ಬೆಂಗಳೂರು:  ಕೊರೊನಾ ಹೆಸರು ಕೇಳಿದರೆ ಸಾಕು ಜನರು ಭಯ ಬೀಳುವಂತಾಗಿದೆ. ಕೆಲವರು ಸೋಂಕಿಗೆ ಹೆದರಿದರೆ, ಮತ್ತೆ ಕೆಲವರು ಲಾಕ್‌ಡೌನ್‌ ಭೀತಿಯನ್ನು ಎದುರಿಸುತ್ತಿದ್ದಾರೆ.  ಕೊರೊನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮೊರೆ ಹೋಗಿದೆ. ನಿನ್ನೆ ರಾತ್ರಿ ಟಾಸ್ಕ್ ಫೋರ್ಸ್ ಜತೆ ಆರೋಗ್ಯ ಇಲಾಖೆಯ ಆಯುಕ್ತ ಡಿ.ರಂದೀಪ್ ಮಹತ್ವದ ಸಭೆ ನಡೆಸಿದರು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೈಗೆ ಗುಡ್ ಬೈ ಹೇಳಿದ್ದ ಮುಖ್ಯಮಂತ್ರಿ ಚಂದ್ರು ನಾಳೆ AAP ಸೇರ್ಪಡೆ!


ಟಾಸ್ಕ್ ಫೋರ್ಸ್ ಸದಸ್ಯರ ಜೊತೆಗಿನ ಮೀಟಿಂಗ್ ಹೈಲೈಟ್ಸ್ ಇಲ್ಲಿದೆ ನೋಡಿ: 


1.ಹೆಚ್ಚುತ್ತಿರುವ ಕೋವಿಡ್ ಅಬ್ಬರಕ್ಕೆ ಬ್ರೇಕ್ ಹಾಕಲು ರಾಜ್ಯದಲ್ಲಿ ದಿನಕ್ಕೆ 30 ಸಾವಿರದಷ್ಟು ಕೋವಿಡ್ ಟೆಸ್ಟ್ ಮಾಡುವ ಗುರಿ


2.ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರ ಮೇಲೆ ಹದ್ದಿನ ಕಣ್ಣು


3.ವ್ಯಾಕ್ಸಿನೇಷನ್ ಪ್ರಮಾಣಪತ್ರ, ಮಾಸ್ಕ್ ಧರಿಸಿದ್ದಾರಾ ಇಲ್ವಾ ಅಂತ ಗಡಿಭಾಗದಲ್ಲಿ ಮೇಲ್ವಿಚಾರಣೆ


4.ಸಮೂಹ ಮಾಧ್ಯಮ, NGO ಬಳಕೆ ಮಾಡಿಕೊಂಡು ಮಕ್ಕಳ ವ್ಯಾಕ್ಸಿನೇಷನ್ ಸೇರಿದಂತೆ ಹಿರಿಯರು ಹಾಗೂ ವಯಸ್ಕರು ತೆಗೆದುಕೊಳ್ಳುವ ಮುನ್ನೆಚ್ಚರಿಕಾ ಡೋಸ್ ಹೆಚ್ಚೆಚ್ಚು ತೆಗೆದುಕೊಳ್ಳುವಂತೆ ಪ್ರಚಾರ


5.ಮಾರ್ಷಲ್ಸ್ ಹಾಗೂ ಪೊಲೀಸರ ಸಹಾಯದಿಂದ ಜನರು ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಮಾಡುವುದು, ಸಿನಿಮಾ ಥಿಯೇಟರ್, AC ಹಾಲ್ ಗಳಲ್ಲಿ ಕೂಡ ಮಾಸ್ಕ್ ಧರಿಸುವಂತೆ ಮಾಡುವುದು 


ಇದನ್ನೂ ಓದಿ: KCET ಪರೀಕ್ಷೆ ಹಾಲ್ ಟಿಕೆಟ್ ಸಿಗದೆ ಸಾವಿರಾರು ವಿದ್ಯಾರ್ಥಿಗಳು ಕಂಗಾಲು!


6.ಕೋವಿಡ್-19 ಯಿಂದ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಬೆಡ್ ಕೊರತೆ ಆಗದಂತೆ ನೋಡಿಕೊಳ್ಳುವುದು. ಸರ್ಕಾರದ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.