Indira Canteen: ಇಂದಿರಾ ಕ್ಯಾಂಟೀನ್ ಹೊಸ ಮೆನು ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
Indira Canteen new Menu: ‘ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್‍ಗಳು ಈಗ ಮತ್ತಷ್ಟು ಶುಚಿ-ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ. ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ-ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಬಡವರಿಗೆ ಕಡಿಮೆ ಖರ್ಚಿನಲ್ಲಿ ಆಹಾರ ಪೂರೈಸುವ ಸಿಎಂ ಸಿದ್ದರಾಮಯ್ಯರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಹಸಿದವರ ಹೊಟ್ಟೆ ತುಂಬಿಸುತ್ತಿದೆ. ಲಕ್ಷಾಂತರ ಜನರ ಹೊಟ್ಟೆ ತುಂಬಿಸುವ ಈ ಯೋಜನೆ ಬಡವರ ಪಾಲಿಗೆ ಅನ್ನಪೂರ್ಣೆ ಎಂದು ಹೇಳಬಹದು. ಇದೀಗ ಮತ್ತಷ್ಟು ಶುಚಿ-ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಜನರ ಸೇವೆಗೆ ಇಂದಿರಾ ಕ್ಯಾಂಟೀನ್ ಸಜ್ಜಾಗಿದೆ.
ಹೌದು, ಯಾವುದೇ ಹೋಟೆಲ್ ಮೆನುವಿಗೂ ಕಡಿಮೆ ಇಲ್ಲವೆಂಬಂತೆ ಇಂದಿರಾ ಕ್ಯಾಂಟೀನ್ ಹೊಸ ಮೆನುವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ಈ ಹೊಸ ಮೆನುವಿನಲ್ಲಿ ರಾಜ್ಯದ ಎಲ್ಲಾ ಪ್ರದೇಶದ ಊಟ-ತಿಂಡಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಇಂದಿರಾ ಕ್ಯಾಂಟೀನ್ ಹೊಸ ಮೆನುವನ್ನು ಬಿಡುಗಡೆ ಮಾಡಿದ್ದಾರೆ. ‘ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್‍ಗಳು ಈಗ ಮತ್ತಷ್ಟು ಶುಚಿ-ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ. ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ-ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಸಿದವರ ಹೊಟ್ಟೆಗೆ ಅಕ್ಷಯಪಾತ್ರೆ ಇಂದಿರಾ ಕ್ಯಾಂಟೀನ್ನಲ್ಲಿ ಅಗ್ಗದ ದರದಲ್ಲಿ ದೇಹಕ್ಕೆ ಒಗ್ಗುವ ಊಟ-ಉಪಹಾರ ನೀಡಲಾಗುತ್ತಿದೆ.
Covid variant JN.1: ದೇಶದಲ್ಲಿ ಕೋವಿಡ್ ರೂಪಾಂತರಿ JN.1 ಉಲ್ಬಣ: ಕರ್ನಾಟಕದಲ್ಲಿ 1 ಸಾವು!
ಮಧ್ಯಾಹ್ನದ ಊಟಕ್ಕೆ ಪ್ಲೇಟ್ಗೆ 10 ರೂ. (ಮಧ್ಯಾಹ್ನ 1ರಿಂದ 3)
ಅನ್ನ-ತರಕಾರಿ ಸಂಬಾರು, ಖೀರು
ಅನ್ನ-ತರಕಾರಿ ಸಾಂಬಾರು, ರಾಯಿತಾ
ಅನ್ನ-ತರಕಾರಿ ಸಾಂಬಾರು, ಮೊಸರನ್ನ
ರಾಗಿ ಮುದ್ದೆ-ಸೊಪ್ಪಿನ ಸಾರು, ಖೀರು
ಚಪಾತಿ-ಸಾಗು, ಖೀರು
ರಾತ್ರಿ ಊಟಕ್ಕೆ ಪ್ಲೇಟ್ಗೆ 10 ರೂ. (ಸಂಜೆ 7:30 ರಿಂದ ರಾತ್ರಿ 9)
ಅನ್ನ-ತರಕಾರಿ ಸಾಂಬಾರು
ಅನ್ನ-ತರಕಾರಿ ಸಾಂಬಾರು, ರಾಯಿತಾ
ರಾಗಿ ಮುದ್ದೆ-ಸೊಪ್ಪಿನ ಸಾರು
ಚಪಾತಿ-ವೆಜ್ ಗ್ರೇವಿ ಇರುತ್ತದೆ.
ಸ್ಪೆಷಲ್
ಮಾವಿನಕಾಯಿ ಸೀಸಸ್ನಲ್ಲಿ ಮಾವಿನಕಾಯಿ ಚಿತ್ರಾನ್ನ ಲಭ್ಯವಿರಲಿದೆ.
ಇದನ್ನೂ ಓದಿ: Viral Video: ಊಟದಲ್ಲಿ ಪನೀರ್ ಇಲ್ಲದ ಕಾರಣ ಮದುವೆ ಮನೆಯಲ್ಲಿ ಹೊಡೆದಾಟ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.