ವಿದ್ಯುತ್‌ ಸ್ಪರ್ಶಿಸಿ ಜ್ಯೂ. ರವಿಚಂದ್ರನ್‌ ನಿಧನ

ತುಮಕೂರಿನ ಕುಣಿಗಲ್‌ ತಾಲೂಕಿನ ಹೆರೂರು ಮೂಲದವರಾಗಿದ್ದ ಲಕ್ಷ್ಮೀ ಅವರಿಗೆ 35 ವರ್ಷ ವಯಸ್ಸಾಗಿತ್ತು. ಇನ್ನು ಮಂಗಳವಾರದಂದು ಸಂಪ್‌ಗೆ ನೀರು ತುಂಬಿಸಲು ಮೋಟಾರ್‌ ಚಾಲು ಮಾಡುವ ಸಂದರ್ಭದಲ್ಲಿ ಕರೆಂಟ್‌ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 

Written by - Bhavishya Shetty | Last Updated : May 11, 2022, 08:39 AM IST
  • ವಿದ್ಯುತ್‌ ಸ್ಪರ್ಶದಿಂದ ಜ್ಯೂನಿಯರ್‌ ರವಿಚಂದ್ರನ್‌ ನಿಧನ
  • ತುಮಕೂರಿನ ಆರ್ಕೆಸ್ಟ್ರಾದಲ್ಲಿ ಕಲಾವಿದರಾಗಿದ್ದರು
  • ಜ್ಯೂ. ರವಿಚಂದ್ರನ್‌ ಅವರ ನಿಜನಾಮ ಲಕ್ಮೀ ನಾರಾಯಣ
ವಿದ್ಯುತ್‌ ಸ್ಪರ್ಶಿಸಿ ಜ್ಯೂ. ರವಿಚಂದ್ರನ್‌ ನಿಧನ title=
Junior Ravichandran

ಕ್ರೇಜಿಸ್ಟಾರ್‌ ರವಿಚಂದ್ರನ್‌ರನ್ನು ಹೋಲುವ, ಜ್ಯೂನಿಯರ್‌ ರವಿಚಂದ್ರನ್‌ ಎಂದೇ ಖ್ಯಾತಿಗಳಿಸಿದ್ದ ಲಕ್ಮೀ ನಾರಾಯಣ ಎಂಬವರು ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಇವರು ತುಮಕೂರಿನ ಆರ್ಕೆಸ್ಟ್ರಾವೊಂದರಲ್ಲಿ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. 

ಇದನ್ನು ಓದಿ: Shakun Shastra: ಮನೆಗೆ ಕಾಗೆಗಳ ಆಗಮನ ಶುಭವೋ ಅಶುಭವೋ?

ತುಮಕೂರಿನ ಕುಣಿಗಲ್‌ ತಾಲೂಕಿನ ಹೆರೂರು ಮೂಲದವರಾಗಿದ್ದ ಲಕ್ಷ್ಮೀ ಅವರಿಗೆ 35 ವರ್ಷ ವಯಸ್ಸಾಗಿತ್ತು. ಇನ್ನು ಮಂಗಳವಾರದಂದು ಸಂಪ್‌ಗೆ ನೀರು ತುಂಬಿಸಲು ಮೋಟಾರ್‌ ಚಾಲು ಮಾಡುವ ಸಂದರ್ಭದಲ್ಲಿ ಕರೆಂಟ್‌ ಪ್ರವಹಿಸಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 

ಕ್ರೇಜಿಸ್ಟಾರ್‌ ರವಿಚಂದ್ರನ್‌ರಂತೆ ಕಾಣುವ ಲಕ್ಷೀ ನಾರಾಯಣ್‌ ಅವರಿಗೆ ಅನೇಕ ಅಭಿಮಾನಿಗಳಿದ್ದರು. ಇನ್ನು ರವಿಚಂದ್ರನ್‌ರಂತೆ ಹಾವಭಾವ ಹೊಂದಿರುವ ಇವರ  ನಟನೆಗೆ ಜನರು ಫಿದಾ ಆಗಿದ್ದರು.  

ಇದನ್ನು ಓದಿ: Gold Price Today: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರವೂ ಕುಸಿತ

ರವಿಚಂದ್ರನ್ ಅವರ ಅಪ್ಪಟ ಅಭಿಮಾನಿ, ಜ್ಯೂನಿಯರ್‌ ರವಿಚಂದ್ರನ್‌ ಅಗಲಿಕೆಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಂಬನಿ ಮಿಡಿದಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News