ವಿಜಯನಗರ : ಎರಡು ವರ್ಷಗಳ ಹಿಂದೆ ಅಪ್ಪಳಿಸಿದ ಕರೋನಾ (Coronavirus)ಅದೆಷ್ಟೋ ಜನರ ಜೀವನದ  ದಿಕ್ಕನ್ನೇ  ಬದಲಾಯಿಸಿ ಬಿಟ್ಟಿತ್ತು. ಕರೋನ  ಕೊಟ್ಟ ಏಟಿಗೆ ಅದೆಷ್ಟೋ ಕುಟುಂಬ ಕಂಗಾಲಾಗಿ ಹೋಗಿತ್ತು.  ಕನಸಿನಲ್ಲಿಯೂ ಯೋಚಿಸಿರದ ಆರ್ಥಿಕ ಸಮಸ್ಯೆ  ಅನೇಕ ಸಂಸಾರವನ್ನು ಕಾಡಿತ್ತು. ಈ ಸಾಧಕಿ ನಂದಿನಿ ಸಂಸಾರದ್ದೂ ಇದೇ  ಕತೆ.   ಆದರೆ ನಂದಿನಿ ಕಷ್ಟ ಎಂದು ತಲೆ ಮೇಲೆ ಕೈ ಹೊತ್ತು ಕೂರಲಿಲ್ಲ. ಬಂದ  ಕಷ್ಟವನ್ನು ಮೆಟ್ಟಿ ನಿಲ್ಲುವ ನಿರ್ಧಾರಕ್ಕೆ ಬಂದರು (Lady auto driver). 


COMMERCIAL BREAK
SCROLL TO CONTINUE READING

ಆಟೋ ಚಾಲನೆಯ ನಿರ್ಧಾರಕ್ಕೆ ಬಂದ ನಂದಿನಿ : 


ನಂದಿನಿ ಹೊಸಪೇಟೆ ನಗರದ ಚಪ್ಪರದಳ್ಳಿ ನಿವಾಸಿ (Nandini lady auto driver). ಎಲ್ಲಾ ಮಹಿಳೆಯರಂತೆ ಇವರೂ ಕೂಡಾ  ಗಂಡ ದುಡಿದು ತಂದ ಹಣದಲ್ಲಿ ಸಂಸಾರ ಸಾಗಿಸುತ್ತಾ ಇದ್ದರು. ಆದರೆ ಎರಡು ವರ್ಷಗಳ ಹಿಂದೆ ಅಪ್ಪಳಿಸಿದ ಕರೋನಾ  (Coronavirus) ಅವರ  ಜೀವನದ  ಮೇಲೆ ಬಲವಾದ ಪೆಟ್ಟನ್ನೇ ಕೊಟ್ಟಿತ್ತು. ಕೇವಲ ಗಂಡನ ದುಡಿಮೆಯಿಂದ ಇನ್ನು ಜೀವನ ಸಾಗಿಸುವುದು ಕಷ್ಟ ಎನ್ನುವುದನ್ನು ಅರಿಯಲು ನಂದಿನಿಗೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ಹೇಗಾದರೂ ಮಾಡಿ ಸಂಸಾರದ ನೌಕೆಯನ್ನು ದಡ  ಸೇರಿಸಲು ಪತಿಗೆ ಸಹಾಯ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದರು. ಈ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರವೇ ಆಟೋ ಚಾಲನೆ. 


ಇದನ್ನೂ ಓದಿ : ಉಕ್ರೇನ್ ಶವಾಗಾರದಲ್ಲಿ ನವೀನ್ ಮೃತ ದೇಹ, ಶೆಲ್ ದಾಳಿ ನಿಂತ ನಂತರ ಭಾರತಕ್ಕೆ ತರುವ ಕ್ರಮ: ಸಿಎಂ


ಸಹಾಯ ನೀಡಿದ ಸಚಿವ ಆನಂದ್ ಸಿಂಗ್ :


ತನ್ನ ಗಂಡನ ದುಡಿಮೆಯಿಂದ ಸಂಸಾರ ನಡೆಸೋದು ಕಷ್ಟ ಎಂದು ತಿಳಿದ ನಂದಿನಿ ಆಟೋ ಓಡಿಸುವ ನಿರ್ಧಾರಕ್ಕೆ ಬಂದರು.  ಆದ್ರೆ ಅದಕ್ಕೆ ಬೇಕಾದ ಹಣ ಎಲ್ಲಿಂದ ತರುವುದು ಎಂಬ  ಯೋಚನೆ ಕೂಡಾ ಅವರನ್ನು ಕಾಡಿತ್ತು. ಈ ಸಂದರ್ಭದಲ್ಲಿ  ನಂದಿನಿಯ ನಿರ್ಧಾರವನ್ನು ಬೆಂಬಲಿಸಿ ಅವರಿಗೆ ಸಹಾಯ ಮಾಡಿದ್ದು,  ಹೊಸಪೇಟೆಯ ವಿಜಯನಗರ ಕ್ಷೇತ್ರದ ಶಾಸಕ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (Anand Sing) .  ನಂತರ ನಂದಿನಿ ದುಡಿಮೆ ಆರಂಭವಾಯಿತು.


ಅವಮಾನಿಸಿದವರು ಬಹಳ  ಮಂದಿ : 


ಇನ್ನು ಮಹಿಳೆಯೊಬ್ಬಳು ಏನೋ ಹೊಸತು ಸಾಧಿಸುತ್ತಾಳೆ ಎಂದಾಗ ಅವಳನ್ನು ಕಂಡು ಮುಗು ಮುರಿಯುವವರೇ ಹೆಚ್ಚು. ನಂದಿನಿಗೆ ಕೂಡಾ ಆರಂಭದಲ್ಲಿ ಈ ಸಮಸ್ಯೆ ಎದುರಾಗಿತ್ತು. ಕಂಡ ಕಂಡವರು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡಿ ಅವಮಾನಿಸಿದ್ದು ಆಗಿದೆ. ಆದರೆ ಜನರ ಮಾತಿಗೆ ತಲೆಕೆಡಿಸಿಕೊಳ್ಳದ ನಂದಿನಿ ಇತ್ತ ಹೆಜ್ಜೆ ಹೊಂದೆ ತೆಗಿಯಲಿಲ್ಲ.  ಕಾಯಕವೇ ಕೈಲಾಸ ಎನ್ನುವಂತೆ ತಾನು ನಂಬಿದ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.  ಅವರೇ ಹೇಳುವ ಪ್ರಕಾರ 500 ರಿಂದ 600 ರೂಪಾಯಿಗಳವರೆಗೆ ದುಡಿಮೆ ಮಾಡ್ತಾರೆ. ಆರು ಜನ ಕುಟುಂಬಕ್ಕೆ ಇವರ ದುಡಿಮೆಯೂ ಇಂದು ಆಸರೆಯಾಗಿದೆ.


ಇದನ್ನೂ ಓದಿ : Kolar Crime News: ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಕಳ್ಳನಾದ ತಂದೆ..!


ಹೊಲಗದ್ದೆಗೆ ಕೂಲಿ ಕೆಲಸಕ್ಕೆ ಹೋಗುವ ತನ್ನ ಪತಿಗೆ ಕೈಜೋಡಿಸಿ, ತನ್ನಾಸೆಯಂತೆ ಆಟೋ ಓಡಿಸಿ ದುಡಿದು ಸಂಸಾರದ ಬಂಡಿ ಸಾಗಿಸುತ್ತಿರುವ ನಂದಿನಿ ಅದೆಷ್ಟೋ ಮಹಿಳೆಯರಿಗೆ ಮಾದರಿ. ಸಾಧಿಸುವ  ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಕೂಡಾ ನಂದಿನಿ ಸಾಕ್ಷಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ( Womes day) ಸಂದರ್ಭದಲ್ಲಿ ಸಾಧಕಿ ನಂದಿನಿ ಗೊಂದು ಸಲಾಂ . 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.