ವಾಷಿಂಗ್ಟನ್: ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ(Russia Ukraine War)ದ ಮೇಲೆ ಅಮೆರಿಕ ಸೇರಿದಂತೆ ಅನೇಕ ದೇಶಗಳು ವಿವಿಧ ರೀತಿಯ ನಿರ್ಬಂಧಗಳನ್ನು ವಿಧಿಸಿವೆ. ಈಗಾಗಲೇ ಹಣಕಾಸು ಸೇರಿದಂತೆ ವಿವಿಧ ನಿರ್ಬಂಧ ವಿಧಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ವ್ಲಾದಿಮಿರ್ ಪುಟೀನ್ ಯುದ್ಧನೀತಿಯನ್ನು ಖಂಡಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ವಿಚಾರ(Russia Ukraine Crisis)ದಲ್ಲಿ ಭಾರತವು ತಟಸ್ಥ ನಿಲುವು ತಾಳಿದೆ. ರಷ್ಯಾ ಜೊತೆಗೆ ರಕ್ಷಣಾ ವ್ಯವಸ್ಥೆಯ S-400 ಕ್ಷಿಪಣಿ ಖರೀದಿ(S-400 Air Defense System)ಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಭಾರತದ ವಿರುದ್ಧ CAATSA ಕಾನೂನಿನಡಿ ನಿರ್ಬಂಧಗಳನ್ನು ಹೇರಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ನಿರ್ಧರಿಸಲಿದ್ದಾರೆ ಎಂದು ವರದಿಯಾಗಿದೆ.
ಬಿಡೆನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ಅಮೆರಿಕದ ಶಾಸಕರಿಗೆ ನೀಡಿದ್ದಾರೆ. ಅಮೆರಿಕದ ವಿರೋಧಿ ದೇಶಗಳನ್ನು ನಿಗ್ರಹಿಸುವ ನಿರ್ಬಂಧಗಳ ದೇಶೀಯ ಕಾಯ್ದೆ(CAATSA)ಯಡಿ ವಹಿವಾಟು ನಡೆಸುವ ಇರಾನ್, ಉತ್ತರ ಕೊರಿಯಾ ಅಥವಾ ರಷ್ಯಾದೊಂದಿಗೆ ಮಹತ್ವದ ವಹಿವಾಟು ಹೊಂದಿರುವ ಯಾವುದೇ ದೇಶದ ವಿರುದ್ಧ ನಿರ್ಬಂಧಗಳನ್ನು ವಿಧಿಸುವ ಅಧಿಕಾರವನ್ನು ಅಮೆರಿಕ ಆಡಳಿತವು ಹೊಂದಿದೆ.
ಇದನ್ನೂ ಓದಿ: ರಷ್ಯಾದ ಮೇಲಿನ ಅಮೆರಿಕ ನಿರ್ಬಂಧಗಳು ಭಾರತೀಯ ವಾಯುಪಡೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
CAATSA ಕಾನೂನು ಎಂದರೇನು?
2014ರಲ್ಲಿ ಕ್ರಿಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿತ್ತು ಮತ್ತು 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಅವರ ಆಪಾದಿತ ಹಸ್ತಕ್ಷೇಪಕ್ಕೆ ಪ್ರತಿಕ್ರಿಯೆಯಾಗಿ ಆ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ವಾಷಿಂಗ್ಟನ್‌ಗೆ ಅಧಿಕಾರ ನೀಡುವ ಕಟ್ಟುನಿಟ್ಟಾದ ಅಮೆರಿಕದ ಕಾನೂನೇ CAATSA ಆಗಿದೆ.
ಭಾರತದ ಮೇಲೆ ನಿರ್ಬಂಧ ಹೇರುತ್ತಾರಾ ಬಿಡೆನ್?
ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೊನಾಲ್ಡ್ ಲು(Donald Lu) ಅವರು ಭಾರತದ ವಿರುದ್ಧ ಸಂಭವನೀಯ CAATSA ನಿರ್ಬಂಧಗಳ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಪೂರ್ವ, ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ ಮತ್ತು ಭಯೋತ್ಪಾದನಾ ನಿಗ್ರಹ ವ್ಯವಹಾರಗಳ ಸೆನೆಟ್‌ನ ವಿದೇಶಿ ಸಂಬಂಧಗಳ ಉಪಸಮಿತಿಯ ಸದಸ್ಯರಿಗೆ ಈ ಮಾಹಿತಿ ತಿಳಿಸಿರುವ ಅವರು, ಭಾರತದ ಮೇಲೆ ನಿರ್ಬಂಧ(India-US Relation) ಹೇರಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಬಿಡೆನ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾದ ದಾಳಿ ಪರಿಣಾಮ ಬೀರುತ್ತದೆಯೇ?
