ಮಂಡ್ಯ : ರಾಜ್ಯದಲ್ಲಿ ತಲೆದೋರಿದ್ದ ಹಿಜಾಬ್ ವಿವಾದದ ವೇಳೆ, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ವಿದೇಶಕ್ಕೆ ತೆರಳಿದ್ದಾರೆ.  ಮುಸ್ಕಾನ್ ಕಳೆದ ತಿಂಗಳು ಅಂದರೆ ಏಪ್ರಿಲ್ 25 ರಂದು  ಸೌದಿಗೆ ತೆರಲಿದ್ದಾರೆ ಎನ್ನಲಾಗಿದೆ.  ಮುಸ್ಕಾನ್ ವಿದೇಶಕ್ಕೆ ತೆರಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. 


COMMERCIAL BREAK
SCROLL TO CONTINUE READING

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವಿವಾದ ಎಬ್ಬಿತ್ತು. ಈ ವೇಳೆ ಶಾಲಾ ಕಾಲೇಜುಗಳಿಗೆ ಹಿಜಾಬ್ ಧರಿಸಿಕೊಂಡು ಬರಲು ಅವಕಾಶ ನೀಡಬೇಕು ಎಂದು ಒಂದು ಗುಂಪು ಒತ್ತಾಯಿಸಿದರೆ, ಮತ್ತೊಂದು ಗುಂಪು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ಕೂಡಾ ನಡೆದಿತ್ತು. ಮಾತ್ರವಲ್ಲ, ಹಿಜಾಬ್ ಗೆ ಅವಕಾಶ ನೀಡಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲು ಕೂಡಾ ಹತ್ತಲಾಗಿತ್ತು. 


ಇದನ್ನೂ ಓದಿ : ವಾತಾವರಣದಲ್ಲಿ ಏರುಪೇರು ಪ್ರಭಾವ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ


ಹೀಗೆ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮಂಡ್ಯದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಜೈ ಶ್ರೀ ರಾಮ್ ಘೋಷಣೆ ಕೂಗುತ್ತಿದ್ದ ವೇಳೆ ಪ್ರತಿಯಾಗಿ ಮುಸ್ಲಿ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಘೋಷಣೆ ಹಾಕಿದ್ದಾರೆ. ಇದಾದ ಬಳಿಕ ಮುಸ್ಕಾನ್ ಭಾರೀ ಪ್ರಚಾರ ಪಡೆದಿದ್ದರು. ಮಾತ್ರವಲ್ಲ, ಅನೇಕ  ಸಂಘಟನೆಗಳು ಮುಸ್ಕಾನ್ ಗೆ ಬಹುಮಾನ ಕೂಡಾ ಘೋಷಿಸಿತ್ತು. ಅಲ್ಲದೆ, ಆಲ್ ಖೈದಾ ಮುಖ್ಯಸ್ಥ ಕೂಡಾ ಮುಸ್ಕಾನ್ ಅನ್ನು ಹೊಗಳಿ ವಿಡಿಯೋ ಬಿಡುಗಡೆ ಮಾಡಿದ್ದ. 


ಇದಾದ ಬಳಿಕ ಮುಸ್ಕಾನ್ ಗೆ ಭಯೋತ್ಪಾದಕ ಸಂಘಟನೆಗಳ ನಂಟಿದೆ ಎನ್ನುವ ಆರೋಪ ಕೂಡಾ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಕೂಡಾ ಆಗ್ರಹಿಸಲಾಗಿತ್ತು. ಇದೀಗ ಮುಸ್ಕಾನ್ ವಿದೇಶಕ್ಕೆ ತೆರಳಿರುವುದು ಕೂಡಾ ಚರ್ಚೆಗೆ ಗ್ರಾಸವಾಗಿದೆ. ಮುಸ್ಕಾನ್ ಈಗಾಗಲೇ ಸೌದಿಗೆ ತೆರಳಿದ್ದು, ಅವರ ಕುಟುಂಬ ಕೂಡ ಧಾರ್ಮಿಕ ಪ್ರವಾಸಕ್ಕೆಂದು ಸೌದಿಗೆ ತೆರಳಲು ಸಿದ್ದತೆ ನಡೆಸಿದೆ. ಮುಸ್ಕಾನ್ ಮತ್ತು ಅವರ ಕುಟುಂಬದ  ವಿದೇಶ ಪ್ರಯಾಣದ ಬಗ್ಗೆಯೂ ಇದೀಗ ಪ್ರಶ್ನೆ ಎದ್ದಿವೆ.  ಮುಸ್ಕಾನ್ ಮತ್ತು ಅವರ ಕುಟುಂಬದ ಸೌದಿ ಪ್ರವಾಸದ ಬಗ್ಗೆ ವಿಚಾರಣೆ ನಡೆಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. 


ಇದನ್ನೂ ಓದಿ : ವಿದ್ಯುತ್‌ ಸ್ಪರ್ಶಿಸಿ ಜ್ಯೂ. ರವಿಚಂದ್ರನ್‌ ನಿಧನ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.