Mukhyamantri Chandru : ಕೈಗೆ ಗುಡ್ ಬೈ ಹೇಳಿದ್ದ ಮುಖ್ಯಮಂತ್ರಿ ಚಂದ್ರು ನಾಳೆ AAP ಸೇರ್ಪಡೆ!

ಇನ್ನು ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷದಿಂದ ಅಸಮಾಧಾನ ಹೊಂದಿರುವ ಅನೇಕ ನಾಯಕರು ಮುಂದಿನ ದಿನಗಳಲ್ಲಿ ಎಎಪಿ ಸೇರುವ ಸಾಧ್ಯತೆ ಇದೆ.

Written by - Prashobh Devanahalli | Last Updated : Jun 6, 2022, 08:35 PM IST
  • ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು
  • ಮುಖ್ಯಮಂತ್ರಿ ಚಂದ್ರು ನಾಳೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
  • ಇತ್ತೀಚಿಗೆ ಕಾಂಗ್ರೆಸ್ ನಲ್ಲಿ ಆಂತರಿಕ ಬೆಳವಣಿಗೆಗಳ ಹಿನ್ನೆಲೆ
Mukhyamantri Chandru : ಕೈಗೆ ಗುಡ್ ಬೈ ಹೇಳಿದ್ದ ಮುಖ್ಯಮಂತ್ರಿ ಚಂದ್ರು ನಾಳೆ AAP ಸೇರ್ಪಡೆ! title=

ಬೆಂಗಳೂರು : ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ನಾಳೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ಎಎಪಿ ಪಕ್ಷ ತಿಳಿಸಿದೆ. ಇನ್ನು ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷದಿಂದ ಅಸಮಾಧಾನ ಹೊಂದಿರುವ ಅನೇಕ ನಾಯಕರು ಮುಂದಿನ ದಿನಗಳಲ್ಲಿ ಎಎಪಿ ಸೇರುವ ಸಾಧ್ಯತೆ ಇದೆ.

ನಾಳೆ ಬೆಂಗಳೂರಿನ ಪ್ರೆಸ ಕ್ಲಬ್‌ ನಲ್ಲಿ ಆಪ್ ಪಕ್ಷಕ್ಕೆ ಮುಖ್ಯಮಂತ್ರಿ ಚಂದ್ರು ಸೇರ್ಪಡೆಯಾಗಲಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್ ನಲ್ಲಿ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೇಸರಗೊಂಡು  ವಿಧಾನಪರಿಷತ್ತಿನ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಹಾಗೂ ರಾಷ್ಟ್ರೀಯ ವಕ್ತಾರ ಬ್ರಿಜೇಶ್‌ ಕಾಳಪ್ಪ ಅವರು ರಾಜೀನಾಮೆ ನೀಡಿ ಕಾಂಗ್ರೆಸ್ನಿಂದ ಹೊರಬಂದಿದ್ದರು. ಈ ಪೈಕಿ ಚಂದ್ರ ಪಕ್ಷಕ್ಕೆ ಸೇರುತ್ತಿದ್ದಾರೆ. ಮೂಲಗಳ ಪ್ರಕಾರ ಬ್ರಿಜೇಶ್ ಕಾಳಪ್ಪ ಕೂಡ ಎಎಪಿ ಗೆ ಹೋಗಲ್ಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಹಿಂದೂ ಧರ್ಮ ತ್ಯಜಿಸಿದ ಕಾರಣಕ್ಕೆ ಬಸವಣ್ಣ ಮತ್ತು ಅಂಬೇಡ್ಕರ್‌ರನ್ನು ನಿರ್ಲಕ್ಷಿಸಲಾಯಿತೇ?: ಸಿದ್ದರಾಮಯ್ಯ

ಇನ್ನು ಉಳಿದಂತೆ ಕಾಂಗ್ರೆಸ್ ನಿಂದ ಟಿಕೆಟ್ ಕೈ ತಪ್ಪಿದ ಹಾಗು ಪಕ್ಷ ಕಡೆ ಗಣಿಸಿದ ನಾಯಕರು ಕೂಡ ಎಎಪಿ ಕಡೆ ಮುಖಮಾಡಲಿದ್ದಾರೆ, ಪ್ರಸ್ತುತವಾಗಿ ಕಾಂಗ್ರೆಸ್ ನ ಬಿ ಎಲ್ ಶಂಕರ್, ಕಿಮ್ಮನೆ ರತ್ನಾಕರ, ಎಸ್ ಆರ್ ಪಾಟೀಲ್ ಸೇರಿದಂತೆ ಅನೇಕ ಕೈ ನಾಯಕರು ಪೊರಕೆ ಹಿಡಿಯುವ ಸಂಭವ ಹೆಚ್ಚು ಎನ್ನಲಾಗುತ್ತಿದೆ.

ಇದನ್ನೂ ಓದಿ : Textbook Revision Row: ‘ಸಂವಿಧಾನ ಶಿಲ್ಪಿ’ ಬಿರುದು ತೆಗೆದು ಡಾ.ಬಿ.ಆರ್.ಅಂಬೇಡ್ಕರ್‌ಗೆ ಅವಮಾನ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News