`ಸೋನಿಯಾ ಗಾಂಧಿ ಅವರನ್ನು ಮುಟ್ಟಿದರೆ ಸರ್ಕಾರ ಚೂರಾಗಲಿದೆ`
ಕಾಂಗ್ರೆಸ್ ಪಕ್ಷ ಮೋದಿ ಹಾಗೂ ಗಡಿಪಾರ್ ಅಮಿತ್ ಶಾ ಅವರ ಧಮಕಿಗೆ ಹೆದರುವುದಿಲ್ಲ. ಸೋನಿಯಾ ಗಾಂಧಿ ಅವರನ್ನು ಮುಟ್ಟಿದರೆ ಸರ್ಕಾರ ಚೂರಾಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷ ಮೋದಿ ಹಾಗೂ ಗಡಿಪಾರ್ ಅಮಿತ್ ಶಾ ಅವರ ಧಮಕಿಗೆ ಹೆದರುವುದಿಲ್ಲ. ಸೋನಿಯಾ ಗಾಂಧಿ ಅವರನ್ನು ಮುಟ್ಟಿದರೆ ಸರ್ಕಾರ ಚೂರಾಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೇವಲ ರಾಜಕೀಯ ದುರುದ್ದೇಶದಿಂದ ಇಡಿ ವಿಚಾರಣೆ ಮಾಡುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನಿಂದ ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ 90 ಕೋಟಿ ರೂ. ನೀಡಿರುವುದು ಅವ್ಯವಹಾರ ಎಂದು ಹೇಳಿ 2012ರಲ್ಲಿ ಸುಬ್ರಮಣಿಯನ್ ಸ್ವಾಮಿ ಅವರ ಖಾಸಗಿ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ.
ಈ ಪ್ರಕರಣ ತನಿಖೆ 2017ರಲ್ಲಿ ಮುಕ್ತಾಯವಾಗಿ. ಇದರಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಪ್ರಕರಣ ಖುಲಾಸೆಯಾಗುತ್ತದೆ. ನ್ಯಾಷನಲ್ ಹೆರಾಲ್ಡ್ ಅದರದೇ ಆದ ಇತಿಹಾಸವನ್ನು ಹೊಂದಿದೆ. ಈ ಪತ್ರಿಕೆ ಕಾಂಗ್ರೆಸ್ ಪಕ್ಷದ ಪತ್ರಿಕೆಯಾಗಿದ್ದು, ಇದನ್ನು ನಡೆಸಲು ಕಷ್ಟ ಎದುರಾದಾಗ ಕಾಂಗ್ರೆಸ್ ಪಕ್ಷ 10 ಕೋಟಿಯಂತೆ ಹಲವು ಕಂತುಗಳಲ್ಲಿ ಹಣ ನೀಡುತ್ತದೆ. ಆ 90 ಕೋಟಿಯಲ್ಲಿ 63 ಕೋಟಿ ರೂ. ಪತ್ರಕರ್ತರಿಗೆ ವೇತನ ನೀಡಲಾಗಿದೆ. ದೆಹಲಿ ಕಾರ್ಪೊರೇಷನ್ ನಲ್ಲಿ ಪರವಾನಿಗೆಗಾಗಿ 10 ಕೋಟಿ ನೀಡಲಾಗಿದೆ. ಉಳಿದ 23 ಕೋಟಿ ಸರ್ಕಾರಿ ಸಂಸ್ಥೆಗಳಿಗೆ, ಬಾಡಿಗೆ, ಕಂದಾಯ ಕಟ್ಟಲಾಗಿದೆ.
ಇದನ್ನೂ ಓದಿ : Congress Protest : ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಕೈ ನಾಯಕರ ಕಾರಿಗೆ ಬೆಂಕಿ!
