ವಿಮಾನ ಹಾಗೂ ಸ್ಪೋರ್ಟ್ಸ್ ಕಾರ್ ತಯಾರಿಸಿ ಸೀ ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹುಬ್ಬಳ್ಳಿ ವಿದ್ಯಾರ್ಥಿಗಳು
ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಎರಡು ಪ್ರತ್ಯೇಕ ತಂಡಗಳು ಅತಿ ವೇಗದ ಕಾರು ಹಾಗೂ ಹಾರುವ ಸಾಮರ್ಥ್ಯವನ್ನು ಹೊಂದಿರುವ ವಿಮಾನವನ್ನು ತಯಾರಿಸಿದ್ದಾರೆ.
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ವಿಮಾನ ಹಾಗೂ ಅತಿ ವೇಗದ ಸ್ಪೋರ್ಟ್ಸ್ ಕಾರ್ ಗಳನ್ನು ತಯಾರಿಸುವ ಮೂಲಕ ಸೀ ಇಂಡಿಯಾ ರಾಷ್ಟ್ರೀಯ ಮಟ್ಟದ ಕಾಂಪಿಟೇಶನ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಎರಡು ಪ್ರತ್ಯೇಕ ತಂಡಗಳು ಅತಿ ವೇಗದ ಕಾರು ಹಾಗೂ ಹಾರುವ ಸಾಮರ್ಥ್ಯವನ್ನು ಹೊಂದಿರುವ ವಿಮಾನವನ್ನು ತಯಾರಿಸಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳು ತಯಾರಿಸಿರುವ ಕಾರು ಹಾಗೂ ವಿಮಾನವನ್ನು ಗೇಟರ್ ನೋಯ್ಡಾದಲ್ಲಿ ನಡೆದ ಸೀ ಇಂಡಿಯಾ ಕಾಂಪಿಟೇಶನ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ- 'ನಾನು ಆರೋಗ್ಯವಾಗಿದ್ದೇನೆ'; ಮುಖಂಡರು, ಕಾರ್ಯಕರ್ತರಿಗೆ ಹೆಚ್.ಡಿ.ದೇವೇಗೌಡರ ಸಂದೇಶ
ವಿಮಾನ ತಯಾರಿಸಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ಒಂದು ಲಕ್ಷ ಹಾಗೂ ಕಾರು ತಯಾರಿಸಿ ಪ್ರಥಮ ಸ್ಥಾನ ಗಳಿಸಿರುವ ತಂಡಕ್ಕೆ ಎರಡು ಲಕ್ಷ ಬಹುಮಾನ ನೀಡಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದೆ ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ- ವಿದ್ಯುತ್ ಬಿಲ್ ಕುರಿತು ಸಾರ್ವಜನಿಕರಿಗೆ ಸುಳ್ಳು ಮಾಹಿತಿ: ಕಾನೂನು ಕ್ರಮಕ್ಕೆ ಮುಂದಾದ ಬೆಸ್ಕಾಂ
ವಿದ್ಯಾರ್ಥಿಗಳು ತಯಾರಿಸಿದ ಕಾರ್ ಹಾಗೂ ವಿಮಾನವನ್ನು ಬಿವಿಬಿ ಕಾಲೇಜಿನ ಎದುರು ಪ್ರದರ್ಶನಕ್ಕೆ ಇಡಲಾಗಿದೆ. ಇಂತಹವೊಂದು ಪ್ರೊಜೆಕ್ಟ್ ಮಾಡಿ ಪ್ರಶಸ್ತಿ ಗೆದ್ದಿರುವುದು ನಮಗೆಲ್ಲ ಖುಷಿ ತಂದಿದೆ ಎಂದು ತಮ್ಮ ಪ್ರೊಜೆಕ್ಟ್ ಬಗ್ಗೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.