ಬೆಂಗಳೂರು: ಅನಂತಪುರದ ಯಲ್ದೂರು ಪೊಲೀಸರಿಂದ ಅಟ್ಟಿಕಾ ಬಾಬು ಅರೆಸ್ಟ್ ಪ್ರಕರಣಕ್ಕೆ ಖುದ್ದು ಬೊಮ್ಮನಹಳ್ಳಿ ಬಾಬು ಸ್ಪಷ್ಟನೆ ಕೊಟ್ಟಿದ್ದಾರೆ.ನನಗೆ ಎರಡು ಮಕ್ಕಳು,ಅಣ್ಣನ ಮಗನನ್ನು ಸಾಕಿಕೊಂಡಿದ್ದೆ‌.ಈ ಅಣ್ಣನ ಮಗನಿಂದಾಗಿ ನಾನು ಪೊಲೀಸ್ ಠಾಣೆ ಮೆಟ್ಟಿಲೇರುವಂತಾಯ್ತು ಎಂದು ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಸೆಕ್ಸ್ ವೇಳೆ ನಿದ್ದೆ ಬರುತ್ತಾ? ಈ ಅಪರೂಪದ ಕಾಯಿಲೆ ನಿಮಗೂ ಇದೆಯಾ ತಿಳಿದುಕೊಳ್ಳಿ


ಮೂವರು ಮಕ್ಕಳನ್ನು ಸಾಕಿ ಅಣ್ಣನ ಮಗನನ್ನು ನಾನು ಎಂಬಿಬಿಎಸ್ ಓದಿಸಿದ್ದೆ. ಯಲ್ದೂರಿನ ಮೇಯರ್ ಜೊತೆಗೆ ಮಗಳಿಗೆ ಅಣ್ಣನ ಮಗನನ್ನ ಕೋಟಿ ಕೋಟಿ ಖರ್ಚುಮಾಡಿ ಮದುವೆ ಮಾಡಿಸಿದ್ದೆ.ಅವರ ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಅಣ್ಣನ ಮಗನ ಪತ್ನಿ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು.


ಇದನ್ನೂ ಓದಿ : Diabetes Control Tips: ಮಧುಮೇಹವನ್ನು ನಿರ್ವಹಿಸಲು ಇಲ್ಲಿವೆ 5 ಸೂಪರ್‌ ಸಲಹೆಗಳು


ದೂರಿನಲ್ಲಿ ನನ್ನ ಹಾಗೂ ನನ್ನ ಪತ್ನಿ,ಮಕ್ಕಳ‌ ಹೆಸರನ್ನು ಉಲ್ಲೇಖಿಸಿದ್ದರು. ಹಾಗಾಗಿ ಆಂಧ್ರದಿಂದ ಪೊಲೀಸರು ಬಂದು ಕಾನೂನು ರೀತಿ ನನ್ನ ಕರೆದುಕೊಂಡು ಹೋಗಿದ್ದರು. ಕಾನೂನಿನ ಅನ್ವಯ ನಾನು ನನ್ನ ಹೇಳಿಕೆ ದಾಖಲಿಸಿ ಬಂದಿದ್ದೇನೆ. ನನಗೆ ಎರಡನೇ ಮದುವೆ ಆಗಿಲ್ಲ, ಜೊತೆಗೆ ನಾನು ಯಾವುದೆ ಕದ್ದ ಆಭರಣವನ್ನ ಅಡ ಇಟ್ಟುಕೊಂಡಿಲ್ಲ. ನಾನು ಮತ್ತು ನನ್ನ ಕಂಪನಿ ಕ್ಲೀನ್ ಹ್ಯಾಂಡ್ ಎಂದು ಸುದ್ದಿಗೋಷ್ಟಿಯಲ್ಲಿ ಬಾಬು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.