ಕಂಪನಿ ಕಾಯ್ದೆ ಪ್ರಕಾರ ಸೆಕ್ಷನ್ 25ರ ಅಡಿಯಲ್ಲಿ ಈ ಸಂಸ್ಥೆ ನೋಂದಣಿ ಆಘಿದ್ದು, ಈ ಸದಸ್ಯರಿಗೆ ವೇತನ ಇಲ್ಲ, ಲಾಭದ ಸಂಸ್ಥೆಯಲ್ಲ, ಇಲ್ಲಿರುವವರು ಒಂದು ಪೈಸೆ ಲಾಭ ಪಡೆಯಲು ಸಾಧ್ಯವಿಲ್ಲ. ಆದರೆ ಮೋದಿ ಅವರ ದುರಾಡಳಿತ ನಮ್ಮ ನಾಯಕರ ವಿರುದ್ಧ ಪಿಎಂಎಲ್ಎ ಪ್ರಕರಣದ ಅಡಿಯಲ್ಲಿ ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಆಮೂಲಕ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ.
ಈ ಕೇಸ್ ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿದ್ದು, ತೀರ್ಪು ಬಾಕಿ ಇದೆ. ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇವೆ. ಆದರೂ ಕಾಂಗ್ರೆಸ್ ನಾಯಕರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಗಾಂಧಿ, ನೆಹರೂ, ಇಂದಿರಾ ಗಾಂಧಿ ಅವರ ಮೇಲೆ ಅಪಪ್ರಚಾರ ಮಾಡಿ ಅವರ ಮೇಲೆ ಜನರಲ್ಲಿ ಕೆಟ್ಟ ಭಾವನೆ ಮೂಡುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಸೋನಿಯಾ ಗಾಂಧಿ ಅವರು ಹಣಕ್ಕೆ ಆಸೆ ಪಟ್ಟಿದ್ದರೆ ಪ್ರಧಾನಿ ಹುದ್ದೆನ್ನು ಅಲಂಕರಿಸುತ್ತಿದ್ದರು. ನಾವು ಕೂಡ ಆಗ ಸಂಸತ್ತಿನಲ್ಲಿದ್ದೆವು. ಆಗ ಅವರು ಪ್ರಧಾನಿ ಸ್ಥಾನ ಒಪ್ಪದೇ ವಿಶ್ವದ ದೊಡ್ಡ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ನೀಡಿದರು. 2000 ಇಸವಿಯಲ್ಲಿ ಮನಮೋಹನ್ ಸಿಂಗ್ ಅವರು ದೊಡ್ಡಬಳ್ಳಾಪುರದ ಶಿಬಿರದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದೆವು. ಅವರು ಒಪ್ಪಿದ್ದರು. ಆದರೆ ಮೂರು ದಿನಗಳು ಇರುವಾಗ ಬರುವುದಕ್ಕೆ ಆಗುವುದಿಲ್ಲ ಎಂದರು. ನಾನು ದೆಹಲಿಗೆ ಹೋಗಿ ಆಹ್ವಾನ ನೀಡಿದೆ. ಆಗ ಅವರು ಬರುವುದು ಹೇಗೆ ಎಂದು ಕೇಳಿದರು, ಹಾಲಿ ಸಂಸದರಿಗೆ 34 ವಿಮಾನ ಟಿಕೆಟ್ ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಹೇಳಿದೆ. ಆಗ ಅವರು ನಾನು ಕೇವಲ ಸಂಸತ್ತಿನ ಕೆಲಸಕ್ಕೆ ಮಾತ್ರ ಬಳಸುತ್ತೇನೆ ಪಕ್ಷದ ಕೆಲಸಕ್ಕೆ ಅಲ್ಲ ಎಂದರು. ಅಂತಹವರನ್ನು ಪ್ರಧಾನಿ ಮಾಡಿದರು. ಇಂದು ಅಂತಹ ವ್ಯಕ್ತಿ ವಿರುದ್ಧವೂ ಅಪಪ್ರಚಾರ ಮಾಡುತ್ತಾರೆ.
ಇದನ್ನೂ ಓದಿ: UK PM race: ಬ್ರಿಟನ್ ಪ್ರಧಾನಿ ಚುನಾವಣೆ: ಅಂತಿಮ ಹಂತದಲ್ಲಿ ರಿಷಿ ಸುನಕ್, ಲಿಜ್ ಟ್ರುಸ್!
ನಾನು ಸೋನಿಯಾ ಗಾಂಧಿ ಅವರ ಜತೆ 20ಕ್ಕೂ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿದ್ದು, ಅವರು ಬಹಳ ಸ್ವಚ್ಛ ನಾಯಕರು. ಕಾಂಗ್ರೆಸ್ ನಾಯಕರು ಎಂದಿಗೂ ಸಾರ್ವಕರ್ ರೀತಿ ಕ್ಷಮೆ ಕೋರುವುದಿಲ್ಲ. ಸಾರ್ವಕರ್ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದರು. ವಾಜಪೇಯಿ ಅವರು 1942ರಲ್ಲಿ ದೇಶದ ರೈತರು, ಕಾರ್ಮಿಕರು, ಹೆಂಗಸರು, ಮಕ್ಕಳು ಮಾಡು ಇಲ್ಲವೆ ಮಡಿ ಎಂಬ ಗಾಂಧೀಜಿ ಅವರ ಕರೆಗೆ ಓಗೊಟ್ಟು ಜೈಲಿಗೆ ಹೋರಾಟ ಮಾಡಿದರು. ಆಗ ವಾಜಪೇಯಿ ಅವರು ಬಂಧನವಾದಾಗ ಅವರು ಮ್ಯಾಜಿಸ್ಟ್ರೇಟ್ ಮುಂದೆ ನಾನು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ, ನಾನು ಜನ ಸೇರಿದ್ದನ್ನು ನೋಡಲು ಬಂದಿದ್ದೆ ಎಂದು ಹೇಳುತ್ತಾರೆ. ಬ್ರಿಟೀಷರ ಗುಂಡಿಗೆ ಎದೆ ಕೊಟ್ಟವರು, ರಾಷ್ಟ್ರ ಧ್ವಜಕ್ಕೆ ಪ್ರಾಣ ಬಿಟ್ಟವರು ಕಾಂಗ್ರೆಸ್ ನಾಯಕರು ಎಂದು ಹೇಳಿದರು.
ಇದನ್ನೂ ಓದಿ: ವೃದ್ಧೆಯ ವೇಷಧರಿಸಿ ಬಂದು ಬ್ಯಾಂಕ್ ದರೋಡೆ ಮಾಡಿದ ಕಿಲಾಡಿ ಕಳ್ಳ
ನಮ್ಮ ನಿಮ್ಮ ಹಾಗೂ ಈ ದೇಶದ ಪರ ದೆಹಲಿಯಲ್ಲಿ ಹೋರಾಟ ಮಾಡಬಲ್ಲ ಏಕೈಕ ನಾಯಕಿ ಸೋನಿಯಾ ಗಾಂಧಿ ಅವರು. ಈ ಕಾರಣಕ್ಕೆ ಬಿಜೆಪಿಯವರಿಗೆ ಸೋನಿಯಾ ಗಾಂಧಿ ಅವರ ಮೇಲೆ ಸಿಟ್ಟು. ಅದು ರೈತರು, ಕಾರ್ಮಿಕರು, ಮಹಿಳೆಯರ ವಿಚಾರವಾಗಿರಬಹುದು ರಸ್ತೆಗಿಳಿದು ಹೋರಾಟ ಮಾಡುವವರು ಸೋನಿಯಾ ಗಾಂಧಿ. ಇದು ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ. 77ರಲ್ಲಿ ಇಂದಿರಾ ಗಾಂಧಿ ಅವರನ್ನು ಬಂಧಿಸಿದ್ದಾಗ ಬೆಂಗಳೂರಿನಲ್ಲಿ ಗಲಭೆಯಾಗಿ 11 ಜನ ಸತ್ತಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.