ಆತ್ಮಸಾಕ್ಷಿಯೇ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆಯಿದೆಯೇ: ಬಿಜೆಪಿ ಪ್ರಶ್ನೆ
ಅಖಂಡ ಮನೆಗೆ ಬೆಂಕಿ ಇಟ್ಟವರು ನನ್ನ ಸಹೋದರರು, ನನ್ನ ಮೈಯಲ್ಲಿ ಹರಿಯುವುದು ಅವರದೇ ರಕ್ತ ಎಂದು ನಿಮ್ಮ ಭ್ರಷ್ಟಾಧ್ಯಕ್ಷರು ಹೇಳಿದ್ದು ನೆನಪಿದೆಯೇ ಕಾಂಗ್ರೆಸ್? ಎಂದು ಬಿಜೆಪಿ ಪ್ರಶ್ನಿಸಿದೆ.
ಬೆಂಗಳೂರು: ಆತ್ಮಸಾಕ್ಷಿಯೇ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷ(Congress Party)ದಲ್ಲಿ ಸತ್ಯಕ್ಕೆ ಬೆಲೆಯಿದೆಯೇ? ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ. ಮಂಗಳವಾರ ಟ್ವೀಟ್ ಮಾಡುವ ಮೂಲಕ ದಲಿತ ವಿರೋಧಿ ಬಿಜೆಪಿ ಎಂದು ಹೇಳಿದ್ದ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ.
#ದಲಿತವಿರೋಧಿಬಿಜೆಪಿ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ‘ಬೆಂಗಳೂರಿನ ಹೃದಯಬಾಗದಲ್ಲಿ ಒಬ್ಬ ಜನಪ್ರತಿನಿಧಿಗೆ ರಕ್ಷಣೆ ನೀಡದ್ದು ಬಿಜೆಪಿ ಸರ್ಕಾರ(BJP Govt.)ದ ಕಾನೂನು ಸುವ್ಯವಸ್ಥೆಯ ಅಧೋಗತಿಗೆ ಸಾಕ್ಷಿ, ಅಖಂಡ ಶ್ರೀನಿವಾಸಮೂರ್ತಿ ದಲಿತರೆಂಬ ಕಾರಣಕ್ಕೆ ಬಿಜೆಪಿ ರಕ್ಷಣೆ ನೀಡಲು ವಿಳಂಬ ಮಾಡಿ ತನ್ನ ದಲಿತ ವಿರೋಧಿ ನೀತಿಯ ತಾಲಿಬಾನ್ ಸಂಸ್ಕೃತಿಯನ್ನು ನಿರೂಪಿಸಿದೆ’ ಎಂದು ಆರೋಪಿಸಿತ್ತು.
ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ
Akhanda Srinivas Murthy) ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಸತ್ಯ ಶೋಧನೆಗೆ ನೀವು ರಚಿಸಿದ ಸಮಿತಿ ಏನು ಮಾಡಿದೆ. ಸತ್ಯ ಶೋಧನಾ ಸಮಿತಿಯಾದರೂ ಸತ್ಯ ಹೇಳಿದೆಯೇ? ಆತ್ಮಸಾಕ್ಷಿಯೇ ಸತ್ತು ಹೋಗಿರುವ ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆಯಿದೆಯೇ? ಎಂದು ಪ್ರಶ್ನಿಸಿದೆ.
‘ಅಖಂಡ ಮನೆಗೆ ಬೆಂಕಿ ಇಟ್ಟವರು ನನ್ನ ಸಹೋದರರು, ನನ್ನ ಮೈಯಲ್ಲಿ ಹರಿಯುವುದು ಅವರದೇ ರಕ್ತ ಎಂದು ನಿಮ್ಮ ಭ್ರಷ್ಟಾಧ್ಯಕ್ಷರು ಹೇಳಿದ್ದು ನೆನಪಿದೆಯೇ ಕಾಂಗ್ರೆಸ್? ದಲಿತ ಶಾಸಕ(Dalit MLA)ನ ಪರ ನಿಲ್ಲುವುದು ಬಿಟ್ಟು, ಅವರ ವಿರುದ್ಧವೇ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದೇಕೆ? #DalitVirodhiCongress ಎನ್ನುವುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?’ ಎಂದು ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ಬಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.