ಚಂದ್ರು ಹತ್ಯೆ ಪ್ರಕರಣ: ಗೃಹ ಸಚಿವ ‘ಅರ್ಧ ಜ್ಞಾನೇಂದ್ರ’ ಎಂದ ಮೊಹಮ್ಮದ್ ನಲಪಾಡ್!

ಅರಗ ಜ್ಞಾನೇಂದ್ರ ಅವರಿಗೆ ಗೃಹ ಸಚಿವ ಸ್ಥಾನದಲ್ಲಿ ಇರಲು ಯೋಗ್ಯತೆ ಇಲ್ಲ. ತಕ್ಷಣವೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

Written by - Zee Kannada News Desk | Last Updated : Apr 9, 2022, 04:39 PM IST
  • ಗೃಹ ಸಚಿವ ಅರಗ ಜ್ಞಾನೇಂದ್ರ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಕ್ರೋಶ
  • ಅರಗ ಜ್ಞಾನೇಂದ್ರರಿಗೆ ಗೃಹ ಸಚಿವ ಸ್ಥಾನದಲ್ಲಿರಲು ಯೋಗ್ಯತೆ ಇಲ್ಲ, ರಾಜೀನಾಮೆ ನೀಡಲಿ
  • ಗೃಹ ಸಚಿವರು ಅರಗ ಜ್ಞಾನೇಂದ್ರ ಅಲ್ಲ, ಅರ್ಧ ಜ್ಞಾನೇಂದ್ರ ಎಂದು ಟೀಕಿಸಿದ ನಲಪಾಡ್
ಚಂದ್ರು ಹತ್ಯೆ ಪ್ರಕರಣ: ಗೃಹ ಸಚಿವ ‘ಅರ್ಧ ಜ್ಞಾನೇಂದ್ರ’ ಎಂದ ಮೊಹಮ್ಮದ್ ನಲಪಾಡ್!  title=
ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದ ನಲಪಾಡ್

ವಿಜಯಪುರ: ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿರುವ ಚಂದ್ರು ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವರು ಅರ್ಧ ಜ್ಞಾನೇಂದ್ರ ಎಂದಿರುವ ಮೊಹಮ್ಮದ್ ನಲಪಾಡ್, ‘ಅರಗ ಜ್ಞಾನೇಂದ್ರ ಅಲ್ಲ ಅರ್ಧ ಜ್ಞಾನಿ’ ಎಂದು ಟೀಕಿಸಿದ್ದಾರೆ. ಅರ್ಧ ಜ್ಞಾನ ಇರೋದು ತಪ್ಪು, ಅವರಿಗೆ ಪೂರ್ತಿ ಜ್ಞಾನ ಇದಿದ್ರೆ ಹೀಗೆ ಮಾತನಾಡ್ತಿರಲಿಲ್ಲ. ಪೂರ್ತಿ ಜ್ಞಾನ ಇರಲಿಲ್ಲ ಅಂದರೂ ಪರವಾಗಿರಲಿಲ್ಲ. ಆದರೆ, ಅವರಿಗೆ ಅರ್ಧ ಜ್ಞಾನ ಮಾತ್ರ ಇರೋದು ಎಂದು ನಲಪಾಡ್ ಕುಟುಕಿದ್ದಾರೆ.

ಇದನ್ನೂ ಓದಿ: "ಅಮಿತ್ ಶಾ ಅವರಿಗೆ ಇಂಗ್ಲಿಷ್ ಬರಲ್ವಾ? ಅವರಿಗೆ ಪ್ರಾದೇಶಿಕ ಭಾಷೆಗಳ ಮೇಲೆ ಯಾಕೆ ಈ ಪರಿ ದ್ವೇಷ? "

ಅರಗ ಜ್ಞಾನೇಂದ್ರ ಅವರಿಗೆ ಗೃಹ ಸಚಿವ ಸ್ಥಾನದಲ್ಲಿ ಇರಲು ಯೋಗ್ಯತೆ ಇಲ್ಲ. ತಕ್ಷಣವೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಹೋಮ್ ಮಿನಿಸ್ಟರ್ ವಿರುದ್ಧ ದೂರು ನೀಡಿದರೂ ದಾಖಲಾಗಿಲ್ಲ, ನಾವು ಕೋರ್ಟ್ ಮೂಲಕ FIR ಮಾಡಿಸ್ತೀವಿ. ಅವರು ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸುತ್ತೇವೆಂದು ನಲಪಾಡ್ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಬಣ ರಾಜಕಾರಣ ವಿಚಾರವಾಗಿ ಮಾತನಾಡಿದ ನಲಪಾಡ್, ‘ನಾನು ದೊಡ್ಡವರ ಬಗ್ಗೆ ಮಾತನಾಡುವುದಿಲ್ಲವೆಂದು ಇದೇ ವೇಳೆ ಜಾರಿಕೊಂಡರು. ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವ ವಿಚಾರವಾಗಿ ಮಾತನಾಡಿರುವ ಅವರು, ನಾನು ರಂಜಾನ್ ಉಪವಾಸದಲ್ಲಿದ್ದೀನಿ. ಆದರೆ, ದೇವಸ್ಥಾನಕ್ಕೆ ಬಂದಿದ್ದೀನಿ. ಬಿಜೆಪಿ ಕೊಮುವಾದ ಬಿತ್ತುವ ಕೆಲಸ ಮಾಡ್ತಿದೆ. ನಾವೆಲ್ಲ ಭಾರತೀಯರು ಒಂದೇ, ನಾವೆಲ್ಲ ಜೊತೆಗಿರಬೇಕು. ಬೆಲೆ‌ ಏರಿಕೆ ಮುಚ್ಚಿ ಹಾಕಲು ಕೋಮುವಾದ ಬಿತ್ತಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದು ರಾಜ್ಯದಲ್ಲಿ ಸಕ್ಸಸ್ ಆಗಲ್ಲವೆಂದು ಅವರು ಬಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: Gang Rape : ಬೆಚ್ಚಿಬಿದ್ದ ಸಿಲಿಕಾನ್‌ ಸಿಟಿ : 16 ವರ್ಷದ ಬಾಲಕಿ ಮೇಲೆ 8 ಜನರಿಂದ ಗ್ಯಾಂಗ್‌ರೇಪ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News