ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಸುತ್ತಿದಂತೆ ಹಿಂದೆ ಜೆಡಿಎಸ್’ನಲ್ಲಿ ಶಾಸಕರಾಗಿದ್ದ ನಂತರ ಬಿಜೆಪಿಗೆ ಪಕ್ಷ ಬದಲಿಸಿ ಶಾಸಕರಾಗಿರುವ ಡಾ ನಾರಾಯಣ ಗೌಡ ಮತ್ತೆ ಮುಂಬರುವ ಚುನಾವಣೆಯಲ್ಲಿ ಕಮಲ ಪಕ್ಷಕ್ಕೆ ಗುಡ್ ಬೈ ಹೇಳುವ ತೀರ್ಮಾನ ಮಾಡಿದ್ದಾರೆ ಎಂದು ಅವರ ಆಪ್ತ ವಲಯ ಖಚಿತ ಪಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಮಾಚಾರಿ ಸಿನಿಮಾಗೆ ಮಾರ್ಗ್ರೇಟ್ ಡೈರೆಕ್ಷನ್‌ ಮಾಡೋದು ಕನ್ಫರ್ಮ್..!


ಸದ್ಯ ಕ್ರೀಡಾ ಮತ್ತು ಯುವಜನ ಸೇವೆ ಹಾಗೂ ರೇಷ್ಮೆ ಸಚಿವರಾಗಿರುವ ಡಾ.ನಾರಾಯಣ ಗೌಡ ಅವರ ಕಾರ್ಯಕ್ರಮಗಳ ಪಟ್ಟಿಯಲ್ಲಿ  ಮಾರ್ಚ್ 21ರಂದು ಕ್ರೀಡಾಂಗಣ ಉದ್ಘಾಟನೆ ಕಾರ್ಯಕ್ರಮ ನಿಗದಿ ಆಗಿದೆ. ಇದಾದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇಲ್ಲದಿದ್ದರೆ, ಚುನಾವಣೆ ಘೋಷಣೆ ಬಳಿಕ ಸಚಿವ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಹೆಚ್ಚಿನ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


ರಾಜೀನಾಮೆ ನೀಡುವ ಕಾರಣ?


ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಶಾಸಕ ಆಗಿರುವ ಡಾ ನಾರಾಯಣ ಗೌಡ, 2023 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂಬ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿ ಗುಡ್ ಬೈ ಹೇಳುವ ನಿರ್ಧಾರ ಕೈಗೊಂಡಿದ್ದಾರೆ.


ರಾಜೀನಾಮೆ ಬಳಿಕ ಮುಂದಿನ ನಡೆ ಏನು?


ಇನ್ನು ರಾಜೀನಾಮೆ ನೀಡುವ ಸಮಯದೊಳಗೆ ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿ, ಕೈ ಪಕ್ಷದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಇವರಿಗೆ ಬಾಗಿಲು ತೆರೆಯದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ದರಿದ್ದಾರೆ.


ಇನ್ನು ಕೆಲ ದಿನಗಳ ಹಿಂದೆ ಕೆ ಆರ್ ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ, ಅಲ್ಲಿನ ಕೈ ನಾಯಕರು ಮುಂದೆ ನಾರಾಯಣ ಗೌಡ ಸೇರ್ಪಡೆ ಆದಲ್ಲಿ ಪಕ್ಷ ಬಿಡುವುದಾಗಿ ಬೆದರಿಕೆ ಹಾಕಿದ್ದರು. ಈ ಹಿನ್ನಲೆಯಲ್ಲಿ ಮುಂದಿನ ರಾಜಕೀಯ ಚಿತ್ರಣ ಗಮನಿಸಿ ಸದ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.


ಇದನ್ನೂ ಓದಿ: WPL 2023: ಮಹಿಳಾ ಕ್ರಿಕೆಟರ್ ಬಗ್ಗೆ ‘ಅವಾಚ್ಯ’ ಕಮೆಂಟ್ ಮಾಡಿದ ಇಬ್ಬರು ಕಾಮೆಂಟೇಟರ್’ಗಳ ಬ್ಯಾನ್! ಕ್ರಿಕೆಟ್ ಲೋಕದಲ್ಲಿ ಸಂಚಲನ


ಒಟ್ಟಿನಲ್ಲಿ, 2023 ಚುನಾವಣೆ ಸಂದರ್ಭದಲ್ಲಿ ಪಕ್ಷ ಬಿಡುವ ಸಂಖ್ಯೆ ಹೆಚ್ಚು ಕಾಣಿಸುತ್ತಿದ್ದು, ಬಿಜೆಪಿಯಿಂದ ಹಾಲಿ ಸಚಿವರು, ವಿಧಾನ ಪರಿಷತ್ ಸದಸ್ಯರು ಪಕ್ಷ ತೊರೆಯುವ ಸಾಧ್ಯತೆ ಹೆಚ್ವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.