ಬೆಳಗಾವಿ: 'ಧಾರವಾಡದಲ್ಲೂ ಮೊದಲು 18 ವಿಧಾನಸಭಾ ಕ್ಷೇತ್ರಗಳಿದ್ದವು. ಆಗ ಆ ಜಿಲ್ಲೆ ವಿಭಜನೆ ಮಾಡಲಾಯಿತು. ಅಂತೆಯೇ ಬೆಳಗಾವಿ ಜಿಲ್ಲೆಯನ್ನೂ ವಿಭಜಿಸಬೇಕು. ಗೋಕಾಕ, ಚಿಕ್ಕೋಡಿ ಮತ್ತು ಬೆಳಗಾವಿ ಮೂರು ಜಿಲ್ಲೆ ರಚಿಸಲೇಬೇಕು. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ವಿಭಜನೆ ಅಗತ್ಯವಾಗಿದೆ. ಇದನ್ನು ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಚಿಕ್ಕೋಡಿ ಜಿಲ್ಲೆ ರಚಿಸಬೇಕೆಂದು ಆ ಭಾಗದ ಬಿಜೆಪಿ ನಾಯಕರೂ ಅಲ್ಲಿ ಹೋರಾಟ ನಡೆಸಿರಲಿಲ್ಲವೇ?' ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಇಂದು ನಗರದ ಕಾಂಗ್ರೆಸ್(Congress) ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಬಂದಿರುವುದು ನಿಜ. ಆದರೆ, ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ. ರಾಜ್ಯ ಹಾಗೂ ಜಿಲ್ಲೆಯಲ್ಲೇ ಮಾಡುವುದಕ್ಕೆ ಬಹಳಷ್ಟು ಕೆಲಸವಿದೆ' ಎಂದರು.
'ಜನಧನ್' ಖಾತೆದಾರರಿಗೆ ಕೇಂದ್ರ ಸರ್ಕಾರದಿಂದ 'ಭರ್ಜರಿ ಗುಡ್ ನ್ಯೂಸ್'!
'ಅಭ್ಯರ್ಥಿ ಆಯ್ಕೆ ಕುರಿತು ಡಿಸೆಂಬರ್ ಮೊದಲ ವಾರ 2ನೇ ಸುತ್ತಿನ ಸಭೆ ನಡೆಸುತ್ತೇವೆ. ಯಾರ‍್ಯಾರು ಆಸಕ್ತರಿದ್ದಾರೆ ಮತ್ತು ಅವರ ಸಾಮರ್ಥ್ಯವೇನು ಎನ್ನುವುದನ್ನು ಪರಿಶೀಲಿಸಿ, ಮೂವರ ಹೆಸರನ್ನು ಕೆಪಿಸಿಸಿಗೆ ಕಳುಹಿಸಲಾಗುವುದು. ಅಂತಿಮ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತದೆ. ಅದಕ್ಕೆ ಬದ್ಧವಿದ್ದೇವೆ' ಎಂದು ತಿಳಿಸಿದರು.
ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದು ಒಪ್ಪಿಕೊಂಡ್ರಾ ಡಿ.ಕೆ.ಶಿವಕುಮಾರ್..!?
'ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಸಮರ್ಥರನ್ನು ಕಣಕ್ಕಿಳಿಸಲಾಗುವುದು' ಎಂದು ಪ್ರತಿಕ್ರಿಯಿಸಿದರು. 'ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ' ಎಂದರು. 'ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಟಿಕೆಟ್ ಕೇಳಿರುವ ವಿಚಾರ ನನಗೆ ಗೊತ್ತಿಲ್ಲ' ಎಂದರು.
ಗ್ರಾ .ಪಂ ಚುನಾವಣಾ ದಿನಾಂಕ ಘೋಷಣೆಗೂ ಮೊದ್ಲೇ ‘ಅಖಾಡಕ್ಕೆ ಧುಮುಕಿದ ಬಿಜೆಪಿ’