ವಿದ್ಯುತ್‌ ಬಿಲ್‌ ಕುರಿತು ಸಾರ್ವಜನಿಕರಿಗೆ ಸುಳ್ಳು ಮಾಹಿತಿ: ಕಾನೂನು ಕ್ರಮಕ್ಕೆ ಮುಂದಾದ ಬೆಸ್ಕಾಂ

ಬೆಸ್ಕಾಂ ನೀಡುವ ಮಾಸಿಕ ವಿದ್ಯುತ್‌ ಬಿಲ್‌ನಲ್ಲಿ ನಮೂದಿಸಿರುವ ನಿಗದಿತ ಶುಲ್ಕ ಮತ್ತು ಇಂಧನ ಹೊಂದಾಣಿಕೆ ಶುಲ್ಕದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರು ಸುಳ್ಳು ಮಾಹಿತಿಯನ್ನು ಹರಿಬಿಟ್ಟಿದ್ದು, ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಬೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ.

Written by - Manjunath Hosahalli | Edited by - Manjunath N | Last Updated : Sep 22, 2022, 08:21 PM IST
  • ಅದೇ ರೀತಿ ಇಂಧನ ಹೊಂದಾಣಿಕೆ ಶುಲ್ಕವನ್ನು ಕಲ್ಲಿದ್ದಲು ಖರೀದಿ ವೆಚ್ಚದ ಆಧಾರದ ಮೇಲೆ ಕೆಇಆರ್‌ಸಿ ಕಾಲಕಾಲಕ್ಕೆ ಪರಿಷ್ಕರಿಸುತ್ತದೆ.
  • ಇಂಧನ ಹೊಂದಾಣಿಕೆ ಶುಲ್ಕವನ್ನು ಕೆಇಆರ್‌ಸಿ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ ಎಂದು ಬೆಸ್ಕಾಂ ಎಂಡಿ ಸಷ್ಟಪಡಿಸಿದ್ದಾರೆ.
ವಿದ್ಯುತ್‌ ಬಿಲ್‌ ಕುರಿತು ಸಾರ್ವಜನಿಕರಿಗೆ ಸುಳ್ಳು ಮಾಹಿತಿ: ಕಾನೂನು ಕ್ರಮಕ್ಕೆ ಮುಂದಾದ ಬೆಸ್ಕಾಂ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಸ್ಕಾಂ ನೀಡುವ ಮಾಸಿಕ ವಿದ್ಯುತ್‌ ಬಿಲ್‌ನಲ್ಲಿ ನಮೂದಿಸಿರುವ ನಿಗದಿತ ಶುಲ್ಕ ಮತ್ತು ಇಂಧನ ಹೊಂದಾಣಿಕೆ ಶುಲ್ಕದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರು ಸುಳ್ಳು ಮಾಹಿತಿಯನ್ನು ಹರಿಬಿಟ್ಟಿದ್ದು, ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಬೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ.

ಮಾಸಿಕ ಬಿಲ್‌ ನಲ್ಲಿ ನಮೂದಿಸಲಾಗುವ ನಿಗದಿತ ಶುಲ್ಕವನ್ನು ಸಂಗ್ರಹಿಸಲು ಬೆಸ್ಕಾಂಗೆ ಯಾವುದೇ ಅಧಿಕಾರವಿಲ್ಲ ಮತ್ತು ಇಂಧನ ಹೊಂದಾಣಿಕೆ ಶುಲ್ಕ ವಿಧಿಸಿ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಪುಟ್ಟೇಗೌಡ ಎಂಬ ವ್ಯಕ್ತಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇಂತಹ ಸುಳ್ಳು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.

ಬಿಲ್‌ ನಲ್ಲಿ ನಮೂದಿಸಿರುವ ನಿಗದಿತ ಶುಲ್ಕವು 1 ಕಿಲೋ ವ್ಯಾಟ್‌ ಗೆ 100 ರೂ ಇದ್ದು, 2 ಕಿಲೋ ವ್ಯಾಟ್‌ ಗೆ 220 ರೂಪಾಯಿಯನ್ನು ಕೆಇಆರ್‌ಸಿ  ನಿಗದಿ ಪಡಿಸಿರುತ್ತದೆ. ನಿಗದಿತ ಶುಲ್ಕವು ಗ್ರಾಹಕರು ಬಳಸುವ ವಿದ್ಯುತ್‌ ಬಳಕೆ ಮೇಲೆ ವಿದಿಸುವ ಶುಲ್ಕ ಆಗಿರುವುದಿಲ್ಲ. ಗ್ರಾಹಕರು ವಿದ್ಯುತ್‌ ಬಳಸದಿದ್ದರೂ ಅವರು ನಿಗದಿತ ಶುಲ್ಕ (ಫಿಕ್ಸೆಡ್‌ ಚಾರ್ಜಸ್‌) ಕಟ್ಟಲೇ ಬೇಕಾಗಿರುತ್ತದೆ. ಗ್ರಾಹಕರಿಗೆ  ವಿದ್ಯುತ್‌ ಸಂಪರ್ಕ ಮತ್ತು ಅದನ್ನು ಪೂರೈಸಲು ಬೆಸ್ಕಾಂ ಒದಗಿಸುವ ಮೂಲಸೌಕರ್ಯದ ನಿರ್ವಹಣಾ ವೆಚ್ಚಕ್ಕಾಗಿ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಬೆಸ್ಕಾಂ ಎಂಡಿ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಪಿಬಿಎಸ್‌ ಅವರ ಜನ್ಮದಿನದ ಸವಿನೆನಪು : ಅಮರ ಗಾಯಕನ ಯಾವ ಹಾಡು ನಿಮಗಿಷ್ಟ..?

