ರಾಮಾಚಾರಿ ಸಿನಿಮಾಗೆ ಮಾರ್ಗ್ರೇಟ್ ಡೈರೆಕ್ಷನ್‌ ಮಾಡೋದು ಕನ್ಫರ್ಮ್..!

Rocking Star Yash : ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಯಾವುದು ? ರಾಕಿ 19 ನೇ  ಚಿತ್ರದ ಸೂತ್ರದಾರ ಯಾರು? ಈ ರೀತಿಯ ಚರ್ಚೆ ಶುರುವಾಗಿ11ತಿಂಗಳುಶುರುವಾಗಿದೆ.ಅದರೆ ಈ ನಿಗೂಢ ಪ್ರಶ್ನೆಗೆ ಉತ್ತರ ರಾಕಿ ಆರಾಧಕರಿಗೆ ಸಿಕ್ಕಿಲ್ಲ.ಪ್ಯಾನ್ ಇಂಡಿಯಾ ಪ್ರೇಕ್ಷಕರಲ್ಲಿ  ಕಳೆದ ಏಪ್ರಿಲ್ ನಿಂದ ಕಾಡ್ತಿರುವ ಏಕೈಕ ಪ್ರಶ್ನೆ ರಾಕಿಭಾಯ್ ಮುಂದಿನ ಚಿತ್ರ ಯಾವ್ದು..ಆದರೆ ಈ ವಿಚಾರವಾಗಿ  ದಿನಗಳ ಜೊತೆ ಅಂತೆ ಕಂತೆಗಳು ಉರುಳಿ ಹೋಗಿವೆ..ಇಷ್ಟೇಲ್ಲಾ ಆದರೂ ಯಶ್  ಮುಂದಿನ ಚಿತ್ರದ ಬಗ್ಗೆ ಸುಳಿವು ಸಿಕ್ಕಿಲ್ಲ. 

Written by - YASHODHA POOJARI | Last Updated : Mar 10, 2023, 04:01 PM IST
  • ಯಶ್ ಈಗ ಇಂಗ್ಲೆಂ‌ಡ್ ಗೆ ತಮ್ಮ ಮುಂದಿನ ಚಿತ್ರದ ಕತೆ ಬಗ್ಗೆ ಪ್ಲಾನ್ ಮಾಡೊಕೆ ಹೋಗಿದ್ದಾರೆ.
  • ಆ ಚಿತ್ರಗಳ ಕಂಪ್ಲೀಟ್ ಆದ ನಂತ್ರ ಯಶ್ 19 ಅಪ್ಡೇಟ್ ಸಿಗಲಿದೆ..
  • ತಡವಾಗ್ತಿರೊದಕ್ಕೆ ಸದ್ಯ ರಾಧಿಕ ಪಂಡಿತ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರಾಮಾಚಾರಿ ಸಿನಿಮಾಗೆ ಮಾರ್ಗ್ರೇಟ್ ಡೈರೆಕ್ಷನ್‌ ಮಾಡೋದು ಕನ್ಫರ್ಮ್..!  title=

ಯಶ್ ಶಂಕರ್ ಜೊತೆ ಸಿನಿಮಾ ಮಡ್ತಾರೆ.. ಅಲ್ಲದೆ ಹೊಂಬಾಳೆಯಲ್ಲಿ ನೀಲ್ ಜೊತೆ ಕೆಜಿಫ್ 3  ಮಾಡುತ್ತಾರೆ..ಅಷ್ಟೇ ಯಾಕೇ ಟಾಲಿವುಡ್ ಮಾಲಿವುಡ್ ಡೈರೆಕ್ಟರ್ ಗಳ ಹೆಸರು ಯಶ್ 19 ಜೊತೆ ತುಳುಕು ಹಾಕಿಕೊಂಡು ಸೌಂಡ್ ಮಾಡಿತ್ತು..ಆದರೆ ಅದೆಲ್ಲ ಬರೀ ಗಾಳಿ ಸುದ್ದಿಗೆ ಸೀಮಿತವಾಗಿದೆ..