‘ಬಿಡೆನ್ ಆಡಳಿತವು CAATSA ಕಾನೂನಿಗೆ ಬದ್ಧವಾಗಿರುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ಜಾರಿಗೆ ತರುತ್ತದೆ. ಇದರ ಯಾವುದೇ ಅಂಶವನ್ನು ಮುಂದುವರಿಸುವ ಮೊದಲು ಆಡಳಿತವು ಕಾಂಗ್ರೆಸ್‌ನೊಂದಿಗೆ ಸಮಾಲೋಚಿಸಲಿದೆ. ಆದರೆ ಭಾರತದ ವಿರುದ್ಧ ನಿರ್ಬಂಧಗಳನ್ನು ಹೇರುವ ವಿಷಯದಲ್ಲಿ ಅಧ್ಯಕ್ಷರು ಅಥವಾ ವಿದೇಶಾಂಗ ಸಚಿವರ ನಿರ್ಧಾರದ ಬಗ್ಗೆ ಯಾವುದೇ ಊಹೆ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಉಕ್ರೇನ್ ಮೇಲಿನ ರಷ್ಯಾದ ಮಿಲಿಟರಿ ಕ್ರಮವು ಈ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಹೇಳಲು ಸಹ ನನಗೆ ಸಾಧ್ಯವಾಗುತ್ತಿಲ್ಲ’ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಮೂರನೇ ಜಾಗತಿಕ ಯುದ್ಧ ಪರಮಾಣು ಯುದ್ಧವಾಗಿರಲಿದೆ ಎಂದ ರಷ್ಯಾ ವಿದೇಶಾಂಗ ಸಚಿವ..!
ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ
CAATSA ಅಡಿ ಭಾರತದ ಮೇಲೆ ನಿರ್ಬಂಧಗಳನ್ನು ಹೇರುವ ವಿಷಯದ ಬಗ್ಗೆ ಬಿಡೆನ್(Joe Biden) ಆಡಳಿತ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲವೆಂದು ಡೊನಾಲ್ಡ್ ಲು ಸ್ಪಷ್ಟಪಡಿಸಿದ್ದಾರೆ. ‘ಭಾರತ ನಿಜವಾಗಿಯೂ ನಮ್ಮ ಅತ್ಯಂತ ಪ್ರಮುಖ ಭದ್ರತಾ ಪಾಲುದಾರ. ಈ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಎದುರು ನೋಡುತ್ತಿದ್ದೇವೆ. ರಷ್ಯಾ ತೀವ್ರ ಟೀಕೆಗಳನ್ನು ಎದುರಿಸಿದ ರೀತಿ, ಮಾಸ್ಕೋದಿಂದ ದೂರವಾಗುವ ಸಮಯ ಬಂದಿದೆ ಎಂದು ಭಾರತ ಅರ್ಥಮಾಡಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಅಂತಾ ಹೇಳಿದ್ದಾರೆ.
ರಷ್ಯಾದ ಬ್ಯಾಂಕುಗಳ ಮೇಲೆ ಹೇರಲಾದ ವ್ಯಾಪಕ ನಿರ್ಬಂಧಗಳಿಂದಾಗಿ ಯಾವುದೇ ದೇಶವು ರಷ್ಯಾದಿಂದ ಪ್ರಮುಖ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅತ್ಯಂತ ಕಷ್ಟಕರವಾಗಿದೆ ಎಂದು ಡೊನಾಲ್ಡ್ ಲು ಹೇಳಿದ್ದಾರೆ. ‘ಕಳೆದ ಕೆಲವು ವಾರಗಳಲ್ಲಿ ಭಾರತವು MiG-29 ಆರ್ಡರ್‌ಗಳು, ರಷ್ಯಾದ ಹೆಲಿಕಾಪ್ಟರ್‌ಗಳು ಮತ್ತು Anti-tank Weapons ಆರ್ಡರ್‌ಗಳನ್ನು ಹೇಗೆ ರದ್ದುಗೊಳಿಸಿದೆ ಎಂಬುದನ್ನು ನಾವು ನೋಡಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಖಂಡಿಸುವ ನಿರ್ಣಯದ ಮೇಲೆ ವಿಶ್ವಸಂಸ್ಥೆಯಲ್ಲಿ ಮತದಾನದಿಂದ ದೂರ ಉಳಿದಿದ್ದಕ್ಕಾಗಿ ಭಾರತವು ರಿಪಬ್ಲಿಕನ್ ಮತ್ತು ಡೆಮೋಕ್ರಾಟ್‌ಗಳಿಂದ ಟೀಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಲು ಅವರಿಂದ ಈ ಹೇಳಿಕೆಗಳು ಬಂದಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.