ಅದೇ ರೀತಿ ಇಂಧನ ಹೊಂದಾಣಿಕೆ ಶುಲ್ಕವನ್ನು ಕಲ್ಲಿದ್ದಲು ಖರೀದಿ ವೆಚ್ಚದ ಆಧಾರದ ಮೇಲೆ ಕೆಇಆರ್‌ಸಿ ಕಾಲಕಾಲಕ್ಕೆ ಪರಿಷ್ಕರಿಸುತ್ತದೆ. ಇಂಧನ ಹೊಂದಾಣಿಕೆ  ಶುಲ್ಕವನ್ನು ಕೆಇಆರ್‌ಸಿ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ ಎಂದು ಬೆಸ್ಕಾಂ ಎಂಡಿ ಸಷ್ಟಪಡಿಸಿದ್ದಾರೆ.

ಹಾಗೆಯೇ ಬಿಲ್‌ ನಲ್ಲಿ ನಮೂದಿಸಿರುವ ಪೆನಾಲ್ಟಿ ಗ್ರಾಹಕರು ತಾವು ಪಡೆದ ವಿದ್ಯುತ್‌ ಪ್ರಮಾಣದ ಸಮಾರ್ಥ್ಯಕ್ಕಿಂತ (ಉದಾಹರಣೆಗೆ 3 ಕಿ.ವ್ಯಾಟ್‌), ಹೆಚ್ಚಿನ ವಿದ್ಯುತ್‌ ಸಾಮರ್ಥ್ಯವನ್ನು ಬಳಸಿದ್ದರೆ ಮಾತ್ರ ಪೆನಾಲ್ಟಿ ಹೆ.ಲೋ ದಂಡವನ್ನು ವಿಧಿಸಲಾಗುತ್ತದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.

ವಿದ್ಯುತ್‌ ಬಿಲ್‌ ನಲ್ಲಿ ನಮೂದಿಸಿರುವ ಬಡ್ಡಿ ಯನ್ನು ನಿಗದಿತ ಅವಧಿಯೊಳಗೆ ವಿದ್ಯುತ್‌ ಶುಲ್ಕ ಪಾವತಿಸದಿದ್ದರೆ ಮಾತ್ರ ವಿಧಿಸಲಾಗುತ್ತದೆ. ಹಾಗೆಯೇ ಬಿಲ್‌ ನಲ್ಲಿ ಉಲ್ಲೇಖಿಸಿರುವ ತೆರಿಗೆಯನ್ನು  ರಾಜ್ಯ ಸರಕಾರದ ಪರವಾಗಿ ಬೆಸ್ಕಾಂ ಸಂಗ್ರಹಿಸುತ್ತಿದೆ. ತೆರಿಗೆ ದರವನ್ನು ಕೆಇಆರ್‌ಸಿ ಪರಿಷ್ಕರಿಸುತ್ತದೆ.ವಾಸ್ತವವನ್ನು ಮರೆಮಾಚಿ, ವಿದ್ಯುತ್‌ ಬಿಲ್‌ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯದೇ ಜನರನ್ನು ದಾರಿ ತಪ್ಪಿಸುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಎಚ್ಚರಿಸಿದರು.

ಪದೆ ಪದೆ ಸುಳ್ಳು ವದಂತಿ ಹಬ್ಬಿಸುತ್ತಿರುವ ವ್ಯಕ್ತಿ;

ಇದೇ ವ್ಯಕ್ತಿ ಸುಮಾರು ನಾಲ್ಕು ತಿಂಗಳ ಹಿಂದೆ ವಿದ್ಯುತ್‌ ಬಿಲ್‌ ಪಾವತಿಸಲು 6 ತಿಂಗಳ ಕಾಲಾವಕಾಶ ವಿರುತ್ತದೆ. ಅಲ್ಲಿಯ ತನಕ ಬಿಲ್‌ ಕಟ್ಟದಿದ್ದರೆ, ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲು ಕೆಇಬಿ ಅಧಿಕಾರಿಗಳಿಗೆ ಅಧಿಕಾರವಿರುವುದಿಲ್ಲ ಎಂಬ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಈತ ಪ್ರಚಾರ ಮಾಡಿದ್ದ. ಇತನ ನಡವಳಿಕೆ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಎಚ್ಚರಿಸಿದ್ದರೂ ಈತ ಅದೇ ತಪ್ಪನ್ನು ಪುನರಾರ್ವತನೆ ಮಾಡಿರುತ್ತಾನೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News