ಯಶ್ 19ಚಿತ್ರದ ಬಗ್ಗೆ ಇಷ್ಟೇಲ್ಲಾ ಚರ್ಚೆಗಳಾಗ್ತಿದ್ರು ರಾಕಿ ಮಾತ್ರ ತನ್ನ ಪಾಡಿಗೆ ತಾನು ಸಿನಿಮಾ ಅಲೋಚನೆ ಜೊತೆಗೆ ಫ್ಯಾಮಿಲಿ ಜೊತೆ ಕಾಲ ಕಳೆ ಯುತ್ತಿದ್ದಾರೆ..ಇದರ ಜೊತೆಗೆ ಕೆಜಿಎಪ್ 2 ಬಂದು ಹತ್ರ ಹತ್ರ ಒಂದು ವರ್ಷ ಪೊರೈಸುತ್ತಿರುವ  ಹಿನ್ನೆಲೆ ಮುಂದಿನ ಚಿತ್ರದ ಕತೆ ಮತ್ತು ನಿರ್ದೇಶಕ ಫೈನಲ್ ಆಗದ ಕಾರಣ ಕೊಂಚ ಒತ್ತಡಕ್ಕೆ ಒಳಗಾಗಿದ್ದಾರೆ ಯಶ್ ಅನ್ನೋದು ಅವರ ಆಪ್ತ ಬಳಗದ ಮಾಹಿತಿ. ಪ್ರತಿ ನಿತ್ಯ ಮುಂದಿನ ಚಿತ್ರದ ತಯಾರಿಯಲ್ಲೇ ದಿನ ಆರಂಭಿಸ್ತಿರುವ ಯಶ್ ಸದ್ಯ ಇಂಡಿಯಾ ಬಿಟ್ಟು ಇಂಗ್ಲೇಡ್ ಗೆ ಹಾರಿದ್ದಾರೆ.. ಇನ್ನು ಯಶ್ ಈವಾಗ ಯಾಕೆ ಇಂಗ್ಲೇಂಡ್ ಗೆ ಹೋದರು ಅವರೇನಾದರೂ ಸಮರ್‌ ವೇಕೇಶನ್ ಗೆ ಹೋಗಿದಾರಾ ಅಂತ ತಿಳಿದುಕೊಂಡರೆ ಅದು ಖಂಡಿತಾ ತಪ್ಪು..ಯಶ್ ಸದ್ಯ ಇಂಗ್ಲೆಂಡ್ ನಲ್ಲಿ  ಫ್ಯಾಮಿಲಿ ಜೊತೆ ಇದ್ದಾರೆ.ಆದರೆ ಯಾಕೆ ಆಂಗ್ಲರ ನಾಡಿಗೆ ರಾಕಿ ಹಾರಿದ್ರು ಅನ್ನೋದು ಸಖತ್ ಇಂಟ್ರೆಸ್ಟಿಂಗ್ ಆಗಿದೆ...

ಇದನ್ನೂ ಓದಿ-ಪುನೀತ್ ಹುಟ್ಟುಹಬ್ಬಕ್ಕೆ ಮುನ್ನವೇ ಪತ್ನಿ ಅಶ್ವಿನಿಯ ಗಟ್ಟಿ ನಿರ್ಧಾರ! 

ಹುಟ್ಟುಹಬ್ಬಕ್ಕೆ ದುಬೈಗೆ ಹೊಗಿದ್ದ ಯಶ್ ಈಗ ಇಂಗ್ಲೆಂ‌ಡ್ ಗೆ ತಮ್ಮ ಮುಂದಿನ ಚಿತ್ರದ ಕತೆ ಬಗ್ಗೆ ಪ್ಲಾನ್ ಮಾಡೊಕೆ ಹೋಗಿದ್ದಾರೆ..ಅರೆರೆ ಫ್ಯಾಮಿಲಿ ಜೊತೆ ಹೋಗಿ ಅದ್ಯಾವ ಕತೆ ಬಗ್ಗೆ ಚರ್ಚೆ ಮಾಡ್ತಾರಪ್ಪ ಯಶ್ ಅಂತ ಕನ್ಪ್ಯೂಸ್ ಆಗಬೇಡಿ.ಯಾಕಂದ್ರೆ ಯಶ್ ಈ ಸಲ ಇಂಗ್ಲೇಂಡಿಗೆ  ಹೋಗಿರೋದೆ ತಮ್ಮ ಮುಂದಿನ ಚಿತ್ರದ ಕತೆಗಾಗಿ..ಹಾಗಾದ್ರೆ ಯಶ್ ಗೆ ಯಾರಪ್ಪ ಅಲ್ಲಿ ಕತೆ ಮಾಡಿದ್ದಾರೆ ಅಂತ ಕೇಳಿದ್ರೆ ಅದಕ್ಕೆ ಉತ್ತರ ನೋ ಅಂತ ಹೇಳ್ತೀವಿ.ಯಾಕಪ್ಪ ಅಂದ್ರೆ ಈಸಲ ರಾಮಾಚಾರಿ ತಮ್ಮ ನೂತನ ಚಿತ್ರದ ಕತೆ ಬಗ್ಗೆ ಚರ್ಚೆ ಮಾಡ್ತಿರೋದು ಮಿಸೆಸ್ ರಾಮಾಚಾರಿ ಅಂದರೆ ರಾಧಿಕ ಪಂಡಿತ್ ಜೊತೆ..

ಯಶ್ ಈಗಾಗಲೇ ಕಾಲಿವುಡ್ ನ ಸ್ಟಾರ್ ಡೈರೆಕ್ಟರ್ ಗಳಾದ ಹಿರಿಯ ನಿರ್ದೇಶಕ ಮಣಿರತ್ನಂ ಹಾಗೂ ಯಂಗ್ ಅಂಡ್ ಎನರ್ಜಿಟಿಕ್ ಡೈನಾಮಿಕ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಅವರ ಜೊತೆ ತಮ್ಮ 19. ಚಿತ್ರದ ಬಗ್ಗೆ ಚರ್ಚೆ ಮಾಡಿದ್ದಾರೆ ಅನ್ನೋ‌ಎಕ್ಸ್ ಕ್ಲೂಸಿವ್  ಮಾಹಿತಿ ಸಿಕ್ಕಿದೆ..ಅಲ್ಲದೆ ಈ ಎಕ್ಸ್ ಕ್ಲೂಸಿವ್ ಸಮಾಚಾರದ ಜೊತೆ ಯಶ್ ಮಣಿರತ್ನಂ ಹಾಗೂ ಲೋಕೇಶ್ ಕನಗರಾಜ್ ಜೊತೆಗೆ ಮಡದಿ ರಾಧಿಕ ಪಂಡಿತ್ ಜೊತೆ ಕೂತೂ ಒಂದು ಕತೆ ಬಗ್ಗೆ ಚರ್ಚೆ ಮಾಡಿದ್ದು ಈ ಆ ಕಥೆಯನ್ನು ಡೆವಲಪ್ ಮಾಡೊ ಸಲುವಾಗಿ ಇಂಗ್ಲೆಂಡ್ ಗೆ ಹಾರಿದ್ದಾರೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ...ಯಶ್ ಸದ್ಯ ಮೂರು ಕತೆಗಳ ಶಾರ್ಟ್ ಲಿಸ್ಟ್ ಮಾಡಿದ್ದು ಈ ಮೂರರಲ್ಲಿ ಯಾವ ಕತೆ ಓಕೆ ಮಾಡ್ತಾರೆ ಗೊತ್ತಿಲ್ಲ.. ಒಂದು ವೇಳೆ ಮಣಿರತ್ನಂ ಹಾಗೂ ಲೋಕೇಶ್ ಕನಗ ರಾಜ್ ಕತೆ ಒಕೆ ಆಗದಿದ್ರೆ ಮಡಿದಿ ರಾಧಿಕ ಜೊತೆ ಚರ್ಚೆ ಮಾಡಿರುವ ಕತೆಯನ್ನೇ ಫೈನಲ್ ಮಾಡಲು ಯಶ್ ಪ್ಲಾನ್ ಮಾಡಿದ್ದು, ಈ ಕತೆ ಓಕೆ ಆಗಿದ್ದೆ ಆದ್ರೆ ಯಶ್ 19 ಚಿತ್ರಕ್ಕೆ ರಾಧಿಕ ಪಂಡಿತ್ ಡೈರೆಕ್ಷನ್ ಮಾಡೊ ಸಾಧ್ಯತೆ ಇದೆ.ಅಲ್ಲದೆ ಈ ಚಿತ್ರ ಯಶ್ ಹೋಮ್ ಪ್ರೊಡಕ್ಷನ್ಸ್  ನಲ್ಲಿ ಅರಳಲಿದ್ದು, ಮುಂಬೈನ ಪ್ರೊಡಕ್ಷನ್ ಹೌಸ್ ಒಂದು ರಾಕಿಗೆ ಸಾಥ್ ಕೊಡಲಿದ್ದಾರೆ ಅನ್ನೋ ಸುದ್ದಿ ಈಗ ಅಖಾಡಕ್ಕೆ ಹೊಸದಾಗಿ ಎಂಟ್ರಿಕೊಟ್ಟಿದೆ..

ಇದನ್ನೂ ಓದಿ-Pushpavati song: ಸಖತ್ ಟ್ರೆಂಡಿಂಗ್ನಲ್ಲಿವೆ ಕ್ರಾಂತಿ ಹಾಗೂ ವೇದ ಸಿನಿಮಾದ ʼಪುಷ್ಪಾವತಿʼ 

ಯಶ್ ಕೆರಿಯರ್ ಆರಂಭದ ದಿನಗಳಿಂದಲೂ ಇಲ್ಲಿ ವರೆಗೂ ಪ್ರತಿ ಹೆಜ್ಜೆಯಲ್ಲೂ ಹೆಜ್ಜೆ ಹಾಕ್ತಿರುವ ರಾಧಿಕ ಎಲ್ಲಾ ಅಂದು ಕೊಂಡಂತೆ ಅದ್ರೆ ಯಶ್19 ಚಿತ್ರಕ್ಕೆ ಸಾರಥಿಯಾಗುತ್ತಾರೆ.. ಅಲ್ಲದೆ ರಾಧಿಕಾ ಪಂಡಿತ್ ಸೀರಿಯಲ್ ನಲ್ಲಿ ನಟಿಸುವಾಗಿನಿಂದ ಡೈರೆಕ್ಷನ್ ಮಾಡುವ ಹಂಬಲ ಅವರಲಿ ಇತ್ತು ಅನ್ನೋದು ಮತ್ತೊಂಡು ಇಂಟ್ರೆಸ್ಟಿಂಗ್ ವಿಚಾರವಾಗಿದೆ..ಅದ್ರೆ ಇದೆಲ್ಲ ಅಧಿಕೃತವಾಗಿ ಕನ್ಪರ್ನ್ ಆಗಬೇಕಾದ್ರೆ ಇನ್ನು ಕೊಂಚ ತಡವಾಗುತ್ತೆ...
ಯಾಕೆಂದರೆ ಮಣಿರತ್ನಂ ಹಾಗೂ ಲೋಕೇಶ್ ಕನಗರಾಜ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇದ್ದು, ಆ ಚಿತ್ರಗಳ ಕಂಪ್ಲೀಟ್ ಆದ ನಂತರ ಯಶ್  19 ಅಪ್ಡೇಟ್ ಸಿಗಲಿದೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News