ವಿಜಯನಗರ: ರಾಜಸ್ಥಾನದ ಉದಯಪುರದಲ್ಲಿ ಹಾಡಹಾಗಲೇ ನಡೆದ ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ಇಂದು ಸ್ವಯಂ ಪ್ರೇರಣೆಯಿಂದ ಹೊಸಪೇಟೆ ಬಂದ್‍ಗೆ ಕರೆ ನೀಡಲಾಗಿದೆ.  


COMMERCIAL BREAK
SCROLL TO CONTINUE READING

ಹೊಸಪೇಟೆಯ ಪಾದಗಟ್ಟಿ ಆಂಜನೇಯ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಮೆರವಣಿಗೆ ಆರಂಭವಾಗಲಿದೆ. ಶ್ರೀರಾಮಸೇನೆ, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂಪರ ಸಂಘಟನೆಗಳಿಂದ ಬಂದ್‍ಗೆ  ಕರೆ ನೀಡಲಾಗಿದೆ.


ಇದನ್ನೂ ಓದಿ: ಹೋಂ ವರ್ಕ್‌ ಮಾಡಿಲ್ಲ ಅಂತಾ ಕಿವಿಯಲ್ಲಿ ರಕ್ತ ಬರೋ ಥರ ಹೊಡೆದ ಕ್ರೂರ ಶಿಕ್ಷಕ!


ಈ ಬಂದ್ ಕರೆಗೆ ಹೊಸಪೇಟೆ ವ್ಯಾಪಾರಸ್ಥರಿಂದ ಬೆಂಬಲ ಸಿಗುವ ಸಾಧ್ಯತೆ ಇದೆ. ಆದರೆ, ಬಸ್ ಸಂಚಾರ, ಆಟೋ ಸಂಚಾರ ಮತ್ತು ಶಾಲಾ-ಕಾಲೇಜುಗಳು ಎಂದಿನಂತೆ ಆರಂಭವಾಗಲಿವೆ. ಬಂದ್ ಹಿನ್ನೆಲೆ ಹೊಸಪೇಟೆಯ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.


ದೇಶದಲ್ಲಿ ಅಮಾಯಕ ಹಿಂದೂಗಳ ಕೊಲೆ ನಿರಂತರವಾಗಿ ನಡೆಯುತ್ತಲೇ ಇದೆ. ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಿಂದೂಪರ ಸಂಘಟನೆಗಳು ಒತ್ತಾಯಿಸಲಿವೆ. ಇದಲ್ಲದೆ ಪ್ರತಿಭಟನೆ ಬಳಿಕ ಕನ್ಹಯ್ಯ ಲಾಲ್ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತೇವೆ ಎಂದು ಹಿಂದೂ ಮುಖಂಡರು ತಿಳಿಸಿದ್ದಾರೆ.


ಇದನ್ನೂ ಓದಿ: ಸಾವಿರಾರು ದೂರು ಬಂದ್ರು ತಲೆಕೆಡಿಸಿಕೊಳ್ಳದ ಬಿಎಂಟಿಎಫ್‌: ಸಾರ್ವಜನಿಕರಿಂದ ಅಸಮಾಧಾನ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