ಮಕ್ಕಳಾದ ಮೇಲೆ ಸಂಗಾತಿಗೆ ವಿಚ್ಛೇದನ ನೀಡಿ ಮತ್ತೊಬ್ಬರ ಜೊತೆ ಸಂಬಂಧ ಬೆಳಸಿಕೊಂಡ ಬಾಲಿವುಡ್ ಸೆಲೆಬ್ರಿಟಿಗಳು

Bollywood celebrities: ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ವಿಷಯದಲ್ಲೂ ಇದೇ ಆಗಿದ್ದು, 21 ರ ಸೈಫ್ ಮತ್ತು 33 ರ ಅಮೃತಾ ನಡುವೆ ಅಂದು ಪ್ರೇಮಾಂಕುರವಾಗಿತ್ತು. ಆ ಬಳಿಕ ಮನೆಯವರಿಂದ ತಪ್ಪಿಸಿಕೊಂಡು ಗೌಪ್ಯವಾಗಿ ಮದುವೆಯಾದರು. ಅಮೃತಾ ಕೂಡ 5 ವರ್ಷದೊಳಗೆ ಮಗುವಿನ ತಾಯಿಯಾದಳು. ಆದರೆ ಕಾಲ ಕಳೆದಂತೆ ಪ್ರೀತಿ ಕಡಿಮೆಯಾಗುತ್ತಾ ಹೋಯಿತು. ಪರಿಣಾಮ, 14 ವರ್ಷಗಳಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಇದೀಗ ಸೈಫ್ ಅಲಿ ಖಾನ್ ನಟಿ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದಾರೆ.

Written by - Bhavishya Shetty | Last Updated : Mar 11, 2023, 12:13 AM IST
    • ತಿಳುವಳಿಕೆ ಮತ್ತು ಲೌಕಿಕತೆಯನ್ನು ಮೀರಿದ ಯಾವುದೂ ಪ್ರೀತಿಯ ಮುಂದೆ ಕಾಣಿಸುವುದಿಲ್ಲವಂತೆ
    • ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇದ್ದಾರೆ
    • ಅಂತಹ ನಟ ನಟಿಯರ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
ಮಕ್ಕಳಾದ ಮೇಲೆ ಸಂಗಾತಿಗೆ ವಿಚ್ಛೇದನ ನೀಡಿ ಮತ್ತೊಬ್ಬರ ಜೊತೆ ಸಂಬಂಧ ಬೆಳಸಿಕೊಂಡ ಬಾಲಿವುಡ್ ಸೆಲೆಬ್ರಿಟಿಗಳು title=
Divorced Actors

Bollywood celebrities: ತಿಳುವಳಿಕೆ ಮತ್ತು ಲೌಕಿಕತೆಯನ್ನು ಮೀರಿದ ಯಾವುದೂ ಪ್ರೀತಿಯ ಮುಂದೆ ಕಾಣಿಸುವುದಿಲ್ಲವಂತೆ. ಅದಕ್ಕೆ ಸಾಕ್ಷಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು. ಏಕೆಂದರೆ ಕೆಲವರು ಸಣ್ಣ ವಯಸ್ಸಿನಲ್ಲಿ ಪ್ರೇಮಪಾಶಕ್ಕೆ ಸಿಲುಕಿ, ಬಳಿಕ ಮದುವೆಯೂ ಆಗಿ, ದಾಂಪತ್ಯ ನಡೆಸಲು ಆಗದೆ ವಿಚ್ಛೇದನ ಪಡೆದವರಿದ್ದಾರೆ. ಅಂತಹ ನಟ ನಟಿಯರ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ದುಬೈನಲ್ಲಿ ನರೇಶ್ ಪವಿತ್ರ ಹನಿಮೂನ್..! ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಟ್ಟ ಜೋಡಿ

ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ವಿಷಯದಲ್ಲೂ ಇದೇ ಆಗಿದ್ದು, 21 ರ ಸೈಫ್ ಮತ್ತು 33 ರ ಅಮೃತಾ ನಡುವೆ ಅಂದು ಪ್ರೇಮಾಂಕುರವಾಗಿತ್ತು. ಆ ಬಳಿಕ ಮನೆಯವರಿಂದ ತಪ್ಪಿಸಿಕೊಂಡು ಗೌಪ್ಯವಾಗಿ ಮದುವೆಯಾದರು. ಅಮೃತಾ ಕೂಡ 5 ವರ್ಷದೊಳಗೆ ಮಗುವಿನ ತಾಯಿಯಾದಳು. ಆದರೆ ಕಾಲ ಕಳೆದಂತೆ ಪ್ರೀತಿ ಕಡಿಮೆಯಾಗುತ್ತಾ ಹೋಯಿತು. ಪರಿಣಾಮ, 14 ವರ್ಷಗಳಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಇದೀಗ ಸೈಫ್ ಅಲಿ ಖಾನ್ ನಟಿ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದಾರೆ.

ರೀನಾ ದತ್ತಾ ಮತ್ತು ಅಮೀರ್ ಖಾನ್ ಅವರ ಪ್ರೀತಿಯು ಯೌವನದಲ್ಲಿ ಚೆನ್ನಾಗಿಯೇ ಇತ್ತು. ರಹಸ್ಯವಾಗಿ ಮದುವೆಯಾಗಿ ತಮ್ಮ ತಮ್ಮ ಮನೆಗಳಲ್ಲಿ ವಾಸಿಸುತ್ತಿದ್ದ ಈ ದಂಪತಿ ಈ ರಹಸ್ಯವನ್ನು ಬಹಳ ಕಾಲ ಮುಚ್ಚಿಟ್ಟಿದ್ದರು. ಆ ಬಳಿಕ ಇಬ್ಬರೂ ಮತ್ತೆ ಒಟ್ಟಿಗೆ ಬದುಕಲು ಪ್ರಾರಂಭಿಸಿದರು. ರೀನಾ ಮಗಳಿಗೆ ಜನ್ಮ ನೀಡಿದರು, ಆದರೆ 16 ವರ್ಷಗಳಲ್ಲಿ ಈ ಸಂಬಂಧವೂ ಕೊನೆಗೊಂಡಿತು. ಆ ಬಳಿಕ ಕಿರಣ್ ರಾವ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರೂ ಸಹ 2021ರಲ್ಲಿ ಅದೂ ಕೂಡ ಕೊನೆಗೊಂಡಿತು,

ಫರ್ಹಾನ್ ಅಖ್ತರ್ ನಟನೆಗೂ ಮುನ್ನವೇ ಅಧುನಾ ಅವರ ಜೀವನಕ್ಕೆ ಎಂಟ್ರಿ ಕೊಟ್ಟಿದ್ದರು. ಪ್ರೀತಿಸಿ ಮದುವೆಯಾದ ನಂತರ, ಇಬ್ಬರೂ ಚೆನ್ನಾಗಿ ಜೀವನ ನಡೆಸುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ಕೂಡ ನೀಡಿದ್ದರು. ಆದರೆ ಇದಕ್ಕಿದ್ದಂತೆ ಏನಾಯಿತೋ ತಿಳಿಯದು 2017 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಇತ್ತೀಚೆಗೆಯಷ್ಟೇ ಫರ್ಹಾನ್ ಶಿಭಾನಿ ಎಂಬವರನ್ನು ವಿವಾಹವಾದರು.

ಹೃತಿಕ್ ರೋಷನ್-ಸುಝೇನ್ ಖಾನ್ ಬಾಲಿವುಡ್ ನ ಫೇವರೇಟ್ ಕಪಲ್’ಗಳಲ್ಲಿ ಒಬ್ಬರಾಗಿದ್ದರು. ಆದರೆ ಅವರ 14 ವರ್ಷದ ದಾಂಪತ್ಯ ಕೆಲ ವೈಯಕ್ತಿಕ ಕಾರಣಗಳಿಂದ ನುಚ್ಚುನೂರಾಯಿತು. ಆ ಬಳಿಕ ಇಬ್ಬರು ಸಹ ವಿಚ್ಚೇದನ ಪಡೆದರು. ಇದೀಗ ಸಬಾ ಅಜಾದ್ ಎಂಬವರ ಜೊತೆ ಹೃತಿಕ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:Rashmika Mandanna : ಮಗು ಜೊತೆ ಮಗುವಾಗಿ ಆಟವಾಡಿದ ಬ್ಯೂಟಿ..! ಎಷ್ಟು ಕ್ಯೂಟ್‌ ಅಲ್ವಾ ರಶ್ಮಿಕಾ

ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ನಂತರ ಮಲೈಕಾ ಮುಂದೆ ಅರ್ಬಾಜ್ ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದರಂತೆ. ಆದರೆ ಹಲವು ವರ್ಷಗಳ ಸಂಬಂಧ ಮುರಿದುಬಿದ್ದಿದ್ದು, ಇದೀಗ ಇಬ್ಬರೂ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಇನ್ನು ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಜೊತೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ದಾರೆ ಎನ್ನಲಾಗುತ್ತಿದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News