ಪಕ್ಷ ಸಂಘಟನೆಗೆ ಒತ್ತು : ನಾಲ್ಕು ವಿಭಾಗಗಳಲ್ಲಿ ಸಭೆ ನಡೆಸಲು ಕಾಂಗ್ರೆಸ್ ನಿರ್ಧಾರ

ಪಕ್ಷ ಸಂಘಟನೆಗಾಗಿ ಸಂಕಲ್ಪ ಸಮಾವೇಶ ಆಯೋಜನೆಗೆ ಕಾಂಗ್ರೆಸ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಬೃಹತ್ ಸಮಾವೇಶ ನಡೆಸಲು ಪಕ್ಷ ತೀರ್ಮಾನಿಸಿದೆ. 

Written by - Zee Kannada News Desk | Last Updated : Jan 3, 2021, 01:00 PM IST
  • ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಗೆ ಡಿಕೆಶಿ ನಿರ್ಧಾರ
  • ನಾಲ್ಕು ವಿಭಾಗಗಳಲ್ಲಿ ಸಮಾವೇಶ ನಡೆಸಲು ತೀರ್ಮಾನ
  • ತಳಮಟ್ಟದಲ್ಲಿ ಪಕ್ಷ ಸಂಘನೆಗೆ ಒತ್ತು
ಪಕ್ಷ ಸಂಘಟನೆಗೆ ಒತ್ತು : ನಾಲ್ಕು ವಿಭಾಗಗಳಲ್ಲಿ ಸಭೆ ನಡೆಸಲು ಕಾಂಗ್ರೆಸ್ ನಿರ್ಧಾರ title=
ಪಕ್ಷ ಸಂಘಟನೆಗೆ ನಾಲ್ಕು ವಿಭಾಗಗಳಲ್ಲಿ ಸಭೆಗೆ ಕಾಂಗ್ರೆಸ್ ನಿರ್ಧಾರ (file photoe)

ಬೆಂಗಳೂರು : ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ (Congress) ತಯಾರಿ ಆರಂಭಿಸಿದೆ. ಪಕ್ಷವನ್ನು ತಳಮಟ್ಟದಲ್ಲಿ ಸಂಘಟನೆ ಮಾಡುವ ಕಾರ್ಯದಲ್ಲಿ ತೊಡಗಿದೆ. ಪಕ್ಷ ಸಂಘಟನೆಗಾಗಿ ಸಂಕಲ್ಪ ಸಮಾವೇಶ ಆಯೋಜನೆಗೆ ಕಾಂಗ್ರೆಸ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಬೃಹತ್ ಸಮಾವೇಶ ನಡೆಸಲು ಪಕ್ಷ ತೀರ್ಮಾನಿಸಿದೆ. 
ರಾಜ್ಯದಲ್ಲಿಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದೆ.  ಬೆಂಗಳೂರು, (Bengaluru) ಮೈಸೂರು, (Mysuru) ಬೆಳಗಾವಿ, (Belagavi) ಕಲಬುರಗಿ ವಿಭಾಗದಲ್ಲಿ ಸಮಾವೇಶ ನಡೆಸಲಿದೆ.

ರಾಜ್ಯದ ನಾಲ್ಕು ವಿಭಾಗಗಳಲ್ಲಿ ಪಕ್ಷದ ಸಭೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (D K Shivakumar) ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸಂಘಟನೆಗೆ ಸಹಾಯವಾಗುವಂತೆ ಈ ವಿಭಾಗ ಮಟ್ಟದ ಸಮಾವೇಶಗಳಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗುವುದು.

ಎಲ್ಲಿ ಮತ್ತು ಯಾವಾಗ ನಡೆಯಲಿದೆ ಸಮಾವೇಶ :
ಜ. ೬ ರಂದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಮೈಸೂರು ವಿಭಾಗದ ಸಮಾವೇಶ ನಡೆಯಲಿದೆ. 
ಜ.೮ ರಂದು ಬಿಡದಿ ಬಳಿ ಬೆಂಗಳೂರು ವಿಭಾಗದ ಕಾರ್ಯಕ್ರಮ ಆಯೋಜಿಸಲಾಗಿದೆ
 ಜ.೧೧ ರಂದು ಹುಬ್ಬಳ್ಳಿಯ ಕಾಟನ್ ಕೌಂಟಿ ರೆಸಾರ್ಟ್ ನಲ್ಲಿ ಬೆಳಗಾವಿ ವಿಭಾಗದ ಸಮಾವೇಶ ನಡೆಯಲಿದೆ.
ಜ.೧೮ ರಂದು ಕಲಬುರ್ಗಿಯಲ್ಲಿ ಕಲಬುರ್ಗಿ ವಿಭಾಗದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ALSO READ : ರಾಜ್ಯದಲ್ಲಿ ವರ್ಷವಿಡಿ 24x7 ಅಂಗಡಿ ಮುಗ್ಗಟ್ಟು ತೆರೆಯಲು ಅವಕಾಶ

ಬೂತ್ ಮಟ್ಟದ ಸಮಿತಿಗಳ ರಚನೆ, ಕಾರ್ಯಕರ್ತರ ತರಬೇತಿ ಶಿಬಿರಗಳ ರಚನೆ, ಸ್ಥಳೀಯ ಮಟ್ಟದಲ್ಲಿ ಸಮಾವೇಶಗಳನ್ನ ಹಮ್ಮಿಕೊಳ್ಳುವುದು, ಹೆಚ್ಚು ಹೆಚ್ಚು ಕಾರ್ಯಕರ್ತರ ಪಡೆಯನ್ನ ಕಟ್ಟುವ ಬಗ್ಗೆ ಈ ಸಮಾವೇಶಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು. 
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, (Siddaramaiah) ಎಸ್ ಆ ರ್ ಪಾಟೀಲ್, ( S R Patil) ಈಶ್ವರ್ ಖಂಡ್ರೆ ಸೇರಿದಂತೆ ಪಕ್ಷದ ಎಲ್ಲಾ ಹಿರಿಯ ನಾಯಕರು ಈ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರತಿ ಜಿಲ್ಲೆ ಮತ್ತು ಬ್ಲಾಕ್ ಕಾಂಗ್ರೆಸ್ (Congress) ಸಮಿತಿ ಅಧ್ಯಕ್ಷರು, ಸಂಸದರು, ಶಾಸಕರು, ಕೆಪಿಸಿಸಿ ಮಾಜಿ ಪದಾಧಿಕಾರಿಗಳು ಕೂಡಾ ಈ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News