ಕೊಪ್ಪಳ: ರೈತ ಕುಟುಂಬದಿಂದ ಬಂದಂತಹ ತಾವು ರೈತರಿಗಾಗಿ (Farmers) ಹೋರಾಟ ಮಾಡಿರುವ ತಮಗೆ ರೈತರ ಕಷ್ಟನಷ್ಟಗಳ ಅರಿವಿದೆ. ರೈತರಿಗಾಗಿ ತಾವು ಜೈಲಿಗೂ ಸಹ ಹೋಗಿಬಂದಿದ್ದು, ಇದನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಚೆನ್ನಾಗಿ ಅರಿತುಕೊಳ್ಳಬೇಕೆಂದು ಕೃಷಿ ಸಚಿವರಾಗಿರುವ ಬಿ‌.ಸಿ. ಪಾಟೀಲ್ (BC Patil) ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಉಸ್ತುವಾರಿ ಜಿಲ್ಲೆ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್, ಭೂಸುಧಾರಣೆ ಕಾಯಿದೆ ತಿದ್ದುಪಡಿಯಿಂದ ಯಾರಿಗೂ ನಷ್ಟವಾಗಿಲ್ಲ. ಮೆಡಿಕಲ್ ಓದಿದವರು ಸರ್ಕಾರಿ ನೌಕರಿ ಸಿಗದಿದ್ದಾಗ ಆಸ್ಪತ್ರೆ ಕ್ಲಿನಿಕ್ ತೆರೆಯಲು ಅವಕಾಶವಿದೆ. ಅದರಂತೆ ಕೃಷಿಕರ ಮಕ್ಕಳಲ್ಲದವರು ಕೃಷಿಪದವಿ ಪಡೆದು ಭೂಮಿ ಖರೀದಿಸಿ ಕೃಷಿ ಮಾಡಲು ಕಾಯಿದೆ ಅನುಕೂಲ ಕಲ್ಪಿಸಿದೆ. ಕಾಯಿದೆ ತಿದ್ದುಪಡಿಯಿಂದ ಯಾರಾದರೂ ಸಹ ಕೃಷಿಕರಾಗಬಹುದು. ಕೃಷಿಯತ್ತ ಆಕರ್ಷಣೆ ಹೆಚ್ಚಾಗಿ ಕೃಷಿಕ್ಷೇತ್ರ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.


ದಕ್ಷಿಣ ಭಾರತದ ಮೊದಲ ಕಿಸಾನ್ ರೈಲು, ಆಂಧ್ರ ಪ್ರದೇಶದಿಂದ ನೇರವಾಗಿ ದೆಹಲಿ ತಲುಪಲಿರುವ ಹಣ್ಣು-ತರಕಾರಿಗಳು


COVID-19 ಕಾರಣ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ನಿಯಮದಂತೆ, ರಾಜ್ಯದಲ್ಲಿ ಕೃಷಿ ಪದವಿಯ ದಾಖಲಾತಿಗೆ  ಪರೀಕ್ಷೆಯ ಬದಲಾಗಿ ಸಿಇಟಿ ರ್‍ಯಾಂಕಿಂಗ್ ಆಧಾರದ ಮೇಲೆ ಕೃಷಿಕರ ಮಕ್ಕಳು ಹಾಗೂ ಕೃಷಿ ಕಾರ್ಮಿಕರ ಕೋಟಾದಡಿ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚಲಾಗುತ್ತಿದೆ. COVID-19 ಪರಿಸ್ಥಿತಿಯಲ್ಲಿ ಸರ್ಕಾರವು ರೈತರ ಆರೋಗ್ಯ ಹಾಗೂ ಹಿತರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದ್ದು, ಸಾವಿರಾರು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಸ್ವತಃ ಹಾಜರಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸುವುದು ಕಷ್ಟ ಸಾಧ್ಯ. ಆದ್ದರಿಂದ  ಕೃಷಿ ಪದವಿಯ ದಾಖಲಾತಿಗೆ ನಡೆಸಲಾಗುವ ಪ್ರಾಯೋಗಿಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದಿದ್ದಾರೆ.


ಇ-ಚೌಪಾಲ್ ಯೋಜನೆ ವಿಸ್ತರಣೆ: ಆಧುನಿಕ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮನೆಯಲ್ಲಿಯೇ ಸಿಗಲಿದೆ ಮಾಹಿತಿ


ಕೃಷಿಕರ ಕೋಟಾದ ಅಡಿಯಲ್ಲಿ ಶೇಕಡಾ 40ರಷ್ಟು ಸೀಟುಗಳು ಕೃಷಿಕರ ಮಕ್ಕಳಿಗೇ ಮೀಸಲಾಗಿದೆ. ಕೃಷಿಕರ ಮಕ್ಕಳಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಖಾತ್ರಿಪಡಿಸಿದರು.