Karnataka Hijab Controversy - ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ರಾಜ್ಯ ಹೈಕೋರ್ಟ್ (Karnataka High Court) ಶುಕ್ರವಾರ ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರ ತ್ರಿಸದಸ್ಯ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು (Hijab Ban) ಪ್ರಶ್ನಿಸಿ ವಿವಿಧ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

COMMERCIAL BREAK
SCROLL TO CONTINUE READING

ಅರ್ಜಿಗಳ ವಿಚಾರಣೆ ಆಲಿಸಿದ ಪೀಠ  ‘‘ವಿಚಾರಣೆ ಮುಗಿದಿದೆ. ನಿರ್ಧಾರವನ್ನು ಕಾಯ್ದಿರಿಸಲಾಗಿದೆ” ಎಂದು ಹೇಳಿದೆ. ಇದರ ಹೊರತಾಗಿ, ಲಿಖಿತ ವಾದವನ್ನು ನೀಡುವಂತೆ ನ್ಯಾಯಾಲಯವು ಎಲ್ಲಾ ಕಕ್ಷಿದಾರರಿಗೆ ತಿಳಿಸಿದೆ. ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಯೂಸುಫ್ ಮುಚ್ಚ್ಲಾ ಅವರು ತಮ್ಮ ವಾದದಲ್ಲಿ ಅರ್ಜಿದಾರರಿಗೆ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲು ಅವಕಾಶ ನೀಡಬೇಕು (Karnataka Hijab Row) ಎಂದು ಹೇಳಿದ್ದಾರೆ. ಕಾಲೇಜುಗಳ ವತಿಯಿಂದ ನಾವು ಈ ರೀತಿ ಮಾಡುವುದನ್ನು ತಡೆಯುವುದು ಸರಿಯಲ್ಲ" ಎಂದು ಮಚ್ಲಾ ಹೇಳಿದ್ದಾರೆ. 

ಈ ಪ್ರಕರಣದ ವಿಸ್ತೃತ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ. ಎಂ. ಕಾಜಿ ಅವರ ಪೀಠವನ್ನು ಫೆಬ್ರವರಿ 9 ರಂದು ರಚಿಸಲಾಗಿತ್ತು ಮತ್ತು ಪೀಠ ದಿನನಿತ್ಯದ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆಲಿಸಿದೆ. ‘ಸಮವಸ್ತ್ರ’ ಅನ್ವಯವಾಗುವ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕೆಲವು ಹುಡುಗಿಯರು ಅರ್ಜಿಯಲ್ಲಿ ಪೀಠವನ್ನು ಕೋರಿದ್ದರು. ಕಳೆದ ಡಿಸೆಂಬರ್‌ನಲ್ಲಿ ಉಡುಪಿಯ ಪ್ರಿ-ಯೂನಿವರ್ಸಿಟಿ ಕಾಲೇಜಿನಲ್ಲಿ ಡ್ರೆಸ್ ಕೋಡ್ ಉಲ್ಲಂಘಿಸಿದ ಕಾರಣಕ್ಕಾಗಿ ಕೆಲವು ಹುಡುಗಿಯರನ್ನು ತರಗತಿಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.

ಹಿಜಾಬ್‌ನಿಂದಾಗಿ ಪ್ರವೇಶ ನಿರಾಕರಿಸಲ್ಪಟ್ಟ ಆರು ಹುಡುಗಿಯರು, ಪ್ರವೇಶ ನಿಷೇಧದ ವಿರುದ್ಧ ಜನವರಿ 1 ರಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆ ಆರಂಭಿಸಿದ್ದಾರೆ. 


ಇದನ್ನೂ ಓದಿ-ಧರಣಿ ಕೈ ಬಿಡದ ಕಾಂಗ್ರೆಸ್ : ಸೋಮವಾರದ ಬಳಿಕ ಸದನ ಅನಿರ್ದಿಷ್ಟಾವಧಿ ಗೆ ಮುಂದೂಡಲು ಸರ್ಕಾರ ತೀರ್ಮಾನ ?

ಬಳಿಕ ಈ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಿದ್ದ ಪೀಠ, ಆಂದೋಲನದಿಂದ ಹಾನಿಗೊಳಗಾದ ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಲು ಮತ್ತು ನ್ಯಾಯಾಲಯದಿಂದ ಅಂತಿಮ ಆದೇಶವನ್ನು ಹೊರಡಿಸುವವರೆಗೆ ವಿದ್ಯಾರ್ಥಿಗಳು ಧಾರ್ಮಿಕ ಚಿಹ್ನೆಗಳನ್ನು ಧರಿಸುವುದನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. 


ಇದನ್ನೂ ಓದಿ-ಹಿಜಾಬ್ ತೆಗೆದು ಪಾಠ ಮಾಡಲು ಉಪನ್ಯಾಸಕಿ ನಕಾರ, ಕೆಲಸಕ್ಕೆ ರಾಜೀನಾಮೆ



ಈ ಕುರಿತು ಮಾಹಿತಿ ನೀಡಿದ್ದ ಕಾಲೇಜಿನ ಪ್ರಾಂಶುಪಾಲರೊಬ್ಬರು, "ಕಳೆದ 35 ವರ್ಷಗಳಲ್ಲಿ ಯಾರೂ ಅದನ್ನು ತರಗತಿಯಲ್ಲಿ ಧರಿಸದ ಕಾರಣ ಸಂಸ್ಥೆಯಲ್ಲಿ ಹಿಜಾಬ್ ಅನ್ನು ಧರಿಸಲು ಯಾವುದೇ ನಿಯಮವಿಲ್ಲ, ಬೇಡಿಕೆಯಿರುವ ವಿದ್ಯಾರ್ಥಿನಿಯರಿಗೆ ಹೊರಗಿನ ಶಕ್ತಿಗಳು ಬೆಂಬಲ ನೀಡುತ್ತಿವೆ" ಎಂದು ಹೇಳಿದ್ದರು.


ಇದನ್ನೂ  ಓದಿ-CT Ravi: ದೇಶ ತುಂಡು ಮಾಡುವುದು ಹುಚ್ಚುತನ ಎಂದಿದ್ದ ನೆಹರು, ಮೋಸ ಮಾಡಿಲ್ವಾ? : ಸಿಟಿ ರವಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