Farmers Protest: ಈ 3 ರಾಜ್ಯಗಳನ್ನು ಹೊರತುಪಡಿಸಿ ಇಂದು ದೇಶಾದ್ಯಂತ ಹೆದ್ದಾರಿ ತಡೆ

ಹೊಸ ಕೃಷಿ ಕಾನೂನುಗಳ ವಿರುದ್ಧ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು 3 ಗಂಟೆಗಳ ರಾಷ್ಟ್ರವ್ಯಾಪಿ ಚಕ್ಕಾ  ಜಾಮ್‌ಗೆ ಕರೆ ನೀಡಿದ್ದಾರೆ. ಚಕ್ಕಾ ಜಾಮ್‌ನಲ್ಲಿ ಹಿಂಸಾಚಾರದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸರು ಭಾರೀ ಬಿಗಿ ಭದ್ರತೆ ಕೈಗೊಂಡಿದ್ದಾರೆ.

Written by - Yashaswini V | Last Updated : Feb 6, 2021, 09:50 AM IST
  • ಉತ್ತರಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ಯಾವುದೇ ಜಾಮ್ ಇರುವುದಿಲ್ಲ
  • ಚಕ್ಕಾ ಜಾಮ್ ಹಿನ್ನಲೆಯಲ್ಲಿ ಯುನೈಟೆಡ್ ಫಾರ್ಮರ್ಸ್ ಫ್ರಂಟ್ ಮಾರ್ಗಸೂಚಿಗಳನ್ನು ಹೊರಡಿಸಿತು
  • ಭದ್ರತೆಯನ್ನು ಬಿಗಿಗೊಳಿಸಲು ಗೃಹ ಸಚಿವರು ಸೂಚನೆ ನೀಡಿದರು
Farmers Protest: ಈ 3 ರಾಜ್ಯಗಳನ್ನು ಹೊರತುಪಡಿಸಿ ಇಂದು ದೇಶಾದ್ಯಂತ ಹೆದ್ದಾರಿ ತಡೆ title=
Farmers Protest

ನವದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ಇಂದು ರೈತರು ರಾಷ್ಟ್ರವ್ಯಾಪಿ ಚಕ್ಕಾ  ಜಾಮ್‌ಗೆ ಕರೆ ನೀಡಿದ್ದಾರೆ. ಈ ಚಕ್ಕಾ  ಜಾಮ್‌ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ಇರುತ್ತದೆ. ಚಕ್ಕಾ ಜಾಮ್‌ನಲ್ಲಿ ಹಿಂಸಾಚಾರದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಮತ್ತು ಇತರ ರಾಜ್ಯಗಳ ಪೊಲೀಸರು ಭಾರೀ ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ದೆಹಲಿಯಲ್ಲಿ ಹೆದ್ದಾರಿ ತಡೆ ಇರುವುದಿಲ್ಲ :
ಇಂದು ನಡೆಯಲಿರುವ ಚಕ್ಕಾ ಜಾಮ್ ಉತ್ತರ ಪ್ರದೇಶ ಮತ್ತು ಉತ್ತರಾಖಂಡವನ್ನು ಹೊರತುಪಡಿಸಿ ಇಡೀ ದೇಶದಲ್ಲಿ ಇರಲಿದೆ ಎಂದು ಬಲ್ಬೀರ್ ಸಿಂಗ್ ರಾಜೇವಾಲ್ ಮತ್ತು ಯುನೈಟೆಡ್ ಕಿಸಾನ್ ಮೋರ್ಚಾದ ರಾಕೇಶ್ ಟಿಕೈಟ್ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶ -ಉತ್ತರಾಖಂಡದಲ್ಲಿ ಚಕ್ಕಾ ಜಾಮ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲಿನ ರೈತರು ಜಿಲ್ಲಾಧಿಕಾರಿಗಳಿಗೆ ಜ್ಞಾಪಕ ಪತ್ರ ಸಲ್ಲಿಸುತ್ತಾರೆ. ಇದಲ್ಲದೆ ದೆಹಲಿ ಎನ್‌ಸಿಆರ್ (Delhi NCR) ಅನ್ನು ಚಕ್ಕಾ ಜಾಮ್‌ನ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ರೈತ ಸಂಘಗಳ 'ಚಕ್ಕಾ ಜಾಮ್‌'ಗೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲ ನೀಡಿದೆ.

ಇದನ್ನೂ ಓದಿ - Farmers Protest: ತಂಡದ ಮೀಟಿಂಗ್ ನಲ್ಲಿ ರೈತರ ಹೋರಾಟದ ಬಗ್ಗೆ ಚರ್ಚಿಸಲಾಗಿದೆ ಎಂದ ಕೊಹ್ಲಿ

ಯುನೈಟೆಡ್ ಫಾರ್ಮರ್ಸ್ ಫ್ರಂಟ್ ಮಾರ್ಗಸೂಚಿಗಗಳು :
ಈ ಚಕ್ಕಾ ಜಾಮ್ (Chakka Jam) ಅನ್ನು ಯಶಸ್ವಿಗೊಳಿಸಲು, ಯುನೈಟೆಡ್ ಕಿಸಾನ್ ಮೋರ್ಚಾದಿಂದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಇದರಲ್ಲಿ 
1. ದೇಶಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ಜಾಮ್ ಆಗುತ್ತವೆ.
2. ತುರ್ತು ಮತ್ತು ಅಗತ್ಯ ಸೇವೆಗಳಾದ ಆಂಬ್ಯುಲೆನ್ಸ್, ಶಾಲಾ ಬಸ್ ಇತ್ಯಾದಿಗಳನ್ನು ನಿಲ್ಲಿಸಲಾಗುವುದಿಲ್ಲ.
3. ಚಕ್ಕಾ ಜಾಮ್ ಸಂಪೂರ್ಣವಾಗಿ ಶಾಂತಿಯುತ ಮತ್ತು ಅಹಿಂಸಾತ್ಮಕವಾಗಿ ನಡೆಯಲಿದೆ. ಈ ಸಮಯದಲ್ಲಿ ಪ್ರತಿಭಟನಾಕಾರರು ಯಾವುದೇ ಅಧಿಕಾರಿಗಳು, ನೌಕರರು ಅಥವಾ ಸಾಮಾನ್ಯ ನಾಗರಿಕರೊಂದಿಗೆ ಮುಖಾಮುಖಿಯಾಗುವುದಿಲ್ಲ.
4. ಎಲ್ಲಾ ಪ್ರತಿಭಟನಾ ತಾಣಗಳು ಈಗಾಗಲೇ ಚಕ್ಕಾ ಜಾಮ್ ಮೋಡ್‌ನಲ್ಲಿರುವುದರಿಂದ ದೆಹಲಿ ಎನ್‌ಸಿಆರ್‌ನಲ್ಲಿ ಚಕ್ಕಾ ಜಾಮ್ ಇರುವುದಿಲ್ಲ. ದೆಹಲಿಗೆ ಪ್ರವೇಶಿಸಲು ಎಲ್ಲಾ ರಸ್ತೆಗಳು ತೆರೆದಿರುತ್ತವೆ.
5. ಚಕ್ಕಾ ಜಾಮ್_ ಕಾರ್ಯಕ್ರಮವು ಸಂಜೆ 3 ಗಂಟೆಗೆ ಹಾರ್ನ್ ಮೊಳಗಿಸುವ ಮೂಲಕ ರೈತರ ಐಕ್ಯತೆಯನ್ನು ಸೂಚಿಸುವ ಮುಖಾಂತರ ಕೊನೆಗೊಳ್ಳಲಿದೆ.

ದೆಹಲಿ ಪೊಲೀಸರು ಸಂಪೂರ್ಣ ಗಮನ ಹರಿಸಿದ್ದಾರೆ:
ದೆಹಲಿಯನ್ನು ಚಕ್ಕಾ ಜಾಮ್  (Farmers Protest) ನಿಂದ ಹೊರಗಿಡುವಂತೆ ರೈತರು ಘೋಷಿಸಿರಬಹುದು, ಆದರೆ ಜನವರಿ 26 ರ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಮಧ್ಯೆ ದೆಹಲಿ ಮೆಟ್ರೋಗೆ ಪತ್ರ ಬರೆದಿರುವ ದೆಹಲಿ ಪೊಲೀಸರು ಅಗತ್ಯವಿದ್ದರೆ 12 ಮೆಟ್ರೋ ನಿಲ್ದಾಣಗಳನ್ನು ಮುಚ್ಚುವಂತೆ ಕೇಳಬಹುದು, ಇದಕ್ಕಾಗಿ ಸಿದ್ಧರಾಗಿರಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ - Rahul Gandhi: 'ಕೃಷಿ ಕಾಯ್ದೆ ಹಿಂಪಡೆಯದೇ ರೈತರು ಹಿಂದೆ ಸರಿಯುವುದಿಲ್ಲ, ಸರ್ಕಾರವೇ ಹಿಮ್ಮಡಿ ಇಡಬೇಕು'

ಈ 12 ಮೆಟ್ರೋ ನಿಲ್ದಾಣಗಳನ್ನು ಇಂದು ಮುಚ್ಚಬಹುದು :
ರಾಜೀವ್ ಚೌಕ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಉದ್ಯೋಗ್ ಭವನ, ಲೋಕ ಕಲ್ಯಾಣ್ ಮಾರ್ಗ, ಜನಪಥ್, ಮಂಡಿ ಹೌಸ್, ಆರ್.ಕೆ.ಆಶ್ರಮ, ಸುಪ್ರೀಂ ಕೋರ್ಟ್, ಖಾನ್ ಮಾರ್ಕೆಟ್ ಮತ್ತು ಶಿವಾಜಿ ಕ್ರೀಡಾಂಗಣ (ತುರ್ತು ಪರಿಸ್ಥಿತಿಯಲ್ಲಿ ಮುಚ್ಚಬೇಕಾದ ಮೆಟ್ರೋ ನಿಲ್ದಾಣಗಳ ಹೆಸರುಗಳು) ಎಂದು ಡಿಸಿಪಿ ತಿಳಿಸಿದೆ. ಈ ಎಲ್ಲಾ ಮೆಟ್ರೋ ನಿಲ್ದಾಣಗಳು ನವದೆಹಲಿ ಪ್ರದೇಶದಲ್ಲಿ ಬರುತ್ತವೆ.

ಭದ್ರತೆಯನ್ನು ಬಿಗಿಗೊಳಿಸಲು ಗೃಹ ಸಚಿವರ ಸೂಚನೆ :
ಪಾರ್ಲಿಮೆಂಟ್ ಹೌಸ್, ಇಂಡಿಯಾ ಗೇಟ್ ಮುಂತಾದ ಸ್ಥಳಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಫೆಬ್ರವರಿ 4 ರಂದು ಗೃಹ ಸಚಿವರು ದೆಹಲಿ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಜನವರಿ 26 ರಂದು ನಡೆದ ಹಿಂಸಾಚಾರದ ಬಗ್ಗೆ ಚರ್ಚಿಸಲಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ದೆಹಲಿ ಪೊಲೀಸರಿಗೆ ಉತ್ತರ ಪ್ರದೇಶ ಮತ್ತು ಹರಿಯಾಣ ಪೊಲೀಸರೊಂದಿಗೆ ಸಮನ್ವಯ ಸಾಧಿಸಲು ತಿಳಿಸಲಾಗಿದೆ.

ಇದನ್ನೂ ಓದಿ - "ಶಶಿ ತರೂರ್ ದೇಶ ದ್ರೋಹಿಯಾದರೆ ನಾವೆಲ್ಲರೂ ಕೂಡ ದೇಶದ್ರೋಹಿಗಳೇ"

ಹರಿಯಾಣದಲ್ಲಿ ಇಂಟರ್ನೆಟ್ ನಿಷೇಧವನ್ನು ವಿಸ್ತರಿಸಲಾಗಿದೆ :
ಏತನ್ಮಧ್ಯೆ ರೈತರ ಆಂದೋಲನವನ್ನು ಗಮನದಲ್ಲಿಟ್ಟುಕೊಂಡು ಹರಿಯಾಣ ಸರ್ಕಾರ ಸೋನೆಪತ್ ಮತ್ತು ಜಜ್ಜಾರ್‌ನಲ್ಲಿ ಇಂಟರ್ನೆಟ್ ನಿಷೇಧದ ಸಮಯ ಮಿತಿಯನ್ನು ಮತ್ತೊಮ್ಮೆ ವಿಸ್ತರಿಸಿದೆ. ಫೆಬ್ರವರಿ 6 ರಂದು ಸಂಜೆ 5 ಗಂಟೆಯವರೆಗೆ ಅಂತರ್ಜಾಲವನ್ನು ಸ್ಥಗಿತಗೊಳಿಸಲು ಸರ್ಕಾರ ಈಗ ನಿರ್ಧರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News