January 6: ಸರ್ಕಾರಕ್ಕೆ `ಬಿಗ್ ಶಾಕ್` ನೀಡಿದ ಖಾಸಗಿ ಶಾಲಾ ಶಿಕ್ಷಕರು! ಜ.6ರಂದು ಸ್ಕೂಲ್ ಬಂದ್..!?
ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ- ರುಪ್ಸಾ (RUPSA) ಇದರ ಅಡಿ ಬರುವ ಎಲ್ಲಾ ಶಾಲೆಗಳನ್ನು ಬಂದರ್ ಮಾಡುವುದಾಗಿ ರುಪ್ಸಾ ಹೇಳಿದೆ.
ಬೆಂಗಳೂರು: ಕರೊನಾ ಭೀತಿ, ಹೊಸ ಕರೊನಾ ಅಲೆ ಇವೆಲ್ಲವುಗಳ ನಡುವೆಯೇ ರಾಜ್ಯಾದ್ಯಂತ 10 ಮತ್ತು 12ನೇ ತರಗತಿಗಳು ಶುರುವಾಗಿದೆ. ತರಗತಿಗಳು ಆರಂಭವಾಗಿರುವ ಬೆನ್ನಲ್ಲೇ ಇದೀಗ ಖಾಸಗಿ ಶಾಲೆಗಳ ಶಿಕ್ಷಕರು ಸರ್ಕಾರಕ್ಕೆ ಶಾಕ್ ನೀಡಿದ್ದಾರೆ. ಇದೇ 6ರ (ಬುಧವಾರ) ಶಾಲೆ ಕ್ಲೋಸ್ ಮಾಡುವುದಾಗಿ ಹೇಳಿದ್ದಾರೆ.
ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ- ರುಪ್ಸಾ (RUPSA) ಇದರ ಅಡಿ ಬರುವ ಎಲ್ಲಾ ಶಾಲೆಗಳನ್ನು ಬಂದರ್ ಮಾಡುವುದಾಗಿ ರುಪ್ಸಾ ಹೇಳಿದೆ.
B.S.Yediyurappa: ಮುಂದಿನ ಚುನಾವಣೆಯಲ್ಲಿ ‘ಮಿಷನ್ 140’ ಹೊಸ ಟಾರ್ಗೆಟ್ ಮೇಲೆ ಬಿಎಸ್‌ವೈ ಕಣ್ಣು!
ಹೀಗೆ ಆದಲ್ಲಿ ರುಪ್ಸಾ ಅಡಿ ಬರುವ ಈ 12,800 ಶಾಲೆಗಳು ಪುನಃ ಕ್ಲೋಸ್ ಆಗಲಿವೆ. ಅಷ್ಟಕ್ಕೂ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ, ಒಕ್ಕೂಟದ 15 ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲವಂತೆ. ಕಳೆದ ಕೆಲ ದಿನಗಳ ಹಿಂದೆ ತಾವು ಆನ್ಲೈನ್ ಕ್ಲಾಸ್ ಬಂದ್ ಮಾಡುವಾಗ ಹೇಳಿದ ಸಂದರ್ಭದಲ್ಲಿ, ಮೂರು ದಿನಗಳಲ್ಲಿ ತಮ್ಮ 15 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದುವರೆಗೂ ಈಡೇರಿಸಿಲ್ಲ ಎನ್ನುವುದು ಸಂಘದ ಆರೋಪ.
Coronavirus: ರಾಜ್ಯದಲ್ಲಿ ಶಾಲೆ ಆರಂಭವಾದ 'ಎರಡೇ ದಿನದದಲ್ಲಿ 18 ಶಿಕ್ಷಕರಿಗೆ ಕೊರೊನಾ ಸೋಂಕು'..!
ಈವರೆಗೆ ಯಾವುದೇ ಭರವಸೆಯನ್ನು ಈಡೇರಿಸದ ಕಾರಣ ಅನಿವಾರ್ಯವಾಗಿ ನಾವು ಮತ್ತೆ ಪ್ರತಿಭಟನೆ ಮಾಡಬೇಕಾಗಿದೆ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ. ಆಗ ಭರವಸೆ ಈಡೇರಿಸುವುದಾಗಿ ಹೇಳಿದ್ದರಿಂದ ನಮ್ಮ ಪ್ರತಿಭಟನೆ ವಾಪಸ್ ಪಡೆದಿದ್ದೆವು. ಈಗ ಸರ್ಕಾರ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ ಎಂದು ಹೇಳಿದರು.
ಪಕ್ಷ ಸಂಘಟನೆಗೆ ಒತ್ತು : ನಾಲ್ಕು ವಿಭಾಗಗಳಲ್ಲಿ ಸಭೆ ನಡೆಸಲು ಕಾಂಗ್ರೆಸ್ ನಿರ್ಧಾರ
ಈ ಒಕ್ಕೂಟ ಕೆಲವು ಬೇಡಿಕೆಗಳ ಕುರಿತು ಅವರು ನೀಡಿರುವ ಮಾಹಿತಿ ಎಂದರೆ:
* ಸಾಲ ಪಡೆದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇವೆ. ಸಾಲದ ಇಎಂಐಅನ್ನು ಕನಿಷ್ಠ ಒಂದು ವರ್ಷದವರೆಗೆ ಮುಂದೂಡಲು ಬ್ಯಾಂಕ್‍ಗಳಿಗೆ ಸರ್ಕಾರ ಸೂಚಿಸಬೇಕು.
* 1995ರಿಂದ 2000ದ ಅವಯಲ್ಲಿ ಪ್ರಾರಂಭವಾದ ಅನುದಾನ ರಹಿತ ಶಾಲೆಗಳನ್ನು ಅನುದಾನಿತ ಶಾಲೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು.
Cabinet Expansion: ಬಿಎಸ್ ವೈ ಸಚಿವ ಸಂಪುಟ ವಿಸ್ತರಣೆ: ಸಂಕ್ರಾಂತಿ ಮುಗಿದ ಬಳಿಕವೇ ನಿರ್ಧಾರ?
* ಮೂಲಭೂತ ಸೌಕರ್ಯ ಕೊರತೆ ನೆಪದಲ್ಲಿ ಮುಚ್ಚಲು ಹೊರಟಿರುವ ಬೀದರ್ ಜಿಲ್ಲೆಯ 124 ಶಾಲೆಗಳನ್ನು ಮುಚ್ಚಬಾರದು.
* ಖಾಸಗಿ ಶಿಕ್ಷಣ ಸಂಸ್ಥೆಗಳ ನವೀಕರಣವನ್ನು ಐಸಿಎಸ್‍ಸಿ ಮತ್ತು ಸಿಬಿಎಸ್‍ಸಿ ಶಾಲೆಗಳ ರೀತಿಯಲ್ಲಿ ತಾಲ್ಲೂಕು ಹಂತದಲ್ಲಿ ಅದಾಲತ್ ನಡೆಸಿ ನವೀಕರಿಸಿ ಪ್ರಮಾಣ ಪತ್ರ ನೀಡಬೇಕು.
ಗಣರಾಜ್ಯೋತ್ಸವ: ಜನವರಿ ಮಾಹೆಯಲ್ಲಿ ಶೇ.50 ರಿಯಾಯಿತಿ ದರದಲ್ಲಿ ಪುಸ್ತಕ
* ಗ್ರಾಮೀಣ ಹಾಗೂ ಸಣ್ಣ ಬಜೆಟ್ ಶಾಲೆಗಳ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಅಭಿವೃದ್ಧಿ ಪ್ರಾಕಾರ ಸ್ಥಾಪನೆ ಮಾಡಬೇಕು.
* ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ಖಾಸಗಿ ಶಾಲಾ ನೌಕರರಿಗೂ ಸಿಗುವಂತೆ ನೋಡಿಕೊಳ್ಳುವುದು, ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗಲು ಪಠ್ಯವನ್ನು ಕಡಿತಗೊಳಿಸಿ ತಕ್ಷಣವೇ ಪಠ್ಯಕ್ರಮ ಹಾಗೂ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಬೇಕು ಇತ್ಯಾದಿ.
ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಪ್ರವೇಶ: ಅರ್ಜಿ ಆಹ್ವಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.