ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್, ಐಜಿಪಿ ಲೋಕಾಯುಕ್ತ ಪ್ರನೋವ್ ಮೊಹಂತಿ & ಎಡಿಜಿಪಿ ಎ.ಎಂ. ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಿಸಿದ ಸಿಬಿಐ
ನವದೆಹಲಿ: ಜುಲೈ 7, 2016 ರಲ್ಲಿ ಮಡಿಕೇರಿಯ ಲಾಡ್ಜ್ನ ರೂಂ ನ. 315 ರಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿ ಎಂ.ಕೆ. ಗಣಪತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಪ್ರಕರಣದ ಆರೋಪಿ ನಂ. 1 ಎಂದು ಸಿಬಿಐ ಎಫ್ಐಆರ್ ದಾಖಲಿಸಿದೆ.
ಇದೇ ವೇಳೆ ಬೆಂಗಳೂರು ಲೋಕಾಯುಕ್ತ ಐಜಿಪಿ ಪ್ರಣವ್ ಮೊಹಂತಿ ಮತ್ತು ಸ್ಟೇಟ್ ಇಂಟಲಿಜೆನ್ಸ್ ಎಡಿಜಿಪಿ ಎ.ಎಂ.ಪ್ರಸಾದ್ ರನ್ನು ಪ್ರಕರಣ ನಂ.2 & ನಂ. 3ನೇ ಆರೋಪಿಗಳೆಂದು ಸಿಬಿಐ ಎಫ್ಐಆರ್ ದಾಖಲಿಸಿದೆ.
ಗಣಪತಿ ಆತ್ಮಹತ್ಯೆ ತನಿಖೆ ನಡೆಸಿದ್ದ ಸಿಐಡಿ ಕೆ.ಜೆ. ಜಾರ್ಜ್, ಪ್ರಣಬ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಗೆ ನಿರ್ದೋಷಿ ಎಂದು ಘೋಷಿಸಿ ಕ್ಲೀನ್ ಚಿಟ್ ನೀಡಿತ್ತು. ಅದರ ನಂತರ ಸುಪ್ರೀಂಕೋರ್ಟ್ ಮೊರೆಹೋಗಿದ್ದ ಗಣಪತಿ ಅವರ ತಂದೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದರು. ಅದರಂತೆ ಸೆಪ್ಟೆಂಬರ್ 05, 2017ರಲ್ಲಿ ಗಣಪತಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಅಕ್ಟೋಬರ್ 26ರ ಗುರುವಾರ ಪ್ರಕರಣ ಸಂಬಂಧ ಸಚಿವ ಕೆ.ಜೆ ಜಾರ್ಜ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳ ಮೇಲೆ ಸಿಬಿಐನಿಂದ ಎಫ್ಐಆರ್ ದಾಖಲಾಗಿದೆ.