ಕಟ್ಟಿಸಿಕೊಂಡು ಬಂದು ಐಶ್ವರ್ಯ ಪರೀಕ್ಷೆಗೆ ಹಾಜರಾಗಿದ್ದಾರೆ. ಮದುವೆ ದಿನವೇ ಪರೀಕ್ಷೆ ಬರೆದು ಎಲ್ಲರಿಗೂ ಈ ವಿದ್ಯಾರ್ಥಿನಿ ಮಾದರಿಯಾಗಿದ್ದಾರೆ.  ಪರೀಕ್ಷೆ ದಿನವೇ  ಮದುವೆ ನಿಗದಿಯಾದ ಕಾರಣ, ಮದುವೆಯನ್ನು ಬಿಡುವಂತಿರಲಿಲ್ಲ. ಇತ್ತ ಪರೀಕ್ಶೆಯನ್ನೂ ಬಿಡುವಂತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಮದುವೆಯ ಶಾಸ್ತ್ರ ಮುಗಿಸಿಕೊಂಡ ಐಶ್ವರ್ಯ, ತಾಳಿ ಕಟ್ಟಿಸಿಕೊಂಡು ಬಂದು ಪರಿಕ್ಷೆ ಎದುರಿಸಿದ್ದಾರೆ.


ಐಶ್ವರ್ಯ ಈ ನಿರ್ಧಾರಕ್ಕೆ  ಪೋಷಕರು ಬೆಂಬಲಿಸಿದ್ದಾರೆ. ಐಶ್ವರ್ಯ ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿ ಸಹಕರಿಸಿದ್ದಾರೆ. 


ಇದನ್ನೂ ಓದಿ : Tomato Flu ತಡೆಗಟ್ಟಲು ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ- ಡಾ.ಕೆ.ಸುಧಾಕರ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.