ಒತ್ತುವರಿದಾರರಿಗೆ ಬಿಸಿ ಮುಟ್ಟಿಸುತ್ತಿರುವ ಬಿಬಿಎಂಪಿ, ಅನಧಿಕೃತವಾಗಿ ನಿರ್ಮಾಣವಾಗಿದ್ದ ಪ್ರಾರ್ಥನಾ ಮಂದಿರ ನೆಲಸಮ
ರಚ್ಚೆ ಹಿಡಿದು ಸುರಿಯುತ್ತಿದ್ದ ಮಳೆ ಇದೀಗ ಸ್ವಲ್ಪ ಮಟ್ಟಿನ ವಿರಾಮ ನೀಡಿದೆ. ಇದೀಗ ಬಿಬಿಎಂಪಿ ಉತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದವರ ಮೇಲೆ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ಬೆಂಗಳೂರು : ಒತ್ತುವರಿದಾರರಿಗೆ ಬಿಬಿಎಂಪಿ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ.ರಾಜ್ಯ ರಾಜಧಾನಿಯಲ್ಲಿ ಜೆಸಿಬಿ ಘರ್ಜನೆ ಕೇಳಿ ಬರುತ್ತಿದೆ. ಅನಧಿಕೃತ ಕಟ್ಟಡಗಳ ಮೇಲೆ ಜೆಸಿಬಿ ಕಾರ್ಯಾಚರಣೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿದ್ದ ಕ್ರಿಶ್ಚಿಯನ್ ಪ್ರಾರ್ಥನಾಮಂದಿರವನ್ನು ನೆಲ ಸಮ ಮಾಡಲಾಗಿದೆ.
ರಚ್ಚೆ ಹಿಡಿದು ಸುರಿಯುತ್ತಿದ್ದ ಮಳೆ ಇದೀಗ ಸ್ವಲ್ಪ ಮಟ್ಟಿನ ವಿರಾಮ ನೀಡಿದೆ. ಇದೀಗ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದವರ ಮೇಲೆ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಇದರ ಮೊದಲ ಹಂತವಾಗಿ ಕೆರೆ ಜಾಗವನ್ನ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಪ್ರಾರ್ಥನಾಮಂದಿರವನ್ನು ನೆಲಸಮಗೊಳಿಸಲಾಗಿದೆ.
ಇದನ್ನೂ ಓದಿ : Mysuru Dasara : ನಾಡಹಬ್ಬ ದಸರಾಗೆ ಚಾಮರಾಜನಗರ ಜಟ್ಟಿ ತಾಲೀಮು; ಮುಷ್ಠಿ ಕಾಳಗಕ್ಕೆ ರಕ್ತ ಹರಿಸಲು ರೆಡಿ
ಬೆಂಗಳೂರು ದಕ್ಷಿಣ ವಾರ್ಡ್ 192 ಬೆರಟೇನ ಅಗ್ರಹಾರದ ಲವ ಕುಶ ನಗರ ಮುಖ್ಯರಸ್ತೆಯಲ್ಲಿದ್ದ ಕೆರೆಯನ್ನು ಒತ್ತುವರಿ ಮಾಡಿಕೊಂಡು ಪ್ರಾರ್ಥನಾ ಮಂದಿರ ನಿರ್ಮಿಸಲಾಗಿತ್ತು. ಬಿಬಿಎಂಪಿ ಅಧೀನದಲ್ಲಿದ್ದ ಕೆರೆ ಜಾಗವನ್ನ ಒತ್ತುವರಿ ಮಾಡಿಕೊಂಡು ಪ್ರಾರ್ಥನಾಮಂದಿರ ನಿರ್ಮಿಸಲಾಗಿತ್ತು. ಚರ್ಚ್ ಫಾದರ್ ಏಸುಮಣಿ ಎಂಬವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಾಗವನ್ನ ಒತ್ತುವರಿ ಮಾಡಿಕೊಂಡುಈ ಪ್ರಾರ್ಥನಾ ಮಂದಿರ ನಿರ್ಮಿಸಿದ್ದರು.
ಸುಮಾರು 11.18 ಎಕರೆಗಳಷ್ಟು ವಿಸ್ತೀರ್ಣದಲ್ಲಿದ್ದ ಕೆರೆಯ ಒಂದು ಭಾಗವನ್ನು ಅತಿಕ್ರಮಣಮಾಡಿಕೊಳ್ಳಲಾಗಿತ್ತು. ನಂತರ ಅತಿಕ್ರಮಣ ಮಾಡಿಕೊಂಡ ಜಾಗದಲ್ಲಿ The Gate of Salvation Church ಎಂಬ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಗಿತ್ತು. ಈ ಸಂಬಂಧ ಸೆಪ್ಟೆಂಬರ್ 8 ರಂದು ಪಾಲಿಕೆ ಎನ್. ಆರ್ ರಮೇಶ್ ಮುಖ್ಯ ಆಯುಕ್ತರು, ಬೊಮ್ಮನಹಳ್ಳಿಯ ಜಂಟಿ ಆಯುಕ್ತರಿಗೆ ದಾಖಲೆ ಸಹಿತ ದೂರು ನೀಡಿದ್ದರು. ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಅನಧಿಕೃತ ಪ್ರಾರ್ಥನಾ ಮಂದಿರವನ್ನು ತೆರವುಗೊಳಿಸುವಂತೆ ಮನವಿಮಾಡಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಬಿಬಿಎಂಪಿ ಅಧಿಕಾರಿಗಳು ಇದೀಗ ಕೆರೆಯ ಒತ್ತುವರಿ ಭಾಗವನ್ನು ತೆರವುಗೊಳಿಸಿದ್ದಾರೆ.
ಇದನ್ನೂ ಓದಿ : Lok Sabha Elections 2024: ತೃತೀಯ ರಂಗ ಕೇಂದ್ರ ಸರ್ಕಾರ ರಚನೆಗೆ ಜೆಡಿಎಸ್ ತಂತ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.