ಬೆಂಗಳೂರು: ಒಂದು ವೇಳೆ ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

-ಕೇಂದ್ರ ಸರ್ಕಾರ ರೈತರ ಪ್ರತಿಭಟನೆ ದೀರ್ಘಕಾಲ ನಡೆಯುತ್ತಿದೆ ಎಂದರೆ ಅದರ ಗಂಭೀರತೆಯನ್ನು ಅರಿತುಕೊಳ್ಳಬೇಕು. ದಲ್ಲಾಳಿಗಳ ಹೋರಾಟ, ನಕಲಿ ರೈತರ ಹೋರಾಟ,ದೇಶದ್ರೋಹಿಗಳ ಹೋರಾಟ ಎಂದು ಸರ್ಕಾರ ಸುಳ್ಳು ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.


ಇದನ್ನೂ ಓದಿ: Farmers Protest: ಈ 3 ರಾಜ್ಯಗಳನ್ನು ಹೊರತುಪಡಿಸಿ ಇಂದು ದೇಶಾದ್ಯಂತ ಹೆದ್ದಾರಿ ತಡೆ


-ರೈತರ ಹೋರಾಟ ನಕಲಿಯಾಗಿದ್ದರೆ ಪ್ರಧಾನಿಯವರು ಮಾತುಕತೆಗೆ ಬನ್ನಿ ಎಂದು ಕರೆಯುತ್ತಿರುವುದು ಯಾರನ್ನು.‌?ಅನ್ನದಾತನನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸಿದ ಸರ್ಕಾರ ರೈತ ಪರವಾಗಿರಲು ಎಂದೂ ಸಾಧ್ಯವಿಲ್ಲ.ಕೇಂದ್ರದ ರೈತ ವಿರೋಧಿ ಧೋರಣೆಯಿಂದ ಇಂದು ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುತ್ತಿದೆ. ಮೋದಿಯವರು ಕಾರ್ಪೋರೆಟ್ ಕಂಪೆನಿಗಳ ದಲ್ಲಾಳಿಯಂತೆ ವರ್ತಿಸುವುದು ಬಿಟ್ಟು ಜನನಾಯಕನಂತೆ ವರ್ತಿಸಲಿ ಎಂದು ದಿನೇಶ್ ಗುಂಡುರಾವ್ (Dinesh Gundu Rao) ತಿಳಿ ಹೇಳಿದರು.


ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಗೆ ಶರದ್ ಪವಾರ್ ನೀಡಿದ ಆ ಸಲಹೆ ಏನು ಗೊತ್ತೇ?


-ರಾಷ್ಟ್ರಕವಿ ಕುವೆಂಪು ರೈತನನ್ನು ಉಳುವ ಯೋಗಿಗೆ ಹೋಲಿಸಿದ್ದರು.ಒಂದು ವೇಳೆ ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು. ರೈತನನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರ, ಕೇಡುಗಾಲಕ್ಕೆ ಅತಿಯಾದ ಬುದ್ದಿ ಎಂಬಂತೆ ವರ್ತಿಸುತ್ತಿದೆ. ಈ ಸರ್ಕಾರವನ್ನು ರೈತರೆ ಇತಿಹಾಸದ ಪುಟ ಸೇರಿಸಲಿದ್ದಾರೆ ಎಂದರು.


-ಅಹಂಕಾರ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ.ಆದರೆ ಪ್ರಧಾನಿ ಮೋದಿಯವರ ಅಹಂಕಾರ ದೇಶವನ್ನೇ ನಾಶ ಮಾಡುತ್ತಿದೆ.ಅದರಲ್ಲೂ ರೈತರ ಎದುರು ಪ್ರಧಾನಿಯವರ ಅಹಂಕಾರ ಪ್ರದರ್ಶನ ಒಳ್ಳೆಯದಲ್ಲ.ಮೋದಿಯವರು ಅಹಂಕಾರ ಬದಿಗಿಟ್ಟು ರೈತರ ಪಾಲಿಗೆ ಜೀವ ವಿರೋಧಿಯಾದ ಕಾನೂನುಗಳನ್ನು ರದ್ದು ಮಾಡಲಿ.ಕಾರ್ಪೋರೆಟ್ ಕಂಪೆನಿಗಳ ಜೀತದಾಳು ತಾವಲ್ಲ ಎಂದು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.