ಮೊಟ್ಟೆ ಕೊಡುವುದಿರಲಿ ಈ ಸರ್ಕಾರ ಬಿಸಿಯೂಟಕ್ಕೆ ಸರಿಯಾದ ದಿನಸಿ ಒದಗಿಸುತ್ತಿದೆಯೇ?-ಡಿಕೆಶಿ ಪ್ರಶ್ನೆ
ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಊಟಕ್ಕೆ ಮೊಟ್ಟೆಯನ್ನು ನೀಡುವ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈಗ ಈ ಸರ್ಕಾರಕ್ಕೆ ಮೊಟ್ಟೆ ಕೊಡುವುದು ಒಂದೆಡೆ ಇರಲಿ ಬಿಸಿಯೂಟಕ್ಕೆ ಸರಿಯಾಗಿ ದಿನಸಿಯಾದರೂ ನೀಡುತ್ತಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಊಟಕ್ಕೆ ಮೊಟ್ಟೆಯನ್ನು ನೀಡುವ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈಗ ಈ ಸರ್ಕಾರಕ್ಕೆ ಮೊಟ್ಟೆ ಕೊಡುವುದು ಒಂದೆಡೆ ಇರಲಿ ಬಿಸಿಯೂಟಕ್ಕೆ ಸರಿಯಾಗಿ ದಿನಸಿಯಾದರೂ ನೀಡುತ್ತಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Viral Video: ಸಮುದ್ರದಲ್ಲಿ ದೈತ್ಯ ಹಾವಿನ ಜಲಕ್ರೀಡೆ, ನೋಡಿ ವೈರಲ್ ವಿಡಿಯೋ
ಬಿಸಿಯೂಟ ಯೋಜನೆ ಶ್ರೀಮತಿ ಇಂದಿರಾಗಾಂಧಿ ಅವರ ಕನಸಿನ ಕೂಸು. ಶ್ರೀ ಬಂಗಾರಪ್ಪನವರು ರಾಜ್ಯದಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು.ಈ ಯೋಜನೆಯಡಿ ಮಕ್ಕಳಿಗೆ ಮೊಟ್ಟೆ ಕೊಡಬೇಕೇ ಬೇಡವೇ ಎನ್ನುವ ಕುರಿತು ಪರ- ವಿರೋಧ ವ್ಯಕ್ತವಾಗುತ್ತಿದೆ.ಮೊಟ್ಟೆ ಕೊಡುವುದಿರಲಿ ಈ ಸರ್ಕಾರ ಬಿಸಿಯೂಟಕ್ಕೆ ಸರಿಯಾದ ದಿನಸಿ ಒದಗಿಸುತ್ತಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:"ನಿಮಗೆ 24 ಗಂಟೆಗಳನ್ನು ನೀಡುತ್ತಿದ್ದೇವೆ": ದೆಹಲಿ ಮಾಲಿನ್ಯದ ಕುರಿತು ಸರ್ಕಾರಕ್ಕೆ ಸುಪ್ರೀಂ ಕಠಿಣ ಎಚ್ಚರಿಕೆ
ಶಿಕ್ಷಕರಿಗೆ ಮಕ್ಕಳಿಗೆ ಪಾಠ ಹೇಳುವುದರ ಜೊತೆಗೆ ದಿನಸಿ ಖರೀದಿಯ ಜವಾಬ್ದಾರಿ ದೊಡ್ಡ ತಲೆನೋವಾಗಿದೆ. ಸಮಯಕ್ಕೆ ಹಣ ಬಿಡುಗಡೆಯಾಗದೆ ಶಿಕ್ಷಕರು ಸಾಲ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಅಪೌಷ್ಟಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಮಕ್ಕಳಿಗೆ ಸರಿಯಾಗಿ ಬೇಳೆ, ಎಣ್ಣೆ, ತರಕಾರಿ ನೀಡಲು ಹೆಣಗಾಡುತ್ತಿರುವ ಈ ಸರ್ಕಾರ ಮೊಟ್ಟೆ ಕೊಡುವುದು ನಿಜವೇ? ಎಂದು ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.