Karnataka 2nd PUC Result: 2021-2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಶನಿವಾರ (ಇಂದು) ಪ್ರಕಟವಾಗಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ದ್ವಿತೀಯ ಸ್ಥಾನ ಮತ್ತು ವಿಜಯಪುರ ಮೂರನೇ ಸ್ಥಾನ ಪಡೆದುಕೊಂಡಿದೆ. ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನಕ್ಕೆ ಪಡೆದಿದೆ. ಪ್ರತಿ ಬಾರಿಯಂತೆ ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ www.karresults.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ತಿಳಿಯಬಹುದಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Karnataka 2nd PUC Result 2022: ಶೇ.61.88ರಷ್ಟು ಉತ್ತೀರ್ಣ, ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ


ಸ್ಟೂಡೆಂಟ್‌ ಲೈಫ್‌ನ ಪ್ರಮುಖ ಘಟ್ಟ ದ್ವಿತೀಯ ಪಿಯುಸಿ ಆಗಿದ್ದು, ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅಂಕಪಟ್ಟಿ ಅವಶ್ಯಕವಾಗಿ ಬೇಕಾಗುತ್ತದೆ. ಇದೀಗ 2nd ಪಿಯುಸಿ ಫಲಿತಾಂಶವೇನೋ ಪ್ರಕಟವಾಗಿದೆ. ಆದರೆ ಪರೀಕ್ಷಾ ಮಂಡಳಿಯಿಂದ ನಿಮ್ಮ ಅಂಕಪಟ್ಟಿ ಬರವುದು ತಡವಾದರೆ ಚಿಂತೆ ಮಾಡಬೇಡಿ. ಸುಲಭವಾಗಿಯೇ ಮಾರ್ಕ್ಸ್‌ ಕಾರ್ಡ್‌ ಪಡೆಯುವ ವಿಧಾನ ಇಲ್ಲಿದೆ. 


ರಿಸಲ್ಟ್‌ ಪ್ರಕಟವಾದ 15 ರಿಂದ 20 ದಿನಗಳಲ್ಲಿ ಪರೀಕ್ಷಾ ಮಂಡಳಿಯಿಂದ ನಿಮ್ಮ ಅಂಕಪಟ್ಟಿ ಬರುತ್ತದೆ. ಈ ಮಾರ್ಕ್ಸ್‌ ಕಾರ್ಡ್‌ ಅನ್ನು ನೀವು ಓದಿದ ಕಾಲೇಜುಗಳಿಗೆ ತೆರಳಿ ಪಡೆಯಬಹುದು. ಅಂಕಪಟ್ಟಿಯನ್ನು ಪಡೆದ ನಂತರ ಅದರಲ್ಲಿ ನಿಮ್ಮ ಹೆಸರು, ತಂದೆ, ತಾಯಿ ಮತ್ತು ವಿಳಾಸ, ಅಂಕಗಳು ಸರಿಯಾಗಿ ಇವೆಯೇ ಎಂಬುದನ್ನು ಪರಿಶೀಲಿಸುವುದು ಕೂಡ ಬಹಳ ಮುಖ್ಯವಾಗಿದೆ. 


ಒಂದು ವೇಳೆ ಪರೀಕ್ಷಾ ಮಂಡಳಿಯಿಂದ ಅಂಕಪಟ್ಟಿ ಬರವುದು ತಡವಾದರೆ, ನೀವು ತಾತ್ಕಾಲಿಕ ಅಂಕಪಟ್ಟಿಯನ್ನು ಪಡೆಯಬಹುದಾಗಿದೆ. ಇದನ್ನು ಮುಂದಿನ ಉಪಯೋಗಕ್ಕೆ ಬಳಸಬಹುದು ಸಹ. ಫಲಿತಾಂಶ ಪ್ರಕಟವಾದ ನಂತರ ನೀವು ಅಧ್ಯಯನ ಮಾಡಿದ ವಿದ್ಯಾಸಂಸ್ಥೆಗೆ ತೆರಳಿ ಅಲ್ಲಿ ನೀವು ತಾತ್ಕಾಲಿಕ ಅಂಕಪಟ್ಟಿಯನ್ನು ಪಡೆಯಬಹುದು. ನೀವು ಓದಿದ ಕಾಲೇಜಿನ ಮುಖ್ಯೋಪಾಧ್ಯರು/ಪ್ರಾಶುಂಪಾಲರು ನಿಮಗೆ ತಾತ್ಕಾಲಿಕ ಅಂಕಪಟ್ಟಿ ನೀಡುತ್ತಾರೆ. ಈ ಅಂಕಪಟ್ಟಿ ತಾತ್ಕಾಲಿಕವಾಗಿದ್ದು, ನಿಮ್ಮ ಮುಂದಿನ ಕಾಲೇಜುಗಳ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ. ಈ ಅಂಕಪಟ್ಟಿಯಲ್ಲಿ ನೀವು ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ಬರೆದು, ಮುಖ್ಯೋಪಾಧ್ಯರು/ ಪ್ರಾಶುಂಪಾಲರು ಸಹಿ ಮಾಡಿ ನಿಮಗೆ ನೀಡುತ್ತಾರೆ. 


ಫಲಿತಾಂಶ ನೋಡುವ ವಿಧಾನ: 


  • ಅಧಿಕೃತ ವೆಬ್‌ಸೈಟ್‌ www.karresults.nic.in ಗೆ ಭೇಟಿ ನೀಡಿ

  • ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

  • ನಿಮ್ಮ ರಿಜಿಸ್ಟರ್ ನಂಬರ್ ಟೈಪ್‌ ಮಾಡಿ, 'Submit' ಎಂಬಲ್ಲಿ ಕ್ಲಿಕ್‌ ಮಾಡಿ

  • ನಿಮ್ಮ ಫಲಿತಾಂಶ ಸಿಸ್ಟಮ್‌ನ ಸ್ಕ್ರೀನ್‌ ಮೇಲೆ ಕಾಣುತ್ತದೆ

  • ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡು, ಪ್ರಿಂಟ್‌ ತೆಗೆದುಕೊಳ್ಳಿ


ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 35 ದಿನದಲ್ಲಿ 2 ಕೋಟಿ ರೂ. ಸಂಗ್ರಹ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.