ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿರುವ ಡಾ. ಶಿವರಾಮ ಕಾರಂತ ಬಡಾವಣೆಗಾಗಿ ಜಮೀನು ನೀಡಿದ್ದ 21ಫಲಾನುಭವಿಗಳಗೆ 60:40 ಅನುಪಾತದಡಿ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಭೂಮಾಲಿಕರಿಗೆ ಐತಿರ್ಪು ರಚಿಸಿ ಸ್ವಾಧಿನ ಪಡಿಸಿಕೊಂಡ ಜಮೀನುಗಳಿಗೆ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದು, ಅದರಂತೆ ಬಡಾವಣೆಗಾಗಿ ಭೂಮಿ ನೀಡಿರುವ 113 ರೈತರಿಗೆ ಈವರೆಗೆ ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗಿದೆ. ಬಡಾವಣೆ ವ್ಯಾಪ್ತಿಯಲ್ಲಿ ಬರುವ ಗುಣಿ ಅಗ್ರಹಾರ, ಮೇಡಿ ಅಗ್ರಹಾರ ಗ್ರಾಮದ ಒಟ್ಟು 21 ರೈತರಿಗೆ ಇಂದು Entitlement certificate ಗಳನ್ನು ವಿತರಿಸಲಾಗಿದ್ದು, ಶೀಘ್ರದಲ್ಲಿ ಇನ್ನೂ 27 ರೈತರಿಗೆ ವಿತರಿಸಲಾಗುವುದು ಎಂದು ಬಡಿಎ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ.


ಇದನ್ನೂ ಓದಿ: Vasishta Simha - Haripriya : ಕ್ಯೂಟ್‌ ಆಗಿ ಲವ್‌ ಮ್ಯಾಟರ್‌ ರಿವೀಲ್‌ ಮಾಡಿದ ವಸಿಷ್ಠ ಸಿಂಹ


ಸರ್ವೋಚ್ಚ ನ್ಯಾಯ್ಯಲಯ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ನೇತೃತ್ವದ ಸಮಿತಿಯು ಡಾ. ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿ ಮೇಲುಸ್ತುವಾರಿಯನ್ನು ವಹಿಸಿದ್ದು, ಸಮಿತಿಯ ನಿರ್ದೇಶನದಂತೆ ಶ್ರೀ ಕುಮಾರ ನಾಯ್ಕ ಆಯುಕ್ತರು ಮತ್ತು ಡಾ. ಸೌಜನ್ಯ ಉಪ ಆಯುಕ್ತರು ಭೂಸ್ವಾದಿನ ಬಿಡಿಎ ರವರ ಉಸ್ತುವಾರಿಯಲ್ಲಿ ವಿಷೇಶ ಭೂ ಸ್ವಾಧೀನಾಧಿಕಾರಿಯಾದ ಡಾ. ಬಿ.ಆರ್.ಹರೀಶ ನಾಯ್ಕ ರವರು ಇಂದು ರೈತರ ಸ್ವಗ್ರಾಮದಲ್ಲೆ ಅರ್ಹತಾ ಪ್ರಮಾಣ ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ರೈತರು ಮತ್ತು ಭೂಮಾಲಿಕರು ಹಾಜರಿದ್ದರು.


ಇದನ್ನೂ ಓದಿ :  ಸಿಂಹ ನಿನ್ನ ತೋಳಿನಲ್ಲಿ ಕಂದ ನಾನು...!!


ಮಾನ್ಯ ಸರ್ವೋಚ್ಚ ನ್ಯಾಯ್ಯಲಯದ ನಿರ್ದೇನದಂತೆ ಭೂಮಾಲಿಕರಿಗೆ ಐತಿರ್ಪು ರಚಿಸಿ ಸ್ವಾಧಿನ ಪಡಿಸಿಕೊಂಡ ಜಮೀನುಗಳಿಗೆ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಶೇಕಡ 60-40 ರಂತೆ ಅಥವಾ ಹಣವನ್ನು ಪಡೆಯಬುದಾಗಿದ್ದು, ರೈತರು ಅಥವಾ ಭೂ ಮಾಲೀಕರು ತಮ್ಮ ಸ್ವ-ಇಚ್ಚೆಯಂತೆ ಯಾವುದಾದರು ಒಂದನ್ನು ಆಯ್ಕೆಮಾಡಿಕೊಂಡು ಲಿಖಿತ ರೂಪದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪ ಆಯುಕ್ತರು ಭೂಸ್ವಾದಿನ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.