ಬೆಂಗಳೂರು :  ಕೋಲ್ಕತ್ತಾ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ವೈದ್ಯೆಯ ಭೀಕರ ಕೊಲೆ ಮಹಿಳೆಯರ ರಕ್ಷಣೆಯ ಬಗ್ಗೆ ಪ್ರಶ್ನೆ ಹುಟ್ಟಿ ಹಾಕಿದೆ. ಕೆಲಸ ಮಾಡುವ ಜಾಗದಲ್ಲಿರುವ ಧುರಳರಿಂದ, ಹೊರಗಿನ ಕಟುಕರಿಂದ ರಕ್ಷಣೆ ಎಲ್ಲಿ ಎಂಬ ಆತಂಕದ ಮಧ್ಯೆ ಬೆಂಗಳೂರಿನ ಸರ್ಕಾರಿ ಸಾಮ್ಯದ ಆಸ್ಪತ್ರೆ ಜಯದೇವ, ತನ್ನ ಸಿಬ್ಬಂದಿಗಳಿಗಾಗಿ ಮೊದಲ ಸೇಫ್ಟಿ ಆಪ್ ಬಿಡುಗಡೆಗೊಳಿಸಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಗಳ ರಕ್ಷಣೆಗಾಗಿ ಸುಹೃದ್ ಆಪ್ ಬಿಡುಡಗೆಗೊಳಿಸಿದೆ. ಸುಹೃದ್ ಎಂದರೆ ಒಳ್ಳೆಯ ಹೃದಯ ಎಂದರ್ಥ. ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿಗಳು ಯಾವುದೇ ರೀತಿಯ ಕಷ್ಟಕ್ಕೆ ಸಿಲುಕಿದಾಗ ಒಬ್ಬೊರಿಗೊಬ್ಬರು ಹೃದಯವಂತಿಕೆಯಿಂದ ನೆರವಾಗಲಿ ಎಂಬ ಉದ್ದೇಶದೊಂದಿಗೆ ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೇಲೆ ಲೈಗಿಂಕ ಕಿರುಕುಳ, ಹಿಂಸಾಚಾರ ಸೇರಿದಂತೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ಪ್ರಥಮ ಬಾರಿಗೆ ಈ ಕ್ರಮ ಕೈಗೊಳ್ಳಲಾಗಿದೆ.


ಇದನ್ನೂ ಓದಿ : ರಾಜ್ಯದ ಜನರಿಗೆ ತೀರ್ಥ ಕ್ಷೇತ್ರಗಳ ದರ್ಶನ ಭಾಗ್ಯ :ಹೊಸ ವರ್ಷಕ್ಕೆ ರಾಜ್ಯದ ಭಕ್ತಾದಿಗಳಿಗೆ ಶುಭಸುದ್ದಿ ನೀಡಿದ ಕಾಂಗ್ರೆಸ್ ಸರ್ಕಾರ


ಹೇಗೆ ವರ್ಕ್ ಆಗುತ್ತೆ ಸುಹೃದ್ ಆಪ್?
- ಸುಹೃದ್ ಆಪ್ ಅನ್ನು ಸಿಬ್ಬಂದಿಗಳು ತಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು
- ಆಪ್ ನಲ್ಲಿ ಎಸ್ಓಎಸ್ ಅಲರ್ಟ್ ಮೂಲಕ ರಕ್ಷಣೆ ಸಿಗುತ್ತದೆ
- ಮಹಿಳೆಯರು ಸುರಕ್ಷತೆ, ರಕ್ಷಣೆಗೆ ಆಪ್ ಒತ್ತುವ ಮೂಲಕ ಸಹಾಯ ಪಡೆಯಬಹುದು
- ಎಸ್ಓಎಸ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಬಹುದು
- ಶೋಷಣೆಗೆ ಒಳಪಟ್ಟ ಲೋಕೇಷನ್ ಶೇರ್ ಮಾಡಬಹುದು
- ಅಲರ್ಟ್ ಮೇಸೆಜ್ ಎಲ್ಲಾ ಸಿಬ್ಬಂದಿಗಳಿಗೆ ತಲಪುತ್ತದೆ
- ಜಿಪಿಎಸ್ ಮಾನಿಟರಿಂಗ್ ಇರುತ್ತದೆ
- ಗಾಬರಿಯಾದರೆ ಜಸ್ಟ್ 3 ಸಲ ಮೊಬೈಲ್ ಶೇಕ್ ಮಾಡಿದರೆ ಸಾಕು ಎಲ್ಲರಿಗೂ ಅಲರ್ಟ್ ಮೆಸೇಜ್ ತಲಪುತ್ತದೆ
- ಆಸ್ಪತ್ರೆಯಲ್ಲಿ ನಡೆಯುವ ಕಿರುಕುಳದ ಬಗ್ಗೆ ಅನಾಮಧೇಯವಾಗಿ ದೂರು ಸಲ್ಲಿಸಬಹುದು.


ಜಯದೇವ ಆಸ್ಪತ್ರೆಯ ಲೈಗಿಂಕ ಕಿರುಕುಳ ತಡೆಗಟ್ಟುವಿಕೆ ತಂಡದ ವತಿಯಿಂದ ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಇದರ ನೇತೃತ್ವವನ್ನು ಪ್ರೊ.ಜಯಶ್ರೀ ಖರ್ಗೆ ಅವರು ವಹಿಸಿದ್ದಾರೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಒಟ್ಟಿನಲ್ಲಿ ಸಿಬ್ಬಂದಿಗಳ ಸುರಕ್ಷತೆಗಾಗಿ ಜಯದೇವ ಆಸ್ಪತ್ರೆ ಹೊಸ ಹೆಜ್ಜೆ ಇಟ್ಟಿದೆ.  ಇದೇ ಮಾದರಿಯಲ್ಲಿ ಎಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಮ ಕೈಗೊಂಡರೆ ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುವ ಹಲ್ಲೆ, ಮಹಿಳೆಯರ ಮೇಲಿನ ಲೈಗಿಂಕ ದೌರ್ಜನ್ಯವನ್ನು ತಡೆಗಟ್ಟಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.