ಬೆಂಗಳೂರು: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್. ಕರ್ತವ್ಯಲೋಪ, ಭ್ರಷ್ಟಾಚಾರ, ಇಲಾಖೆ ವಿಚಾರಣೆ ಮತ್ತಿತರ ಕಾರಣಕ್ಕೆ ಅಮಾನತು ಮಾಡಿ ತಿಂಗಳಾನುಗಟ್ಟಲೇ ಮುಂದುವರೆಸಿ ಹಿಂಸೆ ನೀಡುತ್ತಿದ್ದ ಪದ್ಧತಿಗೆ ಸರ್ಕಾರ ಬ್ರೇಕ್ ಹಾಕಿದೆ. ಇನ್ನು ಮೇಲೆ ಯಾವುದೇ ಆರೋಪದಡಿ ಸರ್ಕಾರಿ ನೌಕರ(Government Employees) ಅಮಾನತಿಗೆ ಒಳಗಾದರೆ, ಆರೋಪ ಕುರಿತ ಇಲಾಖೆ ವಿಚಾರಣೆ ಆರು ತಿಂಗಳಲ್ಲಿ ಮುಗಿಯಬೇಕು. ಅಮಾನತು ಅವಧಿ ಆರು ತಿಂಗಳ ಮೇಲೆ ಮುಂದುವರೆಸುವಂತಿಲ್ಲ, ಯಾವುದೇ ಆದೇಶ ನೀಡದಿದ್ದ ಪಕ್ಷದಲ್ಲಿ ಅಮಾನತು ತಾನಾಗಿ ರದ್ದಾಗಿದೆ ಎಂದೇ ಪರಿಭಾವಿಸಬೇಕು !


COMMERCIAL BREAK
SCROLL TO CONTINUE READING

'ಬಳ್ಳಾರಿ ವಿಭಜನೆ ಆದಂತೆ ಬೆಳಗಾವಿಯೂ ವಿಭಜನೆ ಆಗಲೇಬೇಕು'


ಹೌದು. ಇಂತದ್ದೊಂದು ಮಹತ್ವದ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದೆ. ಕರ್ನಾಟಕ ನಾಗರಿಕ ಸೇವಾ ನಿಯಮ 1957 ನಿಯಮ10 ಕ್ಕೆ ಕೆಲವು ತಿದ್ದುಪಡಿ ತರಲಾಗಿದೆ. ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಸರ್ಕಾರಿ ನೌಕರರನ್ನು ಅಮಾನತಿನಲ್ಲಿ ಇಡುವುದರಿಂದ ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ಬೀಳಲಿದೆ. ಮಾತ್ರವಲ್ಲ, ಸರ್ಕಾರಿ ನೌಕರರಿಗೂ ಕಿರುಕುಳ ನೀಡಲಾಗುತ್ತಿತ್ತು.


'ಜನಧನ್' ಖಾತೆದಾರರಿಗೆ ಕೇಂದ್ರ ಸರ್ಕಾರದಿಂದ 'ಭರ್ಜರಿ ಗುಡ್ ನ್ಯೂಸ್'!


ಯಾವುದೇ ಒಂದು ಆರೋಪ ಸಂಬಂಧ ಶಿಸ್ತು ಕ್ರಮಕ್ಕೆ ಆದೇಶ ಹೊರಡಿಸಿ ಐದು ವರ್ಷ ಆದರೂ ವಿಚಾರಣೆ ಮುಗಿಯುತ್ತಿರಲಿಲ್ಲ. ಹೀಗಾಗಿ ಸರ್ಕಾರಿ ನೌಕರರು ಅನಾವಶ್ಯಕವಾಗಿ ಅನುಭವಿಸುತ್ತಿದ್ದ ಕಿರುಕುಳದಿಂದ ಮುಕ್ತಿ ಪಡೆದಂತಾಗುತ್ತದೆ.


ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದು ಒಪ್ಪಿಕೊಂಡ್ರಾ ಡಿ.ಕೆ.ಶಿವಕುಮಾರ್..!?