ಉಕ್ರೇನ್ನಿಂದ ಮನೆಗೆ ವಾಪಾಸ್ಸಾದ ಹಾಸನದ ವಿದ್ಯಾರ್ಥಿ
ಹಾಸನದ ಚನ್ನಪಟ್ಟಣ ಹೌಸಿಂಗ್‌ಬೋರ್ಡ್ ನಿವಾಸಿ ಮಹೇಶ್-ಜ್ಯೋತಿ ಪುತ್ರ ಮಿಥುನ್ (Mithun) ಎಂಬ ವಿದ್ಯಾರ್ಥಿ, ಇಂದು ಮಧ್ಯಾಹ್ನ ಮನೆಗೆ ಮರಳಿದ್ದಾರೆ. ಪುತ್ರನನ್ನು ಕಂಡು ತಂದೆ-ತಾಯಿ ಸಂತಸಗೊಂಡಿದ್ದಾರೆ.
ಹಾಸನ: ಉಕ್ರೇನ್ ಕೀವ್‌ನಲ್ಲಿ ಎಂ.ಬಿ.ಬಿ.ಎಸ್. ಓದುತ್ತಿದ್ದ ಹಾಸನದ (Hasana) ವಿದ್ಯಾರ್ಥಿ ಸುರಕ್ಷಿತವಾಗಿ ಮನೆಗೆ ವಾಪಾಸ್ಸಾಗಿದ್ದಾರೆ.
ಹಾಸನದ ಚನ್ನಪಟ್ಟಣ ಹೌಸಿಂಗ್‌ಬೋರ್ಡ್ ನಿವಾಸಿ ಮಹೇಶ್-ಜ್ಯೋತಿ ಪುತ್ರ ಮಿಥುನ್ (Mithun) ಎಂಬ ವಿದ್ಯಾರ್ಥಿ, ಇಂದು ಮಧ್ಯಾಹ್ನ ಮನೆಗೆ ಮರಳಿದ್ದಾರೆ. ಪುತ್ರನನ್ನು ಕಂಡು ತಂದೆ-ತಾಯಿ ಸಂತಸಗೊಂಡಿದ್ದಾರೆ.
ಇದನ್ನೂ ಓದಿ: Russia-Ukraine Crisis: ಮೋದಿ ಸರ್ಕಾರದ ವಿದೇಶಾಂಗ ನೀತಿಗೆ Shashi Tharoor ಫಿದಾ, ಹೇಳಿದ್ದೇನು?
ಉಕ್ರೇನ್‌ನ ಸ್ಥಿತಿ ಹಾಗೂ ಭಾರತಕ್ಕೆ (India) ವಾಪಾಸ್ಸಾದ ಬಗ್ಗೆ ಮಾತನಾಡಿದ ಮಿಥುನ್, ನಾವು ಇಲ್ಲಿಯೇ ಮೆಡಿಕಲ್ ಓದಬೇಕೆಂದಿದ್ದೆ. ಆದರೆ ಇಲ್ಲಿ ವಿದ್ಯಾಭ್ಯಾಸದ ಖರ್ಚು ಜಾಸ್ತಿಯಿತ್ತು, ಉಕ್ರೇನ್‌ನಲ್ಲಿ ಕಡಿಮೆ ಇದ್ದುದ್ದರಿಂದ ಅಲ್ಲಿಗೆ ಸೇರಿದೆ. ನವೆಂಬರ್‌ಗೆ ಕೀವ್ (Kyiv) ಯೂನಿವರ್ಸಿಟಿಗೆ ಸೇರಿದೆ, ಜನವರಿಯಿಂದ ತರಗತಿಗಳು ಆರಂಭವಾದವು. ಯುದ್ದ ನಡೆಯುತ್ತದೆ ಎಂದು ಮೊದಲೆ ಸೂಚನೆ ನೀಡಿದ್ದರು. ಆ ಕಾರಣ ಆನ್‌ಲೈನ್ ಕ್ಲಾಸ್ ಮಾತ್ರ ಮಾಡುತ್ತಿದ್ದರು. ಫೆ.24 ರಿಂದ ಬಾಂಬ್ ದಾಳಿ, ಏರ್ ಸ್ಟ್ರೈಕ್ (Air strike)ಶುರುವಾಯಿತು, ವಿಮಾನ ಹಾರಾಟ ಸಂಪೂರ್ಣ ಬಂದ್ ಮಾಡಿದರು ಎಂದು ಹೇಳಿದ್ದಾರೆ.
ಅಂಡರ್‌ಗ್ರೌಂಡ್‌ನಲ್ಲಿದ್ದ ಜಿಮ್‌ನಲ್ಲಿ ಸ್ಟೇ (Russia-Ukraine war) ಮಾಡುತ್ತಿದ್ದೆವು. ಈ ವೇಳೆ ಉಕ್ರೇನ್‌ನ ಸ್ಥಳೀಯರು ಗನ್ ತೆಗೆದುಕೊಂಡು ಬಂದು ನೀವೆಲ್ಲಾ ಒಂದೆಕಡೆ ಯಾಕೆ ಇದ್ದೀರಿ, ನೀವು ರಷ್ಯಾದವರ ಎಂದು ಕಿರಿಕ್ ಮಾಡಿದರು. ಮಾರನೇ ದಿನ ಭಾರತಕ್ಕೆ ಹೊರಟೆವು. ಭಾರತೀಯ ರಾಯಭಾರಿ ಕಚೇರಿಯವರು ತುಂಬಾ ಸಹಾಯ ಮಾಡಿದರು ಎಂದ ಮಿಥುನ್, ಭಾರತೀಯ ರಾಯಭಾರಿ ಕಚೇರಿಯವರಿಗೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Nail Cutting: ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎಂದು ಏಕೆ ಹೇಳುತ್ತಾರೆ ಹಿರಿಯರು?
ಖಾರ್ಕಿವ್‌ನಲ್ಲಿರುವ ವಿದ್ಯಾರ್ಥಿಗಳು ಹೆಚ್ಚು ತೊಂದರೆಯಲ್ಲಿದ್ದಾರೆ. ಹಾವೇರಿ ನವೀನ್ (Naveen) ನನಗೆ ಪರಿಚಯ. ಖಾರ್ಕಿವ್‌ನಲ್ಲಿ ನವೀನ್ ಓದುತ್ತಿದ್ದ ಕಾಲೇಜಿಗೆ ಸೇರಲು ನಿರ್ಧರಿಸಿದ್ದೆ. ನವೀನ್ ಅವರೇ ಇಲ್ಲಿಗೆ ಬಾ ಎಜುಕೇಶನ್ ಚೆನ್ನಾಗಿದೆ, ಉಕ್ರೇನ್‌ನಲ್ಲೇ ಖಾರ್ಕಿವ್ ಯೂನಿವರ್ಸಿಟಿ ಬೆಸ್ಟ್ ಅಂದಿದ್ದರು. ನವೀನ್ ಅವರು ತುಂಬಾ ಹಂಬಲ್‌ಮೆನ್. ಖಾರ್ಕಿವ್‌ನಲ್ಲಿ ಅವರಿಗೆ ನೀರಿಗೂ ತೊಂದರೆಯಿತ್ತು. ಅವರ ಸಾವು ತುಂಬಾ ನೋವುಂಟು ಮಾಡಿದೆ ಎಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.