ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ಹೆಚ್ಚು ಕಾಲ ಕಳೆಯುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್(Karnataka Congress) ಟೀಕಿಸಿದೆ. ಗುರುವಾರ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಿಎಂ ಬೊಮ್ಮಾಯಿ ಪದೇ ಪದೇ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವುದರಲ್ಲಿಯೇ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ ಎನ್ನುವುದು ಸ್ಪಷ್ಟ. ಇವರ ಪ್ರವಾಸ ರಾಜ್ಯದ ಹಿತಕ್ಕಲ್ಲ, ಕುರ್ಚಿ ಕಿತ್ತಾಟದ ಶಮನಕ್ಕಾಗಿ’ ಅಂತಾ ಕುಟುಕಿದೆ.
ಸಿಎಂ ಪದೇ ಪದೇ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವುದರಲ್ಲಿಯೇ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ ಎನ್ನುವುದು ಸ್ಪಷ್ಟ. ಇವರ ಪ್ರವಾಸ ರಾಜ್ಯದ ಹಿತಕ್ಕಲ್ಲ, ಕುರ್ಚಿ ಕಿತ್ತಾಟ ಶಮನಕ್ಕಾಗಿ.
ದೆಹಲಿಯಲ್ಲೇ ಹೆಚ್ಚು ಕಾಲ ಕಳೆಯುವ @BSBommai ಅವರು, ರಾಜ್ಯಕ್ಕೆ 'ಅತಿಥಿ ಸಿಎಂ'ನಂತಾಗಿದ್ದಾರೆ!#ಸೋಂಕಿತಸರ್ಕಾರ
— Karnataka Congress (@INCKarnataka) September 9, 2021
‘ಸಿಎಂ ಬೊಮ್ಮಾಯಿಯವರು ಒಂದೇ ತಿಂಗಳ ಅಧಿಕಾರಾವಧಿಯಲ್ಲಿ ಹಲವು ಬಾರಿ ದೆಹಲಿಗೆ ಹಾರಿದ್ದಾರೆ. ಹೋದಾಗಲೆಲ್ಲ ಲಸಿಕೆಗೆ, GST ಬಾಕಿಗೆ ಮನವಿ ಮಾಡಿದ್ದೇನೆ, ನೆರೆ ಪರಿಹಾರ ಕೇಳಿದ್ದೇನೆ ಎನ್ನುತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇವರ ದೆಹಲಿ ಪ್ರವಾಸ ಕುರ್ಚಿ ಸರ್ಕಸ್ ಗೆ ಹೊರತು ರಾಜ್ಯದ ಹಿತಕ್ಕಲ್ಲ ಎಂಬುದು ಸ್ಪಷ್ಟವಾಗಿದೆ’ ಅಂತಾ ಕಾಂಗ್ರೆಸ್ ಟ್ವೀಟ್(Congress Twitt) ಮಾಡಿದೆ.
ಇದನ್ನೂ ಓದಿ: Ganesh Chaturthi 2021: ಗಣೇಶ ಚತುರ್ಥಿ ಪ್ರಯುಕ್ತ 1000 ಹೆಚ್ಚುವರಿ KSRTC ಬಸ್ ಸೇವೆ
ಸಿಎಂ @BSBommai ಅವರು ಒಂದೇ ತಿಂಗಳ ಅಧಿಕಾರದ ಅವಧಿಯಲ್ಲಿ ಹಲವು ಬಾರಿ ದೆಹಲಿಗೆ ಹಾರಿದ್ದಾರೆ,
ಹೋದಾಗಲೆಲ್ಲ ಲಸಿಕೆಗೆ, GST ಬಾಕಿಗೆ ಮನವಿ ಮಾಡಿದ್ದೇನೆ, ನೆರೆ ಪರಿಹಾರ ಕೇಳಿದ್ದೇನೆ ಎನ್ನುತ್ತಾರೆ, ಆದರೆ ಫಲಿತಾಂಶ ಮಾತ್ರ ಶೂನ್ಯ.
ಇವರ ದೆಹಲಿ ಪ್ರವಾಸ ಕುರ್ಚಿ ಸರ್ಕಸ್ಸಿಗೆ ಹೊರತು ರಾಜ್ಯದ ಹಿತಕ್ಕಲ್ಲ ಎಂಬುದು ಸ್ಪಷ್ಟ!#ಸೋಂಕಿತಸರ್ಕಾರ
— Karnataka Congress (@INCKarnataka) September 8, 2021
#ಸೋಂಕಿತಸರ್ಕಾರ ಹ್ಯಾಶ್ ಟ್ಯಾಬ್ ಬಳಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘ಬಿಜೆಪಿ ಸರ್ಕಾರ(BJP Govt.) ವಿದ್ಯಾರ್ಥಿಗಳ ಪಾಲಿನ ಸ್ವೆಟರ್‌ಗಳನ್ನೂ ಬಿಡಲಿಲ್ಲ. ಬಡಮಕ್ಕಳ ಮೊಟ್ಟೆಯನ್ನೂ ಬಿಡಲಿಲ್ಲ. ಈಗ ರೈತರನ್ನೂ ಬಿಡದೆ ಲೂಟಿಗಿಳಿದಿದೆ, ಕೃಷಿ ಯಂತ್ರೋಪಕರಣ ಖರೀದಿ ಹಗರಣ ನಡೆದಿದ್ದರೂ ಸಿಎಂ ಬೊಮ್ಮಾಯಿಯವರು ಏನೂ ನಡೆದೇ ಇಲ್ಲವೆಂಬಂತೆ ವರ್ತಿಸಿ ಭ್ರಷ್ಟರಿಗೆ ಬೆಂಬಲ ಸೂಚಿಸಿದ್ದಾರೆ. ಭ್ರಷ್ಟಾಚಾರವೇ ಬಿಜೆಪಿ ಮನೆದೇವ್ರು!’ ಅಂತಾ ಟೀಕಿಸಿದೆ.
ಇದನ್ನೂ ಓದಿ: Deadly Virus: ನಿಫಾ ವೈರಸ್ ವಕ್ಕರಿಸಿದರೆ ಪ್ರಾಣಕ್ಕೆ ಕುತ್ತು ಗ್ಯಾರಂಟಿ..!
'@BSBommai ಅವರೇ ನಿಮ್ಮದು ಭ್ರಷ್ಟರೇ ತುಂಬಿದ ಕಳಂಕಿತ ಸಂಪುಟವಾಗಿದೆ,
●ಸ್ವೆಟರ್ ಹಗರಣದಲ್ಲಿ @RAshokaBJP ಅವರ ಕೈವಾಡವಿದೆ,
●@ShashikalaJolleಅವರ ಮೊಟ್ಟೆ ಹಗರಣವಿದೆ,
●@bcpatilkourava ಅವರದ್ದು ಕಿಕ್ ಬ್ಯಾಕ್ ಹಗರಣ.ಕಿಕ್ ಬ್ಯಾಕ್ ಪಡೆದವರನ್ನ ಕಿಕ್ ಔಟ್ ಮಾಡುವುದ ಬಿಟ್ಟು ಭ್ರಷ್ಟಾಚಾರಕ್ಕೆ ಮೌನ ಸಮ್ಮತಿ ನೀಡುತ್ತಿದ್ದೀರಾ?
— Karnataka Congress (@INCKarnataka) September 8, 2021
‘ಬಸವರಾಜ್ ಬೊಮ್ಮಾಯಿ(Basavaraj Bommai)ಯವರೇ ನಿಮ್ಮದು ಭ್ರಷ್ಟರೇ ತುಂಬಿದ ಕಳಂಕಿತ ಸಂಪುಟವಾಗಿದೆ. ಸ್ವೆಟರ್ ಹಗರಣದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರ ಕೈವಾಡವಿದೆ, ಸಚಿವೆ ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣವಿದೆ, ಕೃಷಿ ಸಚಿವ ಬಿ.ಸಿ.ಪಾಟೀಲ್(BC Patil) ಅವರದ್ದು ಕಿಕ್ ಬ್ಯಾಕ್ ಹಗರಣವಿದೆ. ಕಿಕ್ ಬ್ಯಾಕ್ ಪಡೆದವರನ್ನು ಕಿಕ್ ಔಟ್ ಮಾಡುವುದ ಬಿಟ್ಟು ಭ್ರಷ್ಟಾಚಾರಕ್ಕೆ ಮೌನ ಸಮ್ಮತಿ ನೀಡುತ್ತಿದ್ದೀರಾ? ಭ್ರಷ್ಟಾಚಾರದ ಸೋಂಕು ತಗುಲಿದ ಬಿಜೆಪಿ ಸರ್ಕಾರದ ಪ್ರತಿ ಇಲಾಖೆಯಲ್ಲಿಯೂ ಲೂಟಿ ಎಗ್ಗಿಲ್ಲದೆ ಸಾಗಿದೆ. ಇವರ ತನಿಖೆ ನಡೆಸದೆ ಹಗರಣ ಮುಚ್ಚಿ ಹಾಕಲಾಗುತ್ತಿದೆ’ ಅಂತಾ ಕಾಂಗ್ರೆಸ್ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.