ಬೆಂಗಳೂರು: ಬೇರೆ ರಾಜ್ಯ ಹಾಗೂ ವಿದೇಶಗಳಲ್ಲಿ ಹೊಸ ಕೋವಿಡ್ ತಳಿಯ ಉಪಟಳ ಹೆಚ್ಚಳ ಆಗ್ತಿರೋದ್ರಿಂದ ಆರೋಗ್ಯ ಸಚಿವ ಕೆ‌.ಸುಧಾಕರ್ ಸೋಮವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, 8 ದೇಶಗಳಲ್ಲಿ ಕೋವಿಡ್ 4ನೇ ಅಲೆ ಆರಂಭವಾಗಿದ್ದು, ಕೋವಿಡ್ ಹೊಸ ಪ್ರಬೇಧ XE ಹಾಗೂ ME ಪತ್ತೆಯಾಗ್ತಿದೆ. ನಮ್ಮ ದೇಶದ ದೆಹಲಿ ಹಾಗೂ ಹರಿಯಾಣದಲ್ಲೂ ಹೆಚ್ಚಾಗುತ್ತಿದೆ. ಹೀಗಾಗಿ ತುರ್ತು ಸಭೆ ನಡೆಸಲಾಗಿದೆ ಎಂದರು.


COMMERCIAL BREAK
SCROLL TO CONTINUE READING

ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾವಹಿಸಲು ಟೆಲಿಮಾನಿಟರಿಂಗ್ ವ್ಯವಸ್ಥೆ ಆರಂಭಿಸಲಾಗುವುದು. ಲಸಿಕೆ ಹಾಕದ ಮಕ್ಕಳಿಗೆ ಸುಮಾರು 5 ಸಾವಿರ ಜನಕ್ಕೆ ರಾಜ್ಯದಾದ್ಯಂತ ಕೋವಿಡ್ ಟೆಸ್ಟ್ ಮಾಡಿಸಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ ಎಂದು ಹೇಳಿದರು.


ಇದನ್ನೂ ಓದಿ: ಅತೀಹೆಚ್ಚು ಸುಳ್ಳು ಹೇಳಿದ ಬಿಜೆಪಿ ಹಾಲಿ ಶಾಸಕರಿಗೆಲ್ಲರಿಗೂ ಟಿಕೆಟ್ ಖಚಿತ: ಸಿದ್ದರಾಮಯ್ಯ


ಜೂನ್-ಜುಲೈನಲ್ಲಿ 4ನೇ ಅಲೆ!


ಚಂದ್ರು ಹತ್ಯೆ ಪ್ರಕರಣ: ಗೃಹ ಸಚಿವ ‘ಅರ್ಧ ಜ್ಞಾನೇಂದ್ರ’ ಎಂದ ಮೊಹಮ್ಮದ್ ನಲಪಾಡ್!


ಮಕ್ಕಳಲ್ಲೂ 15ರಿಂದ 17 ವರ್ಷದವರಿಗೆ ಶೇ.79ರಷ್ಟು ಮಾತ್ರ ಆಗಿದೆ. 20 ಲಕ್ಷ ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದಿಲ್ಲ. 2ನೇ ಡೋಸ್ ಶೇ.65ರಷ್ಟು ಮಾತ್ರ ಆಗಿದೆ. 12ರಿಂದ 14 ವರ್ಷದ ಮಕ್ಕಳು 20 ಲಕ್ಷದ ಪೈಕಿ 13,9600 ಅಂದರೆ ಶೇ.61ರಷ್ಟು ಮಾತ್ರ ಆಗಿದ್ದು, ಆದಷ್ಟು ಬೇಗ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.


ಹೊಸ ಪ್ರಬೇಧದ ಪತ್ತೆ ಹೇಗೆ?


ಕೋವಿಡ್ ಹೊಸ ಪ್ರಬೇಧ ದಕ್ಷಿಣ ಕೊರಿಯಾ, ಹಾಂಕಾಂಗ್, ಕೊರಿಯಾ, ಜರ್ಮನಿ, ಚೀನಾ ಸೇರಿದಂತೆ 8 ದೇಶಗಳಲ್ಲಿ ಹೆಚ್ಚಾಗುತ್ತಿದೆ. ಇಲ್ಲಿಂದ ಬರುವವರಿಗೆ ಮಾರ್ಗಸೂಚಿ ಹೊರಡಿಸುತ್ತೇವೆ. ರಾಜ್ಯದಲ್ಲಿ ಪ್ರತಿದಿನ 50 ಪ್ರಕರಣ ಮಾತ್ರ ಕಂಡುಬರುತ್ತಿದ್ದು, ಕೆಲವು 10-12 ಪ್ರಕರಣದ ಜೀನೋಮ್ ಸೀಕ್ವೆನ್ಸ್ ನಡೆಸಲಾಗ್ತಿದೆ. ಈ ಮೂಲಕ ಹೊಸ ಪ್ರಬೇಧ ಪತ್ತೆ ಬಗ್ಗೆ ಗಮನಿಸಲಾಗುವುದು. ನಿನ್ನೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆರಂಭವಾಗಿದ್ದು, ಸಾಕಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗ್ತಿಲ್ಲ. ಈ ಬಗ್ಗೆ ಗಮನಿಸಲಾಗುವುದು ಎಂದರು.


ಖಾಸಗಿ ಆಸ್ಪತ್ರೆಗಳಿಂದ ಹೆಚ್ಚು ಹಣ ಸುಲಿಗೆ


ಇನ್ನು ಖಾಸಗಿ ಆಸ್ಪತ್ರೆಗಳು ಕೋವಿಡ್ ಸಮಯದಷ್ಟೇ ಅಲ್ಲದೆ ಉಳಿದ ಸಮಯದಲ್ಲೂ ನಿಗದಿಗಿಂತ ಅಧಿಕ ದರ ವಸೂಲಿ ಮಾಡಿದರೆ ಲೈಸೆನ್ಸ್ ರದ್ದು ಮಾಡಬೇಕಾಗ್ತದೆ ಎಂದು ಇದೇ ವೇಳೆ ಸಚಿವ ಖಡಕ್ ಎಚ್ಚರಿಕೆ ನೀಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